ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, 'ಕಥನಾರ್ - ದಿ ವೈಲ್ಡ್ ಸೋರ್ಸೆರರ್' ಎಂಬ ಮಲಯಾಳಂ ಚಿತ್ರದ ಮೂಲಕ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಹಾರರ್-ಫ್ಯಾಂಟಸಿ ಚಿತ್ರದ ಟ್ರೈಲರ್, ಅನುಷ್ಕಾ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದ್ದು, ಚಿತ್ರವು 15 ಭಾಷೆಗಳಲ್ಲಿ ತೆರೆಕಾಣಲಿದೆ.

ಬೆಂಗಳೂರು: ಟಾಲಿವುಡ್‌​​ನ ದೇವಸೇನಾ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಅನುಷ್ಕಾ ಶೆಟ್ಟಿ ಉದ್ಯಮಿಯೊಬ್ಬರ ಜೊತೆ ಸಂಸಾರ ಶುರು ಮಾಡುತ್ತಾರೆ ಅಂತೆಲ್ಲಾ ಟಾಕ್ ಆಗಿತ್ತು. ಆದ್ರೆ ಆ ಮ್ಯಾರೇಜ್ ಗುಲ್ಲಿನ ಮಧ್ಯೆ ಈಗ ಅನುಷ್ಕಾ ಮಲೆಯಾಳಂ ಜಗತ್ತನ್ನ ಆವರಿಸಿಕೊಂಡಿದ್ದಾರೆ. ಅದು ಯಾಕೆ ಅಂತ ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಥನಾರ್ ಮೂಲಕ ಬಂದ ಅರುಂದತಿ

ತೆಲುಗು ಚಿತ್ರರಂಗದ ದೇವಸೇನಾ, ಅರಂದತಿ ಅನುಷ್ಕಾ ಶೆಟ್ಟಿ ಮಲಯಾಳಂನಲ್ಲಿ ನಟನೆಯ ಮೊದಲ ಸಿನಿಮಾ ಟ್ರೇಲರ್​ ಬಂದಿದೆ. ಆ ಚಿತ್ರವೇ 'ಕಥನರ್ - ದಿ ವೈಲ್ಡ್ ಸೋರ್ಸೆರರ್' ಜಯಸೂರ್ಯ ನಾಯಕನಾಗಿ ನಟಿಸಿರೋ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಮೇಲೆ ಎಲ್ಲರ ಕಣ್ಣಿತ್ತು. ಯಾಕಂದ್ರೆ ಈ ದೇವಸೇನಾ ಹೇಗೆ ಕಾಣಿಸಿಕೊಳ್ಳಬಹುದು ಅನ್ನೋ ಕುತೂಲಹ. ಈಗ ಟ್ರೈಲರ್‌ನ ಕೆಲವೊಂದು ದೃಶ್ಯಗಳಲ್ಲಿ ಅನುಷ್ಕಾ ಶೆಟ್ಟಿ ಲುಕ್ ರಿವಿಲ್ ಆಗಿದೆ.

ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದ ದೂರ ಉಳಿಯೋ ಆಲೋಚನೆಯಲ್ಲಿ ಇದ್ದಂತಿದೆ. ಯಾಕಂದ್ರೆ ಅನುಷ್ಕಾ ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಹೆಚ್ಚು. ಈಗ ಎರಡು ವರ್ಷಗಳ ನಂತರ ಈ ಅರುಂದತಿ ಮಲೆಯಾಳಂ ಸಿನಿಮಾ ರಂಗದಿಂದ ಮತ್ತೆ ಚಾಲ್ತಿಗೆ ಬಂದಿದ್ದಾರೆ. 'ಕಥನರ್ ಟ್ರೈಲರ್​ ನೋಡಿದ್ರೆ ಅನುಷ್ಕಾ ಮತ್ತೆ ಮೋಡಿ ಮಾಡೋದು ಗ್ಯಾರಂಟಿ ಅನ್ನಿಸುತ್ತೆ.

ಪುರಾಣ ಮತ್ತು ತಂತ್ರಜ್ಞಾನದ ಸಂಗಮ ಕಥನಾರ್ ಸಿನಿಮಾ..!

ಕಥನಾರ್​ ಸಿನಿಮಾದ ಟ್ರೈಲರ್​​​ ದೃಶ್ಯ ವೈಭವ ತೋರಿಸಿದೆ. ನಿರ್ದೇಶಕ ರೋಜಿನ ಥಾಮಸ್ ಇಲ್ಲಿ ಹಾರರ್ ಮತ್ತು ಫ್ಯಾಂಟಸಿ ರೂಪದಲ್ಲಿ ಸಿನಿಮಾ ಸಿದ್ಧಪಡಿಸಿದ್ದಾರೆ. ಹಾಲಿವುಡ್ ಶೈಲಿಯ ಫ್ಯಾಂಟಸಿ ಲೋಕವನ್ನು ನೆನಪಿಸುವಂತಿದೆ ಈ ಟ್ರೈಲರ್. ಈ ಚಿತ್ರ 15 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.