- Home
- Entertainment
- Cine World
- ತನ್ನ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ OSD ಹುದ್ದೆ ಕೊಟ್ಟ ತಮಿಳುನಾಡು ಸಿಎಂ Thalapathy Vijay
ತನ್ನ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ OSD ಹುದ್ದೆ ಕೊಟ್ಟ ತಮಿಳುನಾಡು ಸಿಎಂ Thalapathy Vijay
Actor Thalapathy Vijay: ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಮಧ್ಯಾಹ್ನ ಅಧಿಕಾರ ಸ್ವೀಕಾರ ಮಾಡಬೇಕಿತ್ತು. ಆದರೆ ಜ್ಯೋತಿಷಿ ಸಲಹೆ ಮೇರೆಗೆ ಬೆಳಿಗ್ಗೆ ಪ್ರಮಾಣವಚನ ಕಾರ್ಯಕ್ರಮ ನಡೆದಿತ್ತು. ಈಗ ಜ್ಯೋತಿಷಿಗೆ ಉತ್ತಮ ಹುದ್ದೆ ನೀಡಿದ್ದಾರೆ.

OSD ಅಧಿಕಾರಿ
ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ (ರಾಜಕೀಯ) ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಕ ಮಾಡುವ ಬಗ್ಗೆ ಆದೇಶ ಹೊರಡಿಸಲಾಗಿದೆ.
ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯವರ (ರಾಜಕೀಯ) ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಿಸಲಾಗಿದೆ.

ಜಾತಕ ಸಖತ್ ಆಗಿದೆ
ದಳಪತಿ ವಿಜಯ್ ಅವರ ಪರ್ಸನಲ್ ಜ್ಯೋತಿಷಿ ಅವರು ಈ ಹಿಂದೆಯೇ ದಳಪತಿ ಜಾತಕ ಸಖತ್ ಆಗಿದೆ ಎಂದು ಹೇಳಿದ್ದರು. ಇದೊಂದು ಥರ ಸುನಾಮಿ ಜಾತಕ ಎಂದು ಹೇಳಿದ್ದರು.
ರಾಧನ್ ಪಂಡಿತ್ ಯಾರು?
ರಾಧನ್ ಪಂಡಿತ್ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ 40 ವರ್ಷಗಳ ಅನುಭವ ಹೊಂದಿದ್ದಾರೆ. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು, ರಾಜಕೀಯದವರಿಗೆ ಕೂಡ ಜ್ಯೋತಿಷ್ಯ ಹೇಳಿದ್ದರು.
ಆರು ತಿಂಗಳಿಗೆ ಸರ್ಕಾರ ಪತನವೇ?
ಬೇರೆ ಪಕ್ಷದ ಬೆಂಬಲ ಪಡೆದು, ವಿಜಯ್ ಅವರು ಸಿಎಂ ಆಗಿದ್ದಾರೆ. ಜ್ಯೋತಿಷಿ ವೇಣು ಸ್ವಾಮಿ ಅವರು ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಸರ್ಕಾರ ಬೀಳಲಿದೆ, ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

