ಗ್ರಾಂಡ್ 7 ಸ್ಪೋರ್ಟ್ಸ್ ಮೀಟ್‌ನ ಅಧ್ಯಕ್ಷತೆ ವಹಿಸಿದ್ದ ಚೆನ್ನೈಸ್ ಅಮಿರ್ತಾ ಗ್ರೂಪ್‌ನ ಅಧ್ಯಕ್ಷರಾದ ಆರ್.ಬೂಮೀನಾಥನ್ ಅವರು ಮಾತಾಡಿ ದಿನೇಶ್ ಕಾರ್ತಿಕ್ ಈ ದಾಖಲೆಯು ವಿದ್ಯಾರ್ಥಿಗಳಲ್ಲಿ ದೃಢತೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೌಲ್ಯಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದಿದ್ದಾರೆ. ಏನಿದು ಜರ್ಸಿ ನಂ.19 ಸ್ಪೆಷಾಲಿಟಿ? ನೋಡಿ..
ದಿನೇಶ್ ಕಾರ್ತಿಕ್ ಜರ್ಸಿ 19 ಸ್ಟೋರಿ ನೋಡಿ!
ಇಂಡಿಯನ್ ಕ್ರಿಕೆಟ್ ಟೀಮ್‌ನಲ್ಲಿ ಬ್ಯಾಟ್ಸ್ಮ್ಯಾನ್, ವಿಕೆಟ್ ಕೀಪರ್ ಹಾಗೂ ಫಿನಿಶರ್ ಆಗಿದ್ದ ದಿನೇಶ್ ಕಾರ್ತಿಕ್ (Dinesh Karthik) ಅವರ ಐಕಾನಿಕ್ ಜರ್ಸಿ ನಂ.19 (DK jersey 19 significance), ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದು ಇತಿಹಾಸ ನಿರ್ಮಿಸಿದೆ. ಚೆನ್ನೈಸ್ ಅಮಿರ್ತಾ ಗ್ರೂಪ್‌ನ ಏಳನೇ ವರ್ಷದ ಕ್ರೀಡಾಕೂಟ, ನೆಹರೂ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನಡೆದಿದ್ದು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅತಿಥಿಯಾಗಿ ಬಂದಿದ್ರು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಚೆನ್ನೈಸ್ ಅಮಿರ್ತಾ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಏವಿಯೇಷನ್ ಕಾಲೇಜಿನ ೩ಸಾವಿರ ವಿದ್ಯಾರ್ಥಿಗಳು ಸೇರಿ "ಸಿಎ♡ಡಿಕೆ೧೯" (CA♡DK19) ಎಂಬ ಬೃಹದಾಕಾರದ ಹಾಗೂ ಮೋಸ್ಟ್ ಬ್ಯೂಟಿಫುಲ್ ಆಗಿದ್ದ ಮಾನವ ಆಕಾರವನ್ನು (ಸರಪಳಿ) ನಿರ್ಮಿಸಿದ್ದು, ಇದು ಡಿಕೆ ಅವರ ಸುಪ್ರಸಿದ್ಧ ಜರ್ಸಿ ನಂ.೧೯ ಅನ್ನು ಪ್ರತಿನಿಧಿಸುತ್ತದೆ..

ಸ್ಪೆಷಲ್ ರೆಕಾರ್ಡ್
ಈ ಸ್ಪೆಷಲ್ ರೆಕಾರ್ಡ್ "ಒಬ್ಬ ಕ್ರೀಡಾಪಟುವಿನ ಜರ್ಸಿಯನ್ನು ಪ್ರತಿನಿಧಿಸುವ ಮಾನವ ರಚನೆಗೆ ಗರಿಷ್ಟ ಜನಸಂಖ್ಯೆ ಭಾಗವಹಿಸಿದ್ದ" ಎಂಬ ಟೈಟಲ್‌ನಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿ, ಎರಡರಲ್ಲೂ ಅತ್ಯುನ್ನತ ಮಾನ್ಯತೆ ಹಾಗೂ ಗೌರವ ದೊರೆತಿದೆ. ಇದನ್ನು ಕಣ್ತುಂಬಿಕೊಂಡು ದಿನೇಶ್ ಕಾರ್ತಿಕ್ ಭಾವುಕರಾಗಿದ್ದಾರೆ. ಇದೇ ಸಮಯದಲ್ಲಿ ಸ್ಪೋರ್ಟ್ಸ್ನಲ್ಲಿ ಗೆದ್ದ ಸ್ಟೂಡೆಂಟ್ಸ್ಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಬೆಂಗಳೂರು ಬ್ರಾಂಚ್‌ನ ಹೆಣ್ಣುಮಕ್ಕಳು ಕಬ್ಬಡ್ಡಿಯಲ್ಲಿ ಫಸ್ಟ್ ಬಂದಿದ್ದು, ಡಿಕೆ ಕೈಯಿಂದ ಟ್ರೋಫಿ ಸ್ವೀಕರಿಸಿ ಸಂತಸ ಪಟ್ಟಿದ್ದಾರೆ.

ಸತತ ಹೋರಾಟ ಪರಿಶ್ರಮ ಬೇಕು
ಗೆಲುವು ಅನ್ನೋದು ಸುಲಭಕ್ಕೆ ಸಿಗುವಂತಹದ್ದಲ್ಲ ಸತತ ಹೋರಾಟ ಪರಿಶ್ರಮ ಬೇಕು. ಸೋಲಿನ ನೋವು, ಗೆಲುವಿನ ಖುಷಿ ಅಂದ್ರೆ ಏನೂ ಅಂತ ಆರ್‌ಸಿಬಿ ಫ್ಯಾನ್ಸ್ಗೆ ಕೇಳಿ. ಸತತ 17 ವರ್ಷಗಳ ಫೈಟ್ ನಂತ್ರ ಕಳೆದ ವರ್ಷ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ ಅಂತ ಆರ್‌ಸಿಬಿ ಹಾಗೂ ಫ್ಯಾನ್ಸ್ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಗ್ರಾಂಡ್ 7 ಸ್ಪೋರ್ಟ್ಸ್ ಮೀಟ್‌ನ ಅಧ್ಯಕ್ಷತೆ ವಹಿಸಿದ್ದ ಚೆನ್ನೈಸ್ ಅಮಿರ್ತಾ ಗ್ರೂಪ್‌ನ ಅಧ್ಯಕ್ಷರಾದ ಆರ್.ಬೂಮೀನಾಥನ್ ಅವರು ಮಾತಾಡಿ ಈ ದಾಖಲೆಯು ವಿದ್ಯಾರ್ಥಿಗಳಲ್ಲಿ ದೃಢತೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೌಲ್ಯಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದಿದ್ದಾರೆ.

