- Home
- Entertainment
- ಕಸಬ್ ಒಬ್ಬ ಜಂಟಲ್‌ಮನ್, ಪಾಕ್ ತುಂಬಾ ಒಳ್ಳೆ ದೇಶ ಎಂದ ಶಾರುಖ್: ಬಾಲಿವುಡ್ ಬಾದ್ಶಾಹ್ನ ವಿಡಿಯೋ ನೋಡಿ
ಕಸಬ್ ಒಬ್ಬ ಜಂಟಲ್‌ಮನ್, ಪಾಕ್ ತುಂಬಾ ಒಳ್ಳೆ ದೇಶ ಎಂದ ಶಾರುಖ್: ಬಾಲಿವುಡ್ ಬಾದ್ಶಾಹ್ನ ವಿಡಿಯೋ ನೋಡಿ
ನಟ ಶಾರುಖ್ ಖಾನ್ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಒಂದರಲ್ಲಿ ಅವರು 26/11ರ ಮುಂಬೈ ದಾಳಿಯ ಉಗ್ರ ಕಸಬ್‌ನನ್ನು 'ಜಂಟಲ್‌ಮನ್' ಎಂದು ಕರೆದಿದ್ದರೆ, ಮತ್ತೊಂದರಲ್ಲಿ ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಬಾಲಿವುಡ್ ಬಾದ್ಶಾಹ್ನ ಉಗ್ರ ಪ್ರೀತಿ
ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಹೊತ್ತುಕೊಂಡಿರುವ ಖಾನ್ ನಟರಲ್ಲಿ ಒಬ್ಬರಾದ ಬಾಲಿವುಡ್ ಬಾದ್ಶಾಹ್ ಶಾರುಖ್ ಖಾನ್ (Shahrukh Khan) ಎಂದಿಗೂ ಪಾಕಿಸ್ತಾನದ ವಿರುದ್ಧ ಮಾತನಾಡಿದವರೇ ಅಲ್ಲ. ಭಾರತದ ಮೇಲೆ ಉಗ್ರರ ದಾಳಿಯಾದಾಗಲೂ ಪಾಕ್ನ ಉಗ್ರರು ಎಂದು ಅಪ್ಪಿತಪ್ಪಿಯೂ ಶಬ್ದ ಬಳಸಿದವರಲ್ಲ. ಅಷ್ಟೇ ಅಲ್ಲದೇ, ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಆಗಿದ್ದಾರೆ ಶಾರುಖ್. ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿರುವ ಸಂದರ್ಭದಲ್ಲಿ, ನಟನ ಈ ನಡೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು.
26/11 ದಾಳಿ
ಇವೆಲ್ಲವುಗಳ ನಡುವೆಯೇ ಇದೀಗ, 26/11ರಂದು ಅರ್ಥಾತ್ 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಉಗ್ರ ಅಜ್ಮಲ್ ಕಸಬ್ (Terrorist Ajmal Kasab) ಸೆರೆ ಸಿಕ್ಕಿದ್ದ. ಕೊನೆಗೆ ಈತನಿಗೆ ಮರಣದಂಡನೆ ವಿಧಿಸಲಾಗಿತ್ತು. ಈತನ ಪರವಾಗಿ ಅಂದಿನಿಂದ ಇಂದಿನವರೆಗೂ ಒಂದಷ್ಟು ಮಂದಿ ಗ್ರೇಟ್ ಲೀಡರ್ ಎಂದು ಹೇಳಿಕೊಂಡೇ ಬಂದಿದ್ದಾರೆ. ಅಂಥವರಲ್ಲಿ ಒಬ್ಬರು ಎಲ್ಲರ ಕಿಂಗ್ ಖಾನ್ ಭಾರತದ ನೆಚ್ಚಿನ ತಾರೆಯರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್!
ಶಾರುಖ್ ವಿಡಿಯೋ ಹಲ್ಚಲ್
ಇದೀಗ ಶಾರುಖ್ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ. ಸದಾ ಭಯೋತ್ಪಾದಕರನ್ನು ಪೋಷಿಸುತ್ತಾ, ಭಾರತದ ಮೇಲೆ ದಾಳಿಗೆ ಯೋಜಿಸುತ್ತಾ, ಹಿಂದೂಗಳ ಹ*ತ್ಯೆಗೆ ಸಂಚು ರೂಪಿಸುತ್ತಿರುವ ಪಾಕಿಸ್ತಾನ ಈ ಗ್ರೇಟ್ ನಟನಿಗೆ ಅತ್ಯಂತ ಒಳ್ಳೆಯ ನೆರೆಯ ದೇಶವಂತೆ. ಜೊತೆಗೆ ಉಗ್ರ ಕಸಬ್ ಜಂಟಲ್‌ಮನ್ ಎಂದಿದ್ದಾರೆ ಶಾರುಖ್.
ಕಸಬ್ ಜಂಟಲ್‌ಮನ್
ಉಗ್ರಗಾಮಿಗಳ ಸಿದ್ಧಾಂತವನ್ನು ಕಟುವಾಗಿ ಟೀಕಿಸುತ್ತಾ, “ಜೈಲಿನಲ್ಲಿರುವ ಆ ವ್ಯಕ್ತಿ (ಕಸಬ್) ಅವನು ಯಾವ ತರ್ಕದ ಮೇಲೆ ಜನರನ್ನು ಕೊಂದಿದ್ದಾನೆ? ಅವನಿಗೆ ಶಿಕ್ಷಣ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ. ಆ Gentleman ಎಂದು ಅವರು ಹೇಳಿರುವುದು ನಿಜವಾದ ಭಾರತೀಯರನ್ನು ಕಿಡಿ ಕಾರುವಂತೆ ಮಾಡಿದೆ.
ಪೆಹಲ್ಗಾಮ್ ದಾಳಿ ವೇಳೆ ಗಪ್ಚುಪ್
ಅಷ್ಟಕ್ಕೂ ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ಖಾನ್ ನಟರ ಬಗ್ಗೆ ಇದೇ ಮೊದಲ ಬಾರಿ ಟೀಕೆ ಬರುತ್ತಿರುವುದಲ್ಲ. ಬದಲಿಗೆ ಈ ಹಿಂದೆ ಪೆಹಲ್ಗಾಮ್ನಲ್ಲಿ ಧರ್ಮ ಕೇಳಿ ಹಿಂದೂಗಳ ಮೇಲೆ ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿಯಾಗಲೀ ಅಥವಾ ಆಪರೇಷನ್ ಸಿಂದೂರ್ ಸಮಯದಲ್ಲಾಗಲೀ ಅಥವಾ ಪಾಕಿಸ್ತಾನದ ಉಗ್ರರು ನಡೆಸುವ ನರಮೇಧದ ಸಮಯದಲ್ಲಾಗಲೀ, ಎಲ್ಲಿ ತಮ್ಮ ಪಾಕಿಸ್ತಾನದ ಅಭಿಮಾನಿಗಳಿಗೆ ನೋವಾಗಿಬಿಡುತ್ತದೆಯೋ ಎನ್ನುವ ಕಾರಣಕ್ಕೆ ಈ ನಟರು ಒಂದೇ ಒಂದು ಮಾತನಾಡದೇ ಗಪ್ಚುಪ್ ಆಗಿದ್ದವರು. ಕೊನೆಗೆ ಭಾರಿ ಟ್ರೋಲ್ ಆಗುತ್ತಲೇ ಒಂದು ಗೋಡೆಯ ಮೇಲೆ ದೀಪ ಇಟ್ಟವರಂತೆ ಒಂದು ಲೈನ್ ಬರೆದು ಸುಮ್ಮನಾಗಿದ್ದರು ಶಾರುಖ್ ಖಾನ್!
ಪಾಕಿಸ್ತಾನದ ಮೇಲೆ ಅಪಾರ ಪ್ರೀತಿ
ಇವೆಲ್ಲವುಗಳ ನಡುವೆಯೇ, ಇದೀಗ ನಟ ಶಾರುಖ್ ಖಾನ್ (Shah Rukh Khan) ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ನಟ ಪಾಕಿಸ್ತಾನದ ಮೇಲೆ ತಮಗಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಸಾಧ್ಯವಾದರೆ ಒಂದು ದಿನ ನನ್ನ ಇಡೀ ಕುಟುಂಬದ ಜೊತೆ ಪಾಕಿಸ್ತಾನಕ್ಕೆ ಭೇಟಿ ನೀಡಿ, ಅಲ್ಲಿಯ ಪರಿಸರದ ಬಗ್ಗೆ ಮಕ್ಕಳಿಗೂ ತೋರಿಸುವುದಾಗಿ ತಿಳಿಸಿದ್ದಾರೆ.
ನನ್ನವರೆಲ್ಲಾ ಅಲ್ಲಿಯವರೇ ಎಂದಿದ್ದ ಕಿಂಗ್ ಖಾನ್
ಡಿವೈಎನ್ಟಿ ಎನ್ನುವ ಖಾತೆಯಲ್ಲಿ ಇದರ ವಿಡಿಯೋ ಶೇರ್ ಮಾಡಲಾಗಿದೆ. ನೀವು ಪಾಕಿಸ್ತಾನದಲ್ಲಿಯೂ ತುಂಬಾ ಪಾಪ್ಯುಲರ್ ಆಗಿದ್ದೀರಿ. ನಿಮಗೆ ಏನು ಎನ್ನಿಸುತ್ತದೆ ಎಂದು ಆ್ಯಂಕರ್ ಕೇಳಿದ್ದಾಳೆ. ಅದಕ್ಕೆ ಶಾರುಖ್ ಖಾನ್, ನಾನು ಪಾಕಿಸ್ತಾನದ ಪೇಶಾವರದವನು. ನಮ್ಮ ಹಿರಿಯರು ಎಲ್ಲಾ ಇಲ್ಲೇ ಇದ್ದವರು. ನಾನು 15 ವರ್ಷ ಇರುವಾಗ ನನ್ನ ತಂದೆ ಇಲ್ಲಿಗೆ ಕರೆದುಕೊಂಡು ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
Anyone calling Ajmal Kasab a 'gentleman' can NEVER be Indian. 🇮🇳
#TraitorTalk#NeverForget26/11 pic.twitter.com/aDqaqvHiW9— Babumoshai (@TeraKabil) March 26, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

