MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪಶ್ಚಿಮ ಏಷ್ಯಾದಿಂದ ಶುಭಸುದ್ದಿ: ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

ಪಶ್ಚಿಮ ಏಷ್ಯಾದಿಂದ ಶುಭಸುದ್ದಿ: ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

Iran Sends Crude Oil to India After 7 Years Amid Middle East War ಯುದ್ಧದ ಉದ್ವಿಗ್ನತೆಯ ನಡುವೆಯೂ, ಇರಾನ್ ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತ ಹಡಗನ್ನು ಕಳುಹಿಸಿದೆ. 'ಪಿಂಗ್ ಶುನ್' ಹೆಸರಿನ ಈ ಹಡಗು ಸುಮಾರು 5 ಲಕ್ಷ ಬ್ಯಾರಲ್ ತೈಲವನ್ನು ತರುತ್ತಿದೆ.

1 Min read
Author : Santosh Naik
Published : Apr 01 2026, 06:52 PM IST
Share this Photo Gallery
  • FB
  • TW
  • Linkdin
  • Whatsapp
16
ಯುದ್ಧದ ನಡುವೆ ಇರಾನ್ ಸಾಹಸ
Image Credit : X

ಯುದ್ಧದ ನಡುವೆ ಇರಾನ್ ಸಾಹಸ

ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಭೀಕರ ಯುದ್ಧದಲ್ಲಿ ಇರಾನ್ ತೊಡಗಿಸಿಕೊಂಡಿದ್ದರೂ ಸಹ, ತನ್ನ ಮಿತ್ರ ರಾಷ್ಟ್ರ ಭಾರತಕ್ಕೆ ಕಚ್ಚಾ ತೈಲ ಪೂರೈಸುವ ಮೂಲಕ ದೊಡ್ಡ ಮಟ್ಟದ ಸಹಾಯ ಮಾಡಿದೆ. ಮಧ್ಯ ಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಭಾರತ ಎದುರಿಸುತ್ತಿದ್ದ ಇಂಧನ ಆತಂಕಕ್ಕೆ ಈಗ ಅಲ್ಪವಿರಾಮ ಬೀಳುವ ಲಕ್ಷಣ ಕಾಣಿಸುತ್ತಿದೆ.

26
ಹಾರ್ಮುಜ್ ಜಲಸಂಧಿ ಬಂದ್ - ಭಾರತಕ್ಕೆ ಬಿಸಿ
Image Credit : X

ಹಾರ್ಮುಜ್ ಜಲಸಂಧಿ ಬಂದ್ - ಭಾರತಕ್ಕೆ ಬಿಸಿ

ಯುದ್ಧದ ಹಿನ್ನೆಲೆಯಲ್ಲಿ ಇರಾನ್ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ತೈಲ ಸಾಗಣೆಗೆ ಬಂದ್ ಮಾಡಿದೆ. ಇದರಿಂದಾಗಿ ಜಗತ್ತಿನಾದ್ಯಂತ ತೈಲದ ಕೊರತೆ ಉಂಟಾಗಿದ್ದು, ಭಾರತದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿತ್ತು. ಅನೇಕ ಕಡೆ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗಿತ್ತು.

Related Articles

Related image1
ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ
Related image2
ಇರಾನ್‌ ವಿರುದ್ಧದ ಯುದ್ಧದಲ್ಲಿ ಹಿನ್ನಡೆ, ನ್ಯಾಟೋ ಮಿಲಿಟರಿ ಮೈತ್ರಿಕೂಟಕ್ಕೆ ಅಮೆರಿಕ ಗುಡ್‌ಬೈ?
36
7 ವರ್ಷಗಳ ನಂತರ ಇರಾನ್ ತೈಲ ಆಮದು
Image Credit : X

7 ವರ್ಷಗಳ ನಂತರ ಇರಾನ್ ತೈಲ ಆಮದು

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಬರೋಬ್ಬರಿ ಏಳು ವರ್ಷಗಳ ಸುದೀರ್ಘ ಅವಧಿಯ ನಂತರ ಇರಾನ್‌ನಿಂದ ಭಾರತಕ್ಕೆ ಕಚ್ಚಾ ತೈಲದ ಹಡಗು ಆಗಮಿಸುತ್ತಿದೆ. ಶಿಪ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಪರ್ಷಿಯನ್ ಕೊಲ್ಲಿಯಿಂದ ಈ ಹಡಗು ಭಾರತದತ್ತ ಪ್ರಯಾಣ ಬೆಳೆಸಿದೆ.

46
'ಪಿಂಗ್ ಶುನ್' ಹಡಗಿನ ಪ್ರಯಾಣ
Image Credit : X

'ಪಿಂಗ್ ಶುನ್' ಹಡಗಿನ ಪ್ರಯಾಣ

'ಪಿಂಗ್ ಶುನ್' (Ping Shun) ಹೆಸರಿನ ಬೃಹತ್ ತೈಲ ಹಡಗು ಇರಾನ್‌ನಿಂದ ಹೊರಟಿದ್ದು, ಈಗಾಗಲೇ ಸಿಗ್ನಲ್‌ಗಳನ್ನು ನೀಡಲು ಆರಂಭಿಸಿದೆ. ಈ ವಾರದ ಅಂತ್ಯದೊಳಗೆ ಈ ಹಡಗು ಭಾರತದ ಬಂದರನ್ನು ತಲುಪುವ ಸಾಧ್ಯತೆಯಿದೆ.

56
5 ಲಕ್ಷ ಬ್ಯಾರಲ್ ಕಚ್ಚಾ ತೈಲ
Image Credit : X

5 ಲಕ್ಷ ಬ್ಯಾರಲ್ ಕಚ್ಚಾ ತೈಲ

ಈ ಹಡಗಿನಲ್ಲಿ ಸುಮಾರು 5 ಲಕ್ಷ ಬ್ಯಾರಲ್ ಕಚ್ಚಾ ತೈಲವಿದೆ ಎಂದು ವರದಿಯಾಗಿದೆ. ಮಾರ್ಚ್ ಆರಂಭದಲ್ಲಿ ಇರಾನ್‌ನ 'ಖಾರ್ಗ್ ಐಲ್ಯಾಂಡ್'ನಿಂದ ಈ ಹಡಗು ತೈಲವನ್ನು ಭರ್ತಿ ಮಾಡಿಕೊಂಡಿದ್ದು, ಪ್ರಸ್ತುತ ಭಾರತದ ಕರಾವಳಿಯತ್ತ ಸಾಗುತ್ತಿದೆ.

66
ಇಂಧನ ಬಿಕ್ಕಟ್ಟಿಗೆ ದೊಡ್ಡ ಸಮಾಧಾನ
Image Credit : X

ಇಂಧನ ಬಿಕ್ಕಟ್ಟಿಗೆ ದೊಡ್ಡ ಸಮಾಧಾನ

ಈ ಹಡಗು ಭಾರತಕ್ಕೆ ತಲುಪಿದರೆ ದೇಶದಲ್ಲಿನ ಇಂಧನ ಕೊರತೆ ನೀಗಲು ಮತ್ತು ಗಗನಕ್ಕೇರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಸಹಾಯವಾಗಲಿದೆ. ಸದ್ಯಕ್ಕೆ ಹಡಗಿನ ನಿಖರವಾದ ಡೆಸ್ಟಿನೇಶನ್ (ಅಂತಿಮ ನಿಲ್ದಾಣ) ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಅದು ಭಾರತದತ್ತಲೇ ಬರುತ್ತಿರುವುದು ದೃಢಪಟ್ಟಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಇರಾನ್
ಭಾರತ
ಕಚ್ಚಾ ತೈಲ
ವ್ಯವಹಾರ
ಸುದ್ದಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಕೇರಳ ಸಮೀಕ್ಷೆ: 'ದೇವರ ನಾಡಲ್ಲಿ' ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ
Recommended image2
ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್: ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ
Recommended image3
ನಿನ್ನ ರಸಗುಲ್ಲಾಕ್ಕೆ ಬೆಂಕಿ ಹಾಕಾ ಎಂದ ವಧು- ವರ ಕಿಡಿಕಿಡಿ: ಆಮೇಲೆ ಆಗಿದ್ದೇನು? ವಿಡಿಯೋ ವೈರಲ್​
Related Stories
Recommended image1
ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ
Recommended image2
ಇರಾನ್‌ ವಿರುದ್ಧದ ಯುದ್ಧದಲ್ಲಿ ಹಿನ್ನಡೆ, ನ್ಯಾಟೋ ಮಿಲಿಟರಿ ಮೈತ್ರಿಕೂಟಕ್ಕೆ ಅಮೆರಿಕ ಗುಡ್‌ಬೈ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved