ಖ್ಯಾತ ಉದ್ಯಮಿ 1000 ಮಂದಿಗೆ ಉಚಿತ ಐಫೋನ್ 17 ವಿತರಣೆ ಮಾಡುವುದಾಗಿ ಘೋಷಿಸಿದ್ದಾರೆ. ಉಚಿತವಾಗಿ ಐಫೋನ್ 17 ಹಾಗೂ ಅದಕ್ಕಿಂತ ಮೇಲ್ಪಟ್ಟ ಸೀರಿಸ್ ಫೋನ್ ಉಚಿತವಾಗಿ ಪಡೆಯಲು ಕಂಡೀಷನ್ ಏನು?

ನವದೆಹಲಿ (ಸೆ.19) ಐಫೋನ್ 18 ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದೀಗ ಐಫೋನ್ 17 ಉಚಿತವಾಗಿ ಸಿಗಲಿದೆ. ಉಚಿತ ಅಂದರೆ ಸಂಪೂರ್ಣ ಉಚಿತ. 1000 ಮಂದಿಗೆ ಉಚಿತ ಐಫೋನ್ 17 ನೀಡುವ ಮಹತ್ವದ ಘೋಷಣೆಯನ್ನು ಉದ್ಯಮಿ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 22ರಂದು ಮೊದಲ ಹಂತದಲ್ಲಿ 1000 ಮಂದಿಗೆ ಸಂಪೂರ್ಣವಾಗಿ ಉಚಿತ ಐಫೋನ್ ನೀಡಲಾಗುತ್ತದೆ ಎಂದು ಉದ್ಯಮಿ ಘೋಷಿಸಿದ್ದಾರೆ. ಇದೇ ವೇಳೆ ಉಚಿತ ಐಫೋನ್ ಪಡೆಯಲು ಕೇವಲ ಎರಡೇ ಎರಡು ಕಂಡೀಷನ್ ಮಾತ್ರ ಹಾಕಲಾಗಿದೆ.

ಉದ್ಯಮಿ ರಾಕೇಶ್ ತೆಹ್ರಾನ್ ಮಹತ್ವದ ಘೋಷಣೆ

ಉದ್ಯಮಿ ಹಾಗೂ ಇನ್‌ಫ್ಲುಯೆನ್ಸರ್ ರಾಕೇಶ್ ತ್ರೆಹಾನ್ ಉಚಿತ ಐಫೋನ್ ವಿತರಣೆ ಘೋಷಣೆ ಮಾಡಿದ್ದಾರೆ. ರಾಜಾ ಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ರಾಕೇಶ್ ತೆಹ್ರಾನ್ ಉಚಿತ ಐಫೋನ್ ವಿತರಣೆಯನ್ನು ಮಾಧ್ಯಮಗಳ ಮುಂದೆ ನೇರಪ್ರಸಾರದ ಮೂಲಕ ಮಾಡಲಾಗುತ್ತದೆ. ಅತ್ಯಂತ ಪಾರದರ್ಶಕತೆಯಿಂದ ಮಾಡಲಾಗುತ್ತದೆ ಎಂದಿದ್ದಾರೆ. ಐಫೋನ್ 18 ಇತ್ತೀಚೆಗೆ ಬಿಡುಗಡೆಯಾಗಿರುವ ಕಾರಣ ಸದ್ಯ ಉಚಿತವಾಗಿ ಐಫೋನ್ 17 ಹಾಗೂ ಅದಕ್ಕಿಂತ ಮೇಲ್ಪಟ್ಟ ಸಿರೀಸ್ ಉಚಿತವಾಗಿ ವಿತರಿಸಲಾಗುತ್ತದೆ ಎಂದು ರಾಕೇಶ್ ತ್ರೆಹಾನ್ ಘೋಷಿಸಿದ್ದಾರೆ.

ಜೈ ಮಾತಾದಿ ಎಂದು ಬರದರೆ ಸಾಕು, ಫ್ರೀ ಐಫೋನ್

ರಾಕೇಶ್ ತ್ರೆಹಾನ್ ಐಫೋನ್ ಪಡೆಯಲು ಮೊದಲ ಕಂಡೀಷನ್ ನೀವು ಜೈ ಮಾತಾದಿ ಎಂದು ಬರೆಯಬೇಕು. ಜೈ ಮಾತಾದಿ ಭಕ್ತರಾಗಿರುವ ತ್ರೆಹಾನ್, ಇದೀಗ ತಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿರುವ ಜೈಮಾತಾದಿ ದೇವಿಯ ಹೆಸರು ಬರೆದರವರಿಗೆ ಉಚಿತ ಐಫೋನ್ ನೀಡಲಾಗುತ್ತದೆ. ಇದರ ಜೊತೆಗೆ ಮತ್ತೊಂದು ಒಂದು ಸಿಂಪಲ್ ಕಂಡೀಷನ್ ಹಾಕಲಾಗಿದೆ.

ಏನದು ಎರಡನೇ ಕಂಡೀಷನ್

ರಾಕೇಶ್ ತೆಹ್ರಾನ್ ಅಮೃತಸರ ಮೂಲದ ಉದ್ಯಮಿ. ಉಚಿತ ಐಫೋನ್ ಪಡೆಯಲು ಎರಡನೇ ಕಂಡೀಷನ್ ಅದೃಷ್ಠವಂತರು ಅಥವಾ ಈ ಐಫೋನ್ ಪಡೆಯಲು ಅರ್ಹತೆಗೆ ಚಂಡೀಘಡ ಅಥವಾ ಮೊಹಾಲಿ ನಿವಾಸಿಗಳಾಗಿರಬೇಕು. ಜೈ ಮಾತಾದಿ ಬರೆಯಬೇಕು, ಚಂಡೀಘ-ಮೊಹಾಲಿ ನಿವಾಸಿಗಳಾಗಿದ್ದರೆ ಸಾಕು. ನಿಮಗೆ ಐಫೋನ್ ಉಚಿತವಾಗಿ ಪಡೆಯಲು ಸಾಧ್ಯವಿದೆ.

ಸೆಪ್ಟೆಂಬರ್ 22 ರಂದು ಚಂಡೀಘಡ-ಮೊಹಾಲಿಯಲ್ಲಿ ಈ ಉಚಿತ ಐಫೋನ್ ವಿತರಮೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ವ್ಯಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಗ್ರೂಪ್ ಸದಸ್ಯರು ಜೈ ಮಾತಾದಿ ಎಂದು ಬರೆಯಬೇಕು. ಅದೃಷ್ಠರನ್ನು ಆಯ್ಕೆ ಮಾಡಿ ಐಫೋನ್ ವಿತರಿಸಲಾಗುತ್ತದೆ. ಚೀಟಿ ಮೂಲಕ ಅಥವಾ ಇತರ ಲಕ್ಕಿ ಡ್ರಾ ಮೂಲಕ ಅದೃಷ್ಠರನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲಾ ಪ್ರಕ್ರಿಯೆ ಪಾರದರ್ಶಕವಾಗಿರಲಿದೆ ಎಂದು ರಾಕೇಶ್ ಹೇಳಿದ್ದಾರೆ.

ಹಲವು ನಗರಗಳಿಗೆ ವಿಸ್ತರಿಸುವ ಯೋಜನೆ

ರಾಕೇಶ್ ತ್ರೆಹಾನ್ ಉಚಿತ ಐಫೋನ್ ಸೇರಿದಂತೆ ಇತರ ಉಚಿತ ವಿತರಣೆ ಯೋಜನೆಯನ್ನು ಮತ್ತಷ್ಟು ನಗರಳಿಗೆ ವಿಸ್ತರಿಸುವ ಯೋಚಿಸಿದ್ದಾರೆ. ಈಗಾಗಲೇ ದ್ವಿಚಕ್ರ ವಾಹನ, ಕಾರು ಚಾಲಕರು, ಮಾಲೀಕರಿಗೆ 500 ರೂಪಾಯಿ, 1000 ರೂಪಾಯಿ ಕೂಪನ್ ವಿತರಿಸಿ ಭಾರಿ ಸುದ್ದಿಯಾಗಿದ್ದರು.