ಇಂಡಿಗೋ ವಿಮಾನಗಳ ನಿರಂತರ ವಿಳಂಬ ಮತ್ತು ರದ್ದತಿಯಿಂದಾಗಿ, ಪ್ರಯಾಣಿಕರು ಈಗ ಎಲ್ಲಾ ಪರಿಸ್ಥಿತಿಗಳಿಗೆ ಸಿದ್ಧರಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಹೇಗೆ ಅಂತ ಈ ಸ್ಟೋರಿ ನೋಡಿ…

ದೇಶೀಯ ವಿಮಾನಯಾನದಲ್ಲಿ ಇಂಡಿಗೋ ವಿಮಾನಗಳ ಹಠಾತ್ ರದ್ದಿನಿಂದಾಗಿ ಸಾಕಷ್ಟು ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ನಿರಂತರ ಹಲವು ಗಂಟೆಗಳ ಕಾಲ ಕಾದು ಕಾದು ಬೇಸತ್ತಂತಹ ಹಲವು ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಈಗ ವಿಮಾನದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲೇ ಈಗ ಎಲ್ಲದಕ್ಕೂ ಸಿದ್ಧರಾಗಿ ಹೊರಟಂತೆ ಕಾಣುತ್ತಿದ್ದು, ವಿಮಾನ ಪ್ರಯಾಣಿಕರೊಬ್ಬರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಸಿಗೆಯನ್ನು ಕೂಡ ತೆಗೆದುಕೊಂಡು ಹೋಗಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.

ಇಂಡಿಗೋ ಇದ್ದಕ್ಕಿದ್ದಂತೆ ಕೊನೆಕ್ಷಣದಲ್ಲಿ ವಿಮಾನಗಳನ್ನು ರದ್ದು ಹಾಗೂ ವಿಳಂಬಗೊಳಿಸುತ್ತಿರುವುದರಿಂದ ಈಗ ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲೇ ಪ್ರಯಾಣಿಕರು ಇಂತಹ ಮುಂದಾಗಬಹುದಾದ ಎಲ್ಲಾ ಪರಿಸ್ಥಿತಿಗಳಿಗೆ ಸಿದ್ಧಗೊಂಡೆ ಹೋಗುತ್ತಿದ್ದಾರೆ. ಹಾಗೆಯೇ ಈಗ ವೈರಲ್ ಆದ ವೀಡಿಯೋವೊಂದರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಹಾಸಿಗೆಯನ್ನು ಕೂಡ ಕೈಯಲ್ಲಿ ಹಿಡಿದುಕೊಂಡು ಹೋಗಿರುವುದು ಕಾಣಿಸಿದೆ. ಇದನ್ನು ನೋಡಿದ ನೆಟ್ಟಿಗರು ಹಲವು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ

ಅಂದಹಾಗೆ ಪ್ರಯಾಣಿಕ ಹಾಸಿಗೆಯನ್ನು ಹೊತ್ತುಕೊಂಡು ಏರ್‌ಪೋರ್ಟ್‌ನಲ್ಲಿ ಹೋಗುತ್ತಿರುವ ಫೋಟೋವನ್ನು @TheLaughLoom ಎಂಬ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ. ಇಂಡಿಗೋ ವಿಳಂಬವು ಪ್ರಯಾಣಿಕರನ್ನು ಸ್ಲೀಪರ್ ಕೋಚ್ ಪ್ರಯಾಣಿಕರನ್ನಾಗಿ ಮಾಡಿತು. ಸಹೋದರ ಅಕ್ಷರಶಃ ಹಾಸಿಗೆಯೊಂದಿಗೆ ವಿಮಾನ ನಿಲ್ದಾಣವನ್ನು ತಲುಪಿದನು ಎಂದು ಬರೆದಿದ್ದಾರೆ.

ಈ ಫೋಟೋಗಳನ್ನು ನೋಡಿದ ಅನೇಕರು ರೈಲಿನಲ್ಲಿ ರೈಲು ನಿಲ್ದಾಣಗಳಲ್ಲಿ ಇದೆಲ್ಲಾ ಸಾಮಾನ್ಯ. ಆದರೆ ಇಂಡಿಗೋ ವಿಮಾನದ ಅವಾಂತರದಿಂದಾಗಿ ಈ ದೃಶ್ಯಗಳನ್ನು ವಿಮಾನ ನಿಲ್ದಾಣಗಳಲ್ಲಿಯೂ ನೋಡುವಂತಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಇವರು ಇಂಡಿಗೋದ ಜನರಲ್ ಬೋಗಿಯವರು ಆಗಿರಬೇಕು ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಹಾಗೆಯೇ ಈ ದೃಶ್ಯ ನೋಡಿದ ಕೆಲವರು ಈಗಲೂ ಈ ರೀತಿ ಡಿಲೇ ಆಗ್ತಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದ್ಕೆ ಒಬ್ಬರು ಪ್ರತಿಕ್ರಿಯಿಸಿದ್ದು, ಇಲ್ಲ ನಾನು ಸೋಮವಾರ ಹಾಗೂ ಬುಧವಾರ ಇಂಡಿಗೋದಲ್ಲಿ ಸಂಚರಿಸಿದ್ದೇನೆ. ಸರಿಯಾದ ಸಮಯಕ್ಕೆ ಅದು ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ

ಈ ರೀತಿಯ ವಿಳಂಬಗಳು ಸಾಮಾನ್ಯವಾಗಿ ರೈಲುಗಳಿಂದ ನಿರೀಕ್ಷಿಸಲಾಗುತ್ತಿತ್ತು, ಆದರೆ ಈ ಬಾರಿ ವಿಮಾನಗಳಿಗೂ ಆವರಿಸಿತು ಎಂದು ಮಿಮಾನ್ಷಾ ತ್ರಿವೇದಿ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನ ತಂತ್ರಜ್ಞರಿಗೆ ಲ್ಯಾಪ್‌ಟಾಪ್ ಬದಲಿಗೆ ಹಾಸಿಗೆ ಒಯ್ಯುವಂತೆ ಒತ್ತಾಯಿಸಲು ಇಂಡಿಗೋ ಮಾತ್ರ ಸಾಧ್ಯ ಎಂದು ಸಾಗರ್ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಫೋರ್‌ಕಾರ್ನರ್ಸ್ ವಾಯ್ಸ್ ಎಂಬ ಮತ್ತೊಬ್ಬ ಬಳಕೆದಾರ,ಬ್ರೋ ಕೇವಲ ಹಾಸಿಗೆ ತಂದಿಲ್ಲ... ಅವರು ರಶೀದಿ, ವಾರಂಟಿ ಕಾರ್ಡ್ ಮತ್ತು ಪವರ್ ಬ್ಯಾಂಕ್ ತಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

Scroll to load tweet…