- Home
- Entertainment
- TV Talk
- ಡ್ರೋನ್ ಪ್ರತಾಪ್ ಮೊಬೈಲ್ 'wallpaper'ನಲ್ಲಿ ಕಿಚ್ಚ ಸುದೀಪ್-ಪ್ರಿಯಾ ಜೋಡಿ.. ಏನಿದು ರಹಸ್ಯ?
ಡ್ರೋನ್ ಪ್ರತಾಪ್ ಮೊಬೈಲ್ 'wallpaper'ನಲ್ಲಿ ಕಿಚ್ಚ ಸುದೀಪ್-ಪ್ರಿಯಾ ಜೋಡಿ.. ಏನಿದು ರಹಸ್ಯ?
ಸದ್ಯ ಚೀನಾದಲ್ಲಿ ಓಡಾಡುತ್ತಿರುವ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರ ಮೊಬೈಲಿನಲ್ಲಿ ಕಿಚ್ಚ ಸುದೀಪ್-ಪ್ರಿಯಾ ಸುದೀಪ್ ವಾಲ್ ಪೇಪರ್ ಇದೆ. ಏನಿದರ ರಹಸ್ಯ ಎಂದು ಹಲವರು ಯೋಚನೆಗೆ ಬಿದ್ದಿದ್ದಾರೆ! ಆ ರಹಸ್ಯ ತಿಳಿಯಲು ಈ ಸ್ಟೋರಿ ನೋಡಿ..

ಕನ್ನಡದ ಮಂಡ್ಯದ ಹುಡುಗ, ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರು ಇದೀಗ ಚೀನಾದಲ್ಲಿ ಸುತ್ತಾಡುತ್ತಿದ್ದಾರೆ.
ಚೀನಾದಲ್ಲಿ ಬುಲೆಟ್ ಟ್ರೈನ್‌ನಲ್ಲಿ ಓಡಾಟ ನಡೆಸುತ್ತಿರುವ ಡ್ರೋನ್ ಪ್ರತಾಪ್ ಅವರು ಸದ್ಯ ತಾವು ಕುಳಿತು ಸಂಚರಿಸುತ್ತಿರುವ ಆ ಬುಲೆಟ್ ಟ್ರೈನ್ ಬಗ್ಗೆ , ಅದರ ಫೆಸಿಲಿಟಿ ಬಗ್ಗೆ ಹೇಳಿ ವಿಡಿಯೋ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಆ ವಿಡಿಯೋದಲ್ಲಿ ಡ್ರೋನ್ ಪ್ರತಾಪ್ ಅವರು ಚೀನಾದ ಬುಲೆಟ್ ಟ್ರೈನ್‌ನಲ್ಲಿ ಕುಳಿತು, ಅದರಲ್ಲಿ ಆಟೋಮ್ಯಾಟಿಕ್ ಮೊಬೈಲ್ ಚಾರ್ಜಿಂಗ್ ಸೌಲಭ್ಯದ ಬಗ್ಗೆ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಬುಲೆಟ್ ಟ್ರೈನ್‌ನ ಬಿಸಿನೆಸ್ ಕ್ಲಾಸ್‌ನಲ್ಲಿ ಇದೀವಿ.. ಪವರ್‌ಲೆಸ್ ಚಾರ್ಜಿಂಗ್ ಕೊಟ್ಟಿದಾರೆ.. ನೋಡಿ, ಹಾಗೇ ಚಾರ್ಜಿಂಗ್ ಆಗೋಕೆ ಶುರುವಾಯ್ತು.. ಅಷ್ಟೇ ಅಲ್ಲ, ಆಟೋಮ್ಯಾಟಿಕ್ ಸೀಟಂಗ್, ಇಷ್ಟು ಪ್ರೆಸ್ ಮಾಡಿದ್ರೆ ಇಷ್ಟು ಬೆಂಡ್ ಆಗುತ್ತೆ.. ಇಷ್ಟು ಮಾಡಿದ್ರೆ ಹೀಗ್ ಆಗುತ್ತೆ.. ಅಂತೆಲ್ಲಾ ಆ ಬಗ್ಗೆ ಡ್ರೋನ್ ಪ್ರತಾಪ್ ವಿವರಣೆ ನೀಡುತ್ತಿದ್ದಾರೆ/
ಡ್ರೋನ್ ಪ್ರತಾಪ್ ಅವರು ವಿಡಿಯೋ ಮಾಡುವಾಗ ಚೀನಾದ ಬುಲೆಟ್ ಟ್ರೈನ್ ಬಗ್ಗೆ ಹೇಳಿ, ಒಂದೊಂದು ಬಟನ್ ಪ್ರೆಸ್ ಮಾಡಿದಾಗಲೂ ಕುಳಿತಿರುವ ಸೀಟ್ ಹೇಗೆಲ್ಲಾ ಅಡ್ಜೆಸ್ಟ್ ಆಗುತ್ತದೆ, ಕುಳಿತು, ಮಲಗಿ ಹೇಗೆಲ್ಲಾ ಪ್ರಯಾಣ ಮಾಡಬಹುದು ಎಂಬುದನ್ನು ವಿವರಿಸಿದ್ದಾರೆ.
ಆದರೆ, ವಿಡಿಯೋ ಮಾಡುತ್ತಿರುವ ಡ್ರೋನ್ ಪ್ರತಾಪ್ ಅವರ ಮೊಬೈಲ್ ನೋಡಿದರೆ ಅದರಲ್ಲಿ ಕನ್ನಡದ ಸ್ಟಾರ್ ನಟ ಹಾಗೂ ಬಿಗ್ ಬಾಸ್ ಕನ್ನಡದ ಎಲ್ಲಾ ಸೀಸನ್‌ಗಳ ನಿರೂಪಕ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್ ಜೋಡಿಯ ಫೋಟೋ ಇರುವ ವಾಲ್ ಪೇಪರ್ ಕಣ್ಣಿಗೆ ಬೀಳುತ್ತದೆ.
ಡ್ರೋನ್ ಪ್ರತಾಪ್ ಮೊಬೈಲ್ ವಾಲ್‌ಪೇಪರ್‌ನಲ್ಲಿ ಕಿಚ್ಚ ಸುದೀಪ್ ದಂಪತಿ? ಆ ವಾಲ್‌ಪೇಪರ್ ರಹಸ್ಯವೇನು? ಹೀಗಂತ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಸ್ವಲ್ಪವೂ ಸಂಶಯಕ್ಕೆ ದಾರಿ ಇಲ್ಲದಂತೆ ಅದು ಕಿಚ್ಚ ಸುದೀಪ್-ಪ್ರಿಯಾ ಸುದೀಪ್ ದಂಪತಿ ಫೋಟೋ ಎಂಬುದು ಕಾಣಿಸುತ್ತಿದೆ.
ಇದಕ್ಕೆ ನಿಖರ ಉತ್ತರವನ್ನು ಸ್ವತಃ ಡ್ರೋನ್ ಪ್ರತಾಪ್ ಅವರೇ ಹೇಳಬೇಕು… ಆದರೆ, ಹಲವರು ಊಹೆ ಮಾಡಿರುವ ಪ್ರಕಾರ, ಕಾಮೆಂಟ್ ಮಾಡಿರುವ ಪ್ರಕಾರ.. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿರುವುದು ಬಹುತೇಕರಿಗೆ ಗೊತ್ತಿದೆ.
ಡ್ರೋನ್ ಪ್ರತಾಪ್ ಕಳೆದ ಸೀಸನ್ ಬಿಗ ಬಾಸ್ ಕನ್ನಡ 11ರಲ್ಲಿ ರನ್ನರ್ ಅಪ್ ಎಂಬುದೂ ಗೊತ್ತಿದೆ. ಅಂದು ಕಿಚ್ಚ ಸುದೀಪ್ ಅವರೊಂದಿಗೆ ಬೆಸೆದ ಬಾಂಧವ್ಯ, ಇಂದಿಗೂ ಅಭಿಮಾನದ ಮಟ್ಟದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಇದೆ.
ಆ ಕಾರಣಕ್ಕೆ ಅವರು ಸುದೀಪ್-ಪ್ರಿಯಾ ಜೋಡಿಯ ವಾಲ್‌ಪೇಪರನ್ನು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಹಲವರ ಅನಿಸಿಕೆ. ಚೀನಾದ ಬುಲೆಟ್ ಟ್ರೈನ್ ಬಗ್ಗೆ ವಿಡಿಯೋ ಮಾಡುತ್ತಾ ಇರುವ ಡ್ರೋನ್ ಪ್ರತಾಪ್ ಅವರ ಮೊಬೈಲಿನಲ್ಲಿ ಸಹಜವಾಗಿ ಅದು ಎಲ್ಲರ ಕಣ್ಣಿಗೆ ಬೀಳುವಂತಾಗಿದೆ. ಈ ಸಂಗತಿ ಸಹಜವಾಗಿಯೇ ನಿಜವೂ ಆಗಿರಬಹುದು ಎನ್ನಬಹುದು.
ಆದರೂ ಕೂಡ, ಡ್ರೋನ್ ಪ್ರತಾಪ್ ಅವರನ್ನು ಸಂಪೂರ್ಣವಾಗಿ ನಂಬಲಿಕ್ಕಾಗದ ಕೆಲವರು, ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರ ಫೋಟೋವನ್ನು ವಾಲ್‌ಪೇಪರ್‌ನಲ್ಲಿ ಹಾಕಿದ್ದು, ಅದನ್ನು ವಿಡಿಯೋ ಮಾಡುವ ನೆಪ ಮಾಡಿಕೊಂಡು ಜಗತ್ತಿಗೇ ತೋರಿಸಿದ್ದರ ಹಿಂದೆ ಡ್ರೋನ್ ಪ್ರತಾಪ್ ಅವರದ್ದು ಏನಾದ್ರೂ ಸೀಕ್ರೆಟ್ ಅಜೆಂಡಾ ಇದ್ದರೂ ಇರಬಹುದು ಎನ್ನುತ್ತಿದ್ದಾರೆ. ಯಾರ ಮಾತನ್ನು ನಂಬುವುದು? ನೀವೇ ಹೇಳಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

