ರಾಜ್ಯದ 42 ಮಂದಿಗೆ ಕೊರೋನಾ ರೋಗ, ಲಾಕ್‌ಡೌನ್‌ನಿಂದ ಆನ್‌ಲೈನ್ ಶಾಪಿಂಗ್‌ಗೂ ಬೀಗ: ಮಾ.25ರ ಟಾಪ್ 10 ಸುದ್ದಿ!

ಲಾಕ್‌ಡೌನ್ ಮಾಡಿದರೂ ಜನ ಬೀದಿಗಿಳಿಯುವುದನ್ನು ನಿಲ್ಲಿಸಿಲ್ಲ. ಜನರ ನಿರ್ಲಕ್ಷ್ಯದಿಂದ ಇದೀಗ ಕರ್ನಾಟಕದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇಷ್ಟೇ ಈ ಸಂಖ್ಯೆ 1 ಲಕ್ಷ ದಾಟುವು ಸಾಧ್ಯತೆ ಇದೆ ಅನ್ನೋ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ಕರೋನಾ ವೈರಸ್ ಸೃಷ್ಟಿಸಿದ ಚೀನಾ ವಿರುದ್ಧ ಅಮೆರಿಕಾ ವಕೀಲರೊಬ್ಬರು 1500 ಲಕ್ಷ ಕೋಟಿ ರೂಪಾಯಿ ಕೇಸ್ ಹಾಕಿದ್ದಾರೆ. ಲಾಕ್‌ಡೌನ್‌ನಿಂದ ಆನ್ ಲೈನ್ ಶಾಪಿಂಗ್ ಕೂಡ ಬಂದ್ ಆಗಿದೆ. ಇನ್ನು ಆದೇಶ ದಿಕ್ಕಿರಿಸಿ ರೋಡಿಗಿಳಿದ ವಾಹನಗಳ ಮೇಲೆ ದುಬಾರಿ ದಂಡ ಹಾಕಲಾಗಿದೆ. ಹೀಗೆ ಮಾರ್ಚ್ 25ರ ಯುಗಾದಿಯಂದು ಸದ್ದು ಮಾಡಿದ ಟಾಪ್ 10 ಕೊರೋನಾ ಸುದ್ದಿ ಇಲ್ಲಿವೆ.

Coroanavirus Karnataka to India Lock down top 10 news of march 25

ರಾಜ್ಯದಲ್ಲಿ ಮತ್ತೆ 8 ಮಂದಿಗೆ ಸೋಂಕು: ಈವರೆಗಿನ 1 ದಿನದ ಗರಿಷ್ಠ ಪ್ರಕರಣ ದಾಖಲು!...

Coroanavirus Karnataka to India Lock down top 10 news of march 25
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಮಂಗಳವಾರ ಒಂದೇ ದಿನ ಬರೋಬ್ಬರಿ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೊರೋನಾ ಸೋಂಕು ಹಬ್ಬುವ ಭೀತಿ ನಿಜ: ಡಿಸಿಎಂ

Coroanavirus Karnataka to India Lock down top 10 news of march 25

ಕೊರೋನಾ ವೈರಸ್‌ ಹರಡುವುದನ್ನು ಬಿಗಿ ಕ್ರಮಗಳ ಮೂಲಕ ತಡೆಯದಿದ್ದರೆ ರಾಜ್ಯದಲ್ಲಿ ಸುಮಾರು 80,000ದಿಂದ 1 ಲಕ್ಷ ಮಂದಿ ಸೋಂಕಿತರಾಗುವ ಸಾಧ್ಯತೆಯಿರುವುದು ನಿಜ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್‌.ಅಶ್ವತ್‌್ಥ ನಾರಾಯಣ ತಿಳಿಸಿದ್ದಾರೆ.

ಪರಸ್ಪರ ಅಂತರ ಕಾಪಾಡಿಕೊಂಡ ಮೋದಿ ಕ್ಯಾಬಿನೆಟ್ ಮೀಟಿಂಗ್.

Coroanavirus Karnataka to India Lock down top 10 news of march 25

ಕೊರೋನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ವಹಿಸುತ್ತಿದೆ. ಸದ್ಯ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಮೋದಿ ಸೋಶಿಯಲ್ ಡಿಸ್ಟೆಂನ್ಸಿಂಗ್ ವಇಸುವಂತೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ಈಗಿರುವಾಗ ಇಂದು, ಬುಧವಾರ ದೆಹಲಿಯ ಪಿಎಂ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಿಂದ, ಹಳ್ಳಿ ಹಳ್ಳಿಯ ದಿನಸಿ ಅಂಗಡಿಯನ್ನು ಇನ್ನು ತಪಪ್ಪದೇ ಪರಿಪಾಲಿಸಲಾಗುತ್ತಿದೆ. 


ಕೊರೋನಾ ಸೃಷ್ಟಿಸಿದ್ದಕ್ಕೆ ಚೀನಾ ವಿರುದ್ಧ 1500 ಲಕ್ಷ ಕೋಟಿ ರೂ. ಕೇಸ್‌! ...

Coroanavirus Karnataka to India Lock down top 10 news of march 25

 4 ಲಕ್ಷ ಮಂದಿಗೆ ವ್ಯಾಪಿಸಿರುವ ಕೊರೋನಾ ವೈರಸ್‌ ಅನ್ನು ಚೀನಾವೇ ಹುಟ್ಟುಹಾಕಿ ಅದನ್ನು ವಿಶ್ವಕ್ಕೆ ಹಬ್ಬಿಸಿದೆ ಎಂದು ಆರೋಪಿಸಿ ಚೀನಾ ವಿರುದ್ಧ ಅಮೆರಿಕದ ವಕೀಲರೊಬ್ಬರು ಕಾನೂನು ಸಮರ ಹೂಡಿದ್ದಾರೆ. ಅಲ್ಲದೆ, ಈ ತಪ್ಪಿಗಾಗಿ 20 ಟ್ರಿಲಿಯನ್‌ ಅಮೆರಿಕ ಡಾಲರ್‌(1500 ಲಕ್ಷ ಕೋಟಿ ರು.) ಅನ್ನು ಚೀನಾ ನೀಡಬೇಕು ಎಂದು ವಕೀಲ ಲ್ಯಾರಿ ಕ್ಲೇಮನ್‌ ತಮ್ಮ ದಾವೆಯಲ್ಲಿ ಒತ್ತಾಯಿಸಿದ್ದಾರೆ.

PM ಮೋದಿ ಸೂಚನೆ ಪಾಲಿಸಿ, ಭಾರತೀಯರಿಗೆ ಹಿಂದಿಯಲ್ಲಿ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗ!...

Coroanavirus Karnataka to India Lock down top 10 news of march 25

ಕೊರೋನಾ ವೈರಸ್ ಭಾರತದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಇಂದಿನಿಂದ(ಮಾ.25) 21 ದಿನಗಳ ವರೆಗೆ ಸಂಪೂರ್ಣ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ತುರ್ತು ಸೇವೆ ಸೇರಿದಂತೆ ಕೆಲ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳು ಲಭ್ಯವಿಲ್ಲ. ಕೊರೋನಾ ವೈರಸ್ ತಡೆಯಲು ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇದೀಗ ಪ್ರಧಾನಿ ನಿರ್ಧಾರವನ್ನು ಕ್ರಿಕೆಟಿಗರು, ಸೆಲೆಬ್ರೆಟಿಗಳು , ಗಣ್ಯರು ಸೇರಿದಂತೆ ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಹಲವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಇದೀಗ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

ಭಾರತ ಲಾಕ್‌ಡೌನ್‌: ಆನ್‌ಲೈನ್‌ ಶಾಪಿಂಗ್‌ಗೂ ಬೀಗ, ಆರ್ಡರ್ ಕ್ಯಾನ್ಸಲ್!

Coroanavirus Karnataka to India Lock down top 10 news of march 25

ಈಗಾಗಲೇ ಫ್ಲಿಪ್ ಕಾರ್ಟ್ ಹಾಗೂ ಗ್ರೋಫರ್ಸ್ ಬಾಗಿಲು ಮುಚ್ಚಿವೆ. ಇತ್ತ ಅಮೆಜಾನ್ ಬಹಳ ಅಗತ್ಯವೆನಿಸುವ ದಿನಬಳಕೆಯ ವಸ್ತುಗಳನ್ನು ಆರ್ಡರ್ ಮಾಡುವ ಆಯ್ಕೆ ನೀಡಿದೆ. ಹೀಗಿದ್ದರೂ ಭಾರತದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಬಂದ ಆರ್ಡರ್‌ಗಳನ್ನು ಹೇಗೆ ತಲುಪಿಸುವುದು ಎಂಬ ಗೊಂದಲದಲ್ಲಿರುವ ಕಂಪನಿಗಳು ತನ್ನ ಈ ಆಯ್ಕೆಯನ್ನು ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. 

ವಿದ್ಯಾವಂತರಿಗೆ ಮಾದರಿಯಾದ ಅನಕ್ಷರಸ್ಥ: ರೈತನಿಗೆ ಬಿಗ್ ಸೆಲ್ಯೂಟ್ ಹೊಡೆದ PSI

Coroanavirus Karnataka to India Lock down top 10 news of march 25

ರೈತನ ಕೊರೋನಾ ಮುನ್ನೆಚ್ಚರಿಕೆ ಕಂಡು ಪಿಎಸ್ಐಯೊಬ್ಬರು ಸೆಲ್ಯೂಟ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದ ರೈತ ಜಮೀನಿಗೆ ಹೋಗುವಾಗ ಬಂಡಿಯಲ್ಲಿ ಹೆಲ್ಮೆಟ್ ಹಾಕಿಕೊಂಡು ಹೋಗಿದ್ದಾರೆ. 

ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್!

Coroanavirus Karnataka to India Lock down top 10 news of march 25

ಪ್ರಧಾನಿ ಮೋದಿ ಕೈಮುಗಿದು ಬೇಡಿಕೊಂಡರೂ ಜನರಿಗೆ ಬುದ್ದಿಬಂದಿಲ್ಲ. ಮನೆಯಲ್ಲಿ ಇರಿ ಎಂದರೆ ಜಗತ್ತೆ ಮುಗಿದೇ ಹೋಯ್ತು ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಮಾರುಕಟ್ಟಗೆ ಮುಗಿ ಬೀಳುತ್ತಿದ್ದಾರೆ. ಅತ್ತಿಂದಿತ್ತ ಓಡಾಡುತ್ತಲೇ ಇದ್ದಾರೆ. ಲಾಕ್‌ಡೌನ್ ಬಳಿಕ ರಸ್ತೆಗಿಳಿದ 2000ಕ್ಕೂ ಹೆಚ್ಚು ವಾಹನಗಳಿಗೆ ದುಬಾರಿ ಫೈನ್ ಹಾಕಲಾಗಿದೆ. 

Fact Check: ಕೊರೋನಾ ವೈರಸ್‌ ಜೀವಿ​ತಾ​ವಧಿ 12 ಗಂಟೆ ನಿಜ​ವೇ?

Coroanavirus Karnataka to India Lock down top 10 news of march 25

‘ಕೊರೋನಾ ವೈರ​ಸ್‌ನ ಜೀವಿ​ತಾ​ವಧಿ 12 ಗಂಟೆ. ಆದರೆ 14 ಗಂಟೆ​ಗಳ ಕಾಲ ಜನತಾ ಕರ್ಫ್ಯೂಗೆ ಕರೆ​ ಕೊ​ಡ​ಲಾ​ಗಿದೆ. 14ಗಂಟೆ​ಗಳ ಬಳಿಕ ಇಡೀ ದೇಶ ಕರೋನಾ ಮುಕ್ತ​ವಾ​ಗು​ತ್ತದೆ. ಜನತಾ ಕರ್ಫ್ಯೂಗೆ ಹಿಂದಿನ ಉದ್ದೇಶ ಇಷ್ಟೇ’ ಎನ್ನುವ ಸಂದೇ​ಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಭಾರಿ ವೈರಲ್‌ ಆಗು​ತ್ತಿದೆ. ಇದು ನಿಜನಾ?


ಭಾರತ ಲಾಕ್‌ಡೌನ್‌: ಬೇಕಾಬಿಟ್ಟಿ ಹೊರಗೆ ಬಂದ್ರೆ ಹೀಗೆ ಆಗೋದು!.

https://kannada.asianetnews.com/video/coronavirus-karnataka/women-police-team-lathi-charge-in-koppal-q7qvem

ಮಹಾಮಾರಿ ಕೊರೋನಾ ವೈರಸ್ ತಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ್ ಲಾಕ್‌ಡೌನ್‌ಗೆ ಕರೆ ಕೊಟ್ಟಿದ್ದಾರೆ.ಯಾರೂ ಮನೆಯಿಂದ ಹೊರಗಡೆ ಬರಬೇಡಿ ಎಂದು ಪ್ರಧಾನಿ ಕೈಮುಗಿದು ಕೇಳಿಕೊಂಡಿದ್ದಾರೆ. ಆದರೆ, ಕೊಪ್ಪಳದ ಜನ ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ನಗರದಲ್ಲಿ ಓಡಾಡುತ್ತಿದ್ದ ಜನರಿಗೆ ತುಂಗಾ ಪಡೆ ಅಟ್ಟಾಡಿಸಿ ಹೊಡೆದು ಬಸ್ಕಿ ತಗೆಸಿ ಮನೆಗೆ ಕಳುಹಿಸಿದ್ದಾರೆ. 2ನೆ ದಿನವೂ ನಗರದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. 

Latest Videos
Follow Us:
Download App:
  • android
  • ios