ನೋಯ್ಡಾ(ಮಾ.25):  ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಮಾಡುವ ಮೊದಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಲಾಕ್‌ಡೌನ್ ಘೋಷಣೆ ಮಾಡಿತ್ತು. ಆದರೆ ಜನರು ನಮ್ಮ ಮನೆಗೆ ಯಾರೂ ವಿದೇಶದಿಂದ ಬಂದಿಲ್ಲ, ನಮೇಗೆ ಕೊರೋನಾ ಅಲ್ಲ ಅದಕ್ಕಿಂತ ಭಯಂಕರ ರೋಗವೂ ಬರುವುದಿಲ್ಲ ಅನ್ನೋ ಭಂಡ ಧೈರ್ಯ ತೋರುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್ ಬಳಿಕ ರೋಡಿಗಿಳಿದ ವಾಹನಗಳಿಗೆ ದುಬಾರಿ ದಂಡ ಹಾಕಿದ್ದಾರೆ. 

ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!

ಗ್ರೇಟರ್ ನೋಯ್ಡಾ ಪೊಲೀಸರು ಲಾಕ್‌ಡೌನ್ ಬಳಿಕವೂ ರಸ್ತೆಯಲ್ಲಿ ಓಡಾಡುತ್ತಿರುವ ವಾಹನಗಳಿಗೆ ಇ ಚಲನ್ ಜಾರಿ ಮಾಡಲಾಗಿದೆ. ಹಲವು ವಾಹನಗಳನ್ನು ಹಿಡಿದು ಫೈನ್ ಹಾಕಿದ್ದರೆ, ಮತ್ತೆ ಹಲವು ವಾಹನಗಳಿಗೆ ಇ ಚಲನ್ ಮೂಲಕ ದಂಡ ಹಾಕಲಾಗಿದೆ. ಮೋದಿ ಭಾನುವಾರ ಕರೆ ನೀಡಿದ್ದ ಜನತಾ ಕರ್ಫ್ಯೂ ಹಾಗೂ ಇದೀಗ ಮೋದಿ ಸೂಚಿಸಿದ ಲಾಕ್‌ಡೌನ್ ವೇಳೆಯೂ ಜನರು ತಮ್ಮ ಓಡಾಟ ನಿಲ್ಲಿಸಿಲ್ಲ. 

ಸಂಪೂರ್ಣ ಭಾರತ ಲಾಕ್‌ಡೌನ್ ಆಗಿದ್ದರೂ ಹಲವರು ರಸ್ತೆ ಖಾಲಿಯಾಗಿದೆ ಎಂದು ತಮ್ಮ ತಮ್ಮ ವಾಹನಗಳನ್ನು ರೋಡಿಗಳಿಸಿದ್ದಾರೆ. ಇನ್ನು ಹಲವರು ತಮ್ಮ ಊರಿಗೆ ತೆರಳಲು ಸೇರಿದಂತೆ ಅನೇಕ ಕಾರಣಗಳಿಗೆ ಮನೆ ಬಿಟ್ಟು ಹೊರಬರುತ್ತಿದ್ದಾರೆ.  ಹೀಗೆ ಹೊರಬಂದವರಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಕಾರಣಕ್ಕೆ ದುಪ್ಪಟ್ಟು ದಂಡ ಹಾಕುತ್ತಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಲಾಕ್‌ಡೌನ್ ಜಾರಿ ಬಂದ ಮೊದಲ ದಿನವೇ 2000ಕ್ಕೂ ಹೆಚ್ಚು ವಾಹನಗಳಿಗೆ ದಂಡ ಹಾಕಲಾಗಿದೆ. 

21 ದಿನ ಲಾಕ್‌ಡೌನ್ ಮಾಡಿರುವುದರಿಂದ ಅನಗತ್ಯ ಕಾರಣಗಳಿಗೆ ಮನೆಯಿಂದ ಹೊರಬಂದರೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ ಕೇಸ್ ದಾಖಲಿಸಲು ಪೊಲೀಸರು ಮುಂದಾಗದ್ದಾರೆ.