PM ಮೋದಿ ಸೂಚನೆ ಪಾಲಿಸಿ, ಭಾರತೀಯರಿಗೆ ಹಿಂದಿಯಲ್ಲಿ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗ!
ಕೊರೋನಾ ವೈರಸ್ ಭಾರತದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಇಂದಿನಿಂದ(ಮಾ.25) 21 ದಿನಗಳ ವರೆಗೆ ಸಂಪೂರ್ಣ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ತುರ್ತು ಸೇವೆ ಸೇರಿದಂತೆ ಕೆಲ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳು ಲಭ್ಯವಿಲ್ಲ. ಕೊರೋನಾ ವೈರಸ್ ತಡೆಯಲು ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇದೀಗ ಪ್ರಧಾನಿ ನಿರ್ಧಾರವನ್ನು ಕ್ರಿಕೆಟಿಗರು, ಸೆಲೆಬ್ರೆಟಿಗಳು , ಗಣ್ಯರು ಸೇರಿದಂತೆ ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಹಲವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಇದೀಗ ಭಾರತೀಯರಿಗೆ ಹಿಂದಿ ಭಾಷೆಯಲ್ಲಿ ಪೀಟರ್ಸನ್ ಮನವಿ ಮಾಡಿದ್ದಾರೆ.
ಆತಂಕ್ಕೆ ಕಾರಣವಾದ ಮಾರುಕಟ್ಟೆ, ಬಸ್ ಸೇರಿದಂತೆ ಮುಂತಾದೆಡೆ ಜನರ ಓಡಾಟ
ಕೊರೋನಾ ವೈರಸ್ ತಡೆಯಲು 21 ದಿನ ಭಾರತ ಸಂಪೂರ್ಣ ಲಾಕ್ ಡೌನ್ ಮಾಡಿದ ಪ್ರಧಾನಿ ಮೋದಿ
ಮನೆಯಲ್ಲೇ ಇರಲು ಜನರಿಗೆ ಕೈಮುುಗಿದು ಮನವಿ ಮಾಡಿದ ನರೇಂದ್ರ ಮೋದಿ
ಮೋದಿ ಮನವಿ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಭಾರತೀಯರಿಗೆ ಹಿಂದಿ ಭಾಷೆಯಲ್ಲಿ ಮನವಿ
ಇಂಗ್ಲೆಂಡ್‌ನಲ್ಲಿರುವ ಪರಿಸ್ಥಿತಿ ಭಾರತದಲ್ಲಿ ಆಗಿರುವುದು ವಿಷಾದ ಎಂದು ಪೀಟರ್ಸನ್
ಪಿಎಂ ಮೋದಿ ಕಾ ನಿರ್ದೇಶ್ ಪಾಲನ್ ಕರೆ ಎಂದು ಹಿಂದಿಯಲ್ಲಿ ಪೀಟರ್ಸನ್ ಮನವಿ
ಕೊರೋನಾ ವೈರಸ್ ಹೊಡೆದೋಡಿಸಲು ಅಂತರ ಕಾಯ್ದುಕೊಳ್ಳುವುದೇ ಉತ್ತಮ
ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ಭಾರತೀಯರಲ್ಲಿ ಮನವಿ ಮಾಡಿದ ಪೀಟರ್ಸನ್
ಮನೆಯಲ್ಲಿದ್ದು ಎಲ್ಲರೂ ಸುರಕ್ಷಿತವಾಗಿರಿ ಎಂದ ಪೀಟರ್ಸನ್
ಮನೆಯಲ್ಲಿದ್ದು ಎಲ್ಲರೂ ಸುರಕ್ಷಿತವಾಗಿರಿ ಎಂದ ಪೀಟರ್ಸನ್
ನನ್ನ ಹಿಂದಿ ಟೀಚರ್ ಶ್ರೀವಾತ್ಸವ್ ಎಂದು ಕೇವಿನ್ ಪೀಟರ್ಸನ್ ಟ್ವೀಟ್