Fact Check: ಕೊರೋನಾ ವೈರಸ್ ಜೀವಿತಾವಧಿ 12 ಗಂಟೆ ನಿಜವೇ?
‘ಕೊರೋನಾ ವೈರಸ್ನ ಜೀವಿತಾವಧಿ 12 ಗಂಟೆ. ಆದರೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಕರೆ ಕೊಡಲಾಗಿದೆ. 14ಗಂಟೆಗಳ ಬಳಿಕ ಇಡೀ ದೇಶ ಕರೋನಾ ಮುಕ್ತವಾಗುತ್ತದೆ. ಜನತಾ ಕರ್ಫ್ಯೂಗೆ ಹಿಂದಿನ ಉದ್ದೇಶ ಇಷ್ಟೇ’ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು ನಿಜನಾ?
ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಜನರಿಗೆ ಜನತಾ ಕಫä್ರ್ಯ ಆಚರಿಸಲು ಮನವಿ ಮಾಡಿದ್ದರು. ಅದರಂತೆ ಭಾನುವಾರ ದೇಶ ಇತಿಹಾಸದಲ್ಲಿಯೇ ಇಂಥದ್ದೊಂದು ವಾತಾವರಣ ನಿರ್ಮಾಣವಾಗಿರಲಿಲ್ಲ ಎನ್ನುವಂತ ಬಂದ್ ಉಂಟಾಗಿತ್ತು. ಆದರೆ ಇದರ ಜೊತೆಗೆ ‘ಕೊರೋನಾ ವೈರಸ್ನ ಜೀವಿತಾವಧಿ 12 ಗಂಟೆ. ಆದರೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಕರೆಕೊಡಲಾಗಿದೆ. 14ಗಂಟೆಗಳ ಬಳಿಕ ಇಡೀ ದೇಶ ಕರೋನಾ ಮುಕ್ತವಾಗುತ್ತದೆ. ಜನತಾ ಕಫä್ರ್ಯ ಹಿಂದಿನ ಉದ್ದೇಶ ಇಷ್ಟೇ’ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂದೇಶ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ ಇದರ ಸತ್ಯಾಸತ್ಯ ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು ಎನ್ನುವ ವಾಸ್ತವಾಂಶ ತಿಳಿದುಬಂದಿದೆ. ಕೊರೋನಾ ವೈರಸ್ ಸ್ವಭಾವದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!
ಆದರೆ ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ ಕೊರೋನಾ ವೈರಸ್ ಗಾಳಿಯಲ್ಲಿ ಕೆಲವು ಗಂಟೆಗಳ ಕಾಲ ಮತ್ತು ಕೆಲ ವಸ್ತುಗಳ ಮೇಲೆ 2-3 ದಿನಗಳ ವರೆಗೂ ಜೀವಂತವಾಗಿರುತ್ತದೆ. ಆದಾಗ್ಯೂ ಅದು ಯಾವ ವಸ್ತು, ವಸ್ತುವಿನ ಆರ್ದತೆ ಹೇಗಿದೆ ಎನ್ನುವುದನ್ನು ಅದು ಅವಲಂಬಿಸಿರುತ್ತದೆ. ವಿಶ್ವ ಆರೋಗ್ಯ ಸಂಘಟನೆ ಪ್ರಕಾರವೂ ವೈರಸ್ ಜೀವಿತಾವಧಿ ಎಷ್ಟುಕಾಲ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕೊರೋನಾ ಕುಟುಂಬದ ಇತರೆ ವೈರಸ್ ಗುಣಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿದಾಗ ವಸ್ತುಗಳ ಮೇಲೆ ಕೆಲ ಗಂಟೆಗಳಿಂದ ಹಿಡಿದು ಕೆಲ ದಿನಗಳ ವರೆಗೆ ಜೀವಂತವಾಗಿರುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ 2-3ದಿನ ಇಡೀ ನಗರವನ್ನು ಬಂದ್ ಮಾಡಿದರೂ ಕೊರೋನಾ ಸಂಪೂರ್ಣ ನಿರ್ಮೂಲನೆಯಾಗುತ್ತದೆ ಎಂದು ಹೇಳಲಾಗದು.
- ವೈರಲ್ ಚೆಕ್