ದಕ್ಷಿಣ ಭಾರತದ ರೈತರು ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಲಾಭದಾಯಕ ಆವಕಾಡೊ ಕೃಷಿಯತ್ತ ಮುಖಮಾಡುತ್ತಿದ್ದಾರೆ. ಯೂಟ್ಯೂಬ್‌ನಂತಹ ಆಧುನಿಕ ಮಾಧ್ಯಮಗಳಿಂದ ಮಾಹಿತಿ ಪಡೆದು, ಅಂತರ್ ಬೆಳೆಯಂತಹ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣುತ್ತಿದ್ದು, ಇದು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ.

ನಗರದಲ್ಲಿ ಕಾಫಿ ಶ್ಯಾಪ್, ಹೈಟೆಕ್ ರೆಸ್ಟಾರೆಂಟ್‌ಗಳಲ್ಲಿ 'ಆವಕಾಡೊ ಟೋಸ್ಟ್' ಒಂದು ಟ್ರೆಂಡ್. ಒಂದು ಸಮಯದಲ್ಲಿ ನಮ್ಮ ದೇಶದಲ್ಲಿ ಈ ಹಣ್ಣಿನ ಹೆಸರು ಕೂಡ ಗೊತ್ತಿರಲಿಲ್ಲ. ಇದಕ್ಕೆ ಡಿಮ್ಯಾಂಡ್ ಇಲ್ಲ, ಮಾರ್ಕೆಟ್ ಮೌಲ್ಯ ಇಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಡೈನಿಂಗ್ ಟೇಬಲ್‌ನಿಂದ ಹಿಡಿದು ಡೈಟ್‌ ವರೆಗೂ ಎಲ್ಲಿ ನೋಡಿದರೂ ಈ ವಿದೇಶಿ ಹಣ್ಣು ಕಾಣುತ್ತಿದೆ. ಈ ಟ್ರೆಂಡ್‌ ಅನ್ನು ದಕ್ಷಿಣ ಭಾರತದ ರೈತರು ಕೈಹಿಡಿದ್ದರು. ಸಂಪ್ರದಾಯಿಕ ಹಣ್ಣಿನ ಬದಲಾಗಿ ಆವಕಾಡೊ ಕೃಷಿಯಲ್ಲಿ ಲಾಭ ನೋಡುತ್ತಿದ್ದಾರೆ. ಈ ವಿನೂತನ ಪ್ರಯೋಗಕ್ಕೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ದಕ್ಷಿಣದ ರೈತರ ಬದುಕು ಬದಲಿಸಿದ ವಿದೇಶಿ ಹಣ್ಣು!

ಯೂಟ್ಯೂಬ್ ನೋಡಿ, ಆಂಧ್ರ ಪ್ರದೇಶ ವೈಎಸ್‌ಆರ್ ಜಿಲ್ಲೆಯ ರೈತ ವರದರಾಜ್ ಎಂಬ ಯುವ ಅಪೂರ್ವ ಸಾಧನೆ ಮಾಡಿದ್ದಾರೆ. ವರ್ಷಗಳಿಂದ ತಮ್ಮ ತೋಟದಲ್ಲಿ ಟಾಮೋಟೊ, ಬಾಳೆ ಹಣ್ಣು ಬೆಳೆಯುತ್ತಿದ್ದರು. ಆದರೆ ನಿರಂತರವಾಗಿ ಒಂದೇ ರೀತಿಯ ಬೆಳೆ ಬೆಳೆಯುತ್ತಿದ್ದರು. ಇದರ ನಡುವೆ ಹೊಸ ಪ್ರಯತ್ನ ಮಾಡಬೇಕು ಎಂದು ಕೊಂಡಿದ್ದರು. ಒಂದು ದಿನ ಸ್ನೇಹಿತನ ತೋಟದಲ್ಲಿ ಆವಕಡೋ ಹಣ್ಣು ನೋಡಿದ್ದ. ಇದರ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ತಡಮಾಡದೆ ಯೂಟ್ಯೂಬ್‌ನಲ್ಲಿ ಆವಕಾಡೊ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಯೂಟ್ಯೂಬ್ ಮೂಲಕ ಮಾಹಿತಿ ಪಡೆದು ಸಾಂಕೇತಿಕ ಪದ್ಧತಿಗಳನ್ನು ತಿಳಿದುಕೊಂಡಿದ್ದರು. ಚಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ ಬರೋಬ್ಬರಿ ನಾಲ್ಕು ಟನ್ ಇಳುವರಿ ಪಡೆದಿದ್ದರು. ಯಾವುದೇ ಮಧ್ಯವರ್ತಿಗಳ ಸಹಾಯ ಇಲ್ಲದೇ, ಸ್ಥಳೀಯ ವ್ಯಾಪಾರಿಗಳಿಗೆ ಹಣ್ಣು ಮಾರಾಟ ಮಾಡಿ ಊಹೆಗೂ ನಿಲುಕದ ರೀತಿಯಲ್ಲಿ ಲಾಭ ಗಳಿಸಿದ್ದರು.

ಕಾಫಿ ತೋಟದಲ್ಲೂ ಆವಕಾಡೊ

ಆಂಧ್ರ ಮಾತ್ರವಲ್ಲದೇ, ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಈಗ ಆವಕಾಡೊ ಬೆಳೆ ಸಂಚಲವನ್ನು ಸೃಷ್ಟಿಸುತ್ತಿದೆ. ತಮಿಳುನಾಡಿನ ಕೊಡೈಕೆನಾಲ್ ಮೂಲಕ ಚಂದ್ರಶೇಖರ್ ಎಂಬ ರೈತ ಅರ್ಧ ಎಕರೆಯಲ್ಲಿ ಆವಕಾಡೊ ಬೆಳೆದು ಲಾಭಗಳಿಸಿದ್ದಾರೆ.

ಕರ್ನಾಟಕದ ಚಿಕ್ಕಮಗಳೂರಿನ ರೈತ, ಮತ್ತೊಂದು ಹೆಜ್ಜೆ ಮುಂದೇ ಹಾಕಿ ಭಿನ್ನ ಪ್ರಯೋಗ ಮಾಡಿದ್ದಾರೆ. ಕಾಫಿ, ಮೆಣಸು ತೋಟದ ನಡುವೆ ಅಂತರ್ ಬೆಳೆಯಾಗಿ ಆವಕಾಡೊ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಬೇರೆ ಭೂಮಿ ಅಗತ್ಯ ಇರುವುದರಿಲ್ಲ. ಸಂಪ್ರದಾಯಿಕ ಬೆಳೆಯ ನಡುವೆ ಹೆಚ್ಚಿನ ಆದಾಯ ತಂದುಕೊಟ್ಟಿದೆ.

ನಗರ ಜನರ ಆಹಾರ ಅಭ್ಯಾಸಗಳಿಗೆ ಅನುಗುಣವಾಗಿ ನಮ್ಮ ರೈತರು ಯೋಚಿಸುವುದು ಇಲ್ಲಿ ಆಸಲಿ ಗೆಲುವು. ಪಟ್ಟಣದಲ್ಲಿ ರೆಸ್ಟಾರೆಂಟ್‌ನಲ್ಲಿ ದೊರೆಯುವ ಆವಕಾಡೊ ಟೋಸ್ಟ್ ರುಚಿ ಹೆಚ್ಚಾಸಿರುವುದರ ಹಿಂದೆ ನಮ್ಮ ರೈತರ ಕಷ್ಟ ಇದೆ. ಹೊಸ ಆಲೋಚನೆ, ಆಧುನಿಕ ಕೃಷಿ ಪದ್ಧತಿ, ನೇರ ಮಾರುಕಟ್ಟೆ ಬೆಳೆಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ದಕ್ಷಿಣ ಭಾರತದ ರೈತರ ಬಲವನ್ನು ದೇಶಕ್ಕೆ ತೋರಿಸಿಕೊಟ್ಟಿದೆ.