- Home
- Karnataka Districts
- Bengaluru Urban
- Second Bengaluru: ಮುಂಬೈ-ಪುಣೆ ಮಾದರಿಯಲ್ಲಿ ತಲೆ ಎತ್ತಲಿದೆ 2ನೇ ಬೆಂಗಳೂರು; ರೇಸ್‌ನಲ್ಲಿ ನಿಮ್ಮೂರು ಇದೆಯಾ ನೋಡಿ!
Second Bengaluru: ಮುಂಬೈ-ಪುಣೆ ಮಾದರಿಯಲ್ಲಿ ತಲೆ ಎತ್ತಲಿದೆ 2ನೇ ಬೆಂಗಳೂರು; ರೇಸ್‌ನಲ್ಲಿ ನಿಮ್ಮೂರು ಇದೆಯಾ ನೋಡಿ!
ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ನೀತಿ ಆಯೋಗವು 'ಎರಡನೇ ಬೆಂಗಳೂರು' ನಿರ್ಮಾಣಕ್ಕೆ ಸಲಹೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೈಸೂರು-ಮಂಡ್ಯ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಅವಳಿ ನಗರಗಳನ್ನು ಈ ಯೋಜನೆಗೆ ಪರಿಗಣಿಸಲಾಗುತ್ತಿದೆ.

ಎರಡನೇ ಬೆಂಗಳೂರು ಹೇಗೆ ಇರಲಿದೆ?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ನೀತಿ ಆಯೋಗದ ಸಭೆಯಲ್ಲಿ ಎರಡನೇ ಬೆಂಗಳೂರು ನಿರ್ಮಾಣಕ್ಕೆ ಪ್ರಸ್ತಾವನೆ ಕೇಳಿ ಬಂದಿದೆ. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಒಲವು ತೋರಿಸಿದ್ದಾರೆ. ಮುಂಬೈ ಹಾಗೂ ಪುಣೆ ಮಾದರಿಯಲ್ಲಿಯೇ ಬೆಂಗಳೂರಿನ ಮೇಲೆ ಒತ್ತಡವನ್ನು ಕಡಿಮೆ ಮಾಡಲು ಎರಡನೇ ಬೆಂಗಳೂರು ನಿರ್ಮಾಣಕ್ಕೆ ಮುಂದಾಗಬೇಕು ಎಂಬ ಸಲಹೆಯನ್ನು ನೀಡಲಾಗಿದೆ.
ಯಾವ ಊರಿಗೆ ಅದೃಷ್ಟ?
ಎರಡನೇ ಬೆಂಗಳೂರು ಎಂಬ ವಿಚಾರವನ್ನು ಕೇಳಲು ರೋಮಾಂಚನ ಆಗುತ್ತದೆ. ಇದಕ್ಕಾಗಿ ಈಗಾಗಲೇ ನಾಲ್ಕು ಟ್ವಿನ್ ಸಿಟಿಯ ಬಗ್ಗೆಯೂ ಬಾರೀ ಚರ್ಚೆ ಆಗುತ್ತಿದೆ. ಹಾಗಾದರೆ ಎರಡನೇ ಬೆಂಗಳೂರು ನಿರ್ಮಾಣ ಆದರೆ ಯಾವ ಊರಿನಲ್ಲಿ ಆಗಬಹುದು ಎಂಬ ಕುತುಹೂಲ ಹಲವರನ್ನು ಕಾಡುತ್ತಿದೆ.
ಸಿಎಂ ಡಿಕೆಶಿ ಹೇಳಿದ್ದೇನು?
ಬೆಂಗಳೂರಿನಲ್ಲಿ ಬುಧವಾರ 'ವಿಕಸಿತ ಕರ್ನಾಟಕ 2047' ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮಕ್ಕೆ ನೀತಿ ಯೋಗದ ವೈಸ್ ಚೇರ್ ಪರ್ಸನ್ ಅಶೋಕ್ ಕುಮಾರ್ ಬಂದಿದ್ದರು. ಈ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರಾದ ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದರು. ಈ ವೇಳೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಅಶೋಕ್ ಕುಮಾರ್ ಅವರು, ಕರ್ನಾಟಕಕ್ಕೆ ಎರಡನೇ ಬೆಂಗಳೂರಿನ ಅಗತ್ಯವಿದೆ, ಅದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ನೇರವಾಗಿ ಸಲಹೆ ನೀಡಿದ್ದರು.
ಬೆಂಗಳೂರು ದೇಶಕ್ಕೆ ನಂಬರ್ ಒನ್
ನೀತಿ ಆಯೋಗ ಸಲಹೆಗೆ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಡಿಕೆ ಶಿವಕುಮಾರ್ ಅವರು, ನಾವು ನೀತಿ ಆಯೋಗ ನಿರೀಕ್ಷೆಗೆ ತಕ್ಕಂತೆ ಪ್ಲ್ಯಾನ್ ಮಾಡುತ್ತೇವೆ, ಆದರೆ ಕೇಂದ್ರದಿಂದ ಹಣ ಕೊಡಿ ಎಂದು ಹೇಳಿದ್ದಾರೆ. ಏಕೆಂದರೆ ಬೆಂಗಳೂರು ಹಲವು ದೇಶದ ಹಲವುಗಳಿಗೆ ನಂಬರ್ ಒನ್ ಆಗಿದ್ದೇವೆ. ಆದರೆ ನಮಗೆ ಕೇಂದ್ರದಿಂದ ಬರಬೇಕಾದ ಅನುದಾನ ಕೊಡುತ್ತಿಲ್ಲ ಎಂದು ಹೇಳಿದ್ದರು.
ನಾಲ್ಕು ಟ್ವಿನ್ ಸಿಟಿ, ಯಾವುವು?
ಇನ್ನು, ಎರಡನೇ ಬೆಂಗಳೂರು ಯಾವ ಊರು ಆಗಿರಬಹುದು ಎಂಬ ಬಗ್ಗೆ ಭಾರೀ ಚರ್ಚೆ ಜೋರಾಗಿದ್ದು, ವರದಿಗಳ ಅನ್ವಯ ಈ ರೇಸ್‌ನಲ್ಲಿ ನಾಲ್ಕು ಟ್ವಿನ್ ಸಿಟಿಗಳ ಹೆಸರುಗಳು ಪ್ರಸ್ತಾವನೆಗೆ ಬಂದಿದೆ. ಇದರಲ್ಲಿ ಮೊದಲೇ ಟ್ವಿನ್ ಸಿಟಿಗಳೆಂದರೆ, ಮೈಸೂರು ಮತ್ತು ಮಂಡ್ಯ. ಇಲ್ಲಿ ನಾಲೆಡ್ಜ್ ಟೂರಿಸಂ, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಷರಿಂಗ್ ಕ್ಯಾಪಿಟಲ್ ಐಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಏರೋಸ್ಪೇಸ್, ಡಿಫೆನ್ಸ್, ಆಗ್ರೋ-ಟೆಕ್ ಮತ್ತು ಫುಡ್ ಪ್ರೊಸೆಸಿಂಗ್ಗೆ ಅವಕಾಶವಿದೆ. ಎರಡನೇ ಟ್ವಿನ್ ಸಿಟಿಯಾಗಿ ನಾರ್ಥ್ ಕರ್ನಾಟಕದ ಹುಬ್ಬಳ್ಳಿ ಮತ್ತು ಧಾರವಾಡ. ಇಲ್ಲಿ ಲಾಜಿಸ್ಟಿಕ್ಸ್ ಕ್ಯಾಪಿಟಲ್, ಎಲೆಕ್ಟ್ರಿಕ್ ವೆಹಿಕಲ್ಸ್, ಆಟೋ ಕಾಂಪೋನೆಂಟ್ಸ್, ಫಿನ್‌ಟೆಕ್, ಹೆಲ್ತ್‌ಕೇರ್, ಇಂಜಿನಿಯರಿಂಗ್‌ಗೆ ಉತ್ತಮ ಆಯ್ಕೆಯಾಗಿದೆ.
ಎರಡನೇ ಬೆಂಗಳೂರಿಗೆ ಅತೀ ದೊಡ್ಡ ಅವಕಾಶ!
ಉಳಿದಂತೆ ಮಂಗಳೂರು ಮತ್ತು ಉಡುಪಿಯನ್ನು ಕರಾವಳಿ ಕರ್ನಾಟಕ ಗ್ಲೋಬಲ್ ಎಕನಾಮಿಕ್ ಕಾರಿಡಾರ್ ಆಗಿ ಅಭಿವೃದ್ಧಿ ಮಾಡಬಹುದಾಗಿದೆ. ಇಲ್ಲಿ ಪೆಟ್ರೋಕೆಮಿಕಲ್ಸ್, ಬ್ಲೂ ಎಕಾನಮಿ, ಮೀನಗಾರಿಕೆ, ಲಾಜಿಸ್ಟಿಕ್ಸ್ ಅಭಿವೃದ್ಧಿ ಮಾಡಲು ಅತೀ ದೊಡ್ಡ ಅವಕಾಶವಿದೆ. ನಾಲ್ಕನೇ ಟ್ವಿನ್ ಸಿಟಿ ಆಯ್ಕೆಯಾಗಿ ಹೆರಿಟೇಜ್ ಮತ್ತು ಇಂಡಸ್ಟ್ರಿಯಲ್ ಅಭಿವೃದ್ಧಿಯಾಗಿ ಪ್ರದೇಶವಾಗಿದೆ. ಸಿಮೆಂಟ್, ಟೆಕ್ಸ್ಟೈಲ್ಸ್, ಹಾರ್ಟಿಕಲ್ಚರ್, ವೈನ್ ಮತ್ತು ರಿನ್ಯೂವೇಬಲ್ ಎನರ್ಜಿಗೆ ಉತ್ತಮ ಸ್ಥಳವಾಗಿದೆ.
ಕರ್ನಾಟಕ ಸರ್ಕಾರದ ಬಿಯಾಂಡ್ ಬೆಂಗಳೂರು ಯೋಜನೆ
ಈ ನಗರಗಳನ್ನು ಹೊರತು ಪಡಿಸಿ ಸರ್ಕಾರ ಬೆಂಗಳೂರು ಬಿಯಾಂಡ್ ಚಿಂತನೆ ಅಡಿ, ಬಳ್ಳಾರಿ, ಬೆಳಗಾವಿ, ತುಮಕೂರು, ದಾವಣಗೆರೆ, ಕಲಬುರಗಿ ನಗರಗಳಿಗೆ ಹೆಚ್ಚು ಬೆಂಬಲ ನೀಡುತ್ತಿದೆ. ಈಗಾಗಲೇ ಸಿಎಂ ಡಿಕೆ ಶಿವಕುಮಾರ್ ಐದು ನಗರಗಳನ್ನು ಟಾರ್ಗೆಟ್ ಮಾಡಿ, ಅಭಿವೃದ್ಧಿ ಗಮನಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಂತೆ ಈಗಾಗಲೇ ವಿಮಾನ ನಿಲ್ದಾಣಗಳ ಸಂಪರ್ಕ ಇರುವ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ನಗರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರಂತೆ ಖಾಸಗಿ ಕಂಪನಿಗಳ ಸೆಳೆಯಲು ಹಲವು ಇನ್ ಸೆಂಟೀವ್‌ಗಳನ್ನು ನೀಡಲು ಸರ್ಕಾರ ಮುಂದಾಗುತ್ತಿದೆ.

