"ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದ ಕಾಂಗ್ರೆಸ್", ಇದೀಗ ಭಕ್ತರಾಗಿದ್ದು ಹೇಗೆ? ಬಿಜೆಪಿ ತಿರುಗೇಟು!...

ರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೇರವೇರಿಸಲಿದ್ದಾರೆ. ಇದೀಗ ಭೂಮಿ ಪೂಜೆ ಕಾರ್ಯಕ್ರಮ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. 

ಕೊರೋನಾ ಟೆಸ್ಟ್ ಎಂದು ಗುಪ್ತಾಂಗದಿಂದ ಸ್ಯಾಂಪಲ್ ಪಡೆದ ಲ್ಯಾಬ್ ಟೆಕ್ನಿಷಿಯನ್!...

ಕೊರೋನಾತಂಕ ಇಡೀ ದೇಶವನ್ನೇ ಆವರಿಸಿದೆ. ಹೀಗಾಗಿ ಜನರ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಅಗತ್ಯ ಬಿದ್ದರಷ್ಟಟೇ ಹೊರ ಹೋಗುವ ಮಂದಿ ಜ್ವರ, ನೆಗಡಿಯಾದರೂ ಬೆಚ್ಚಿ ಬೀಳುತ್ತಿದ್ದಾರೆ. ಹೀಗಿರುವಾಗ ಲ್ಯಾಬ್‌ ಟೆಕ್ನಿಷಿಯನ್ ಒಬ್ಬ ಕೊರೋನಾ ಭಯವನ್ನೇ ಬಂಡವಾಳವಾಗಿಸಿಕೊಂಡು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ನಟ ಸುಶಾಂತ್‌ ಸಿಂಗ್‌ನನ್ನು ಕೊಲೆ ಮಾಡಲಾಗಿದೆ ಎಂದ ಬಿಜೆಪಿ ಸಂಸದ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆಯೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸುಶಾಂತ್‌ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!...

ಕೊರೋನಾ ವೈರಸ್‌ ತಡೆಯಲು ಕೈಗಳಿಗೆ ಹಚ್ಚುವ ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುವುದು ಕೂಡ ಅಪಾಯಕಾರಿ. ಸ್ಯಾನಿಟೈಸರ್‌ಗಳ ಅತಿಯಾದ ಬಳಕೆಯಿಂದ ಚರ್ಮದ ತುರಿಕೆ, ಗುಳ್ಳೆಗಳು ಏಳುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೇಡವೆಂದರೂ ನೀವೇ ನನ್ನನ್ನು ಸಿಎಂ ಮಾಡಿದಿರಿ: ಎಚ್‌ಡಿಕೆ ಕಿಡಿ!

ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ಮಾರುವೇಷ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್‌ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಕೊರೋನಾ ವಿರುದ್ಧ ಸಮರ ಸಾರಿದ 2011ರ ವಿಶ್ವಕಪ್ ಹೀರೋ ಮುನಾಫ್ ಪಟೇಲ್..!...

ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ತಮ್ಮ ತವರಿನಲ್ಲಿ ಕೊರೋನಾ ವಿರುದ್ದ ಸಮರ ಸಾರಿದ್ದಾರೆ. ಕೋವಿಡ್ ಆರೈಕೆ ಕೇಂದ್ರ ತೆರೆಯುವ ಮೂಲಕ ತಾಯ್ನಾಡಿನ ಋಣ ತೀರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. 

ನಿರ್ಧಾರ ಬದಲಿಸಿದ ಸಿಎಂ, ಪುನಾರಚನೆ ಬದಲು ವಿಸ್ತರಣೆ, ಯಾರಿಗೆ ಅದೃಷ್ಟ?...

ಸಂಪುಟ ಪುನಾರಚನೆ ಬದಲು ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಆಗಸ್ಟ್ ನಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು  ಹಿರಿಯ ಸಚಿವರ ಬಳಿ ಯಡಿಯೂರಪ್ಪ ಹೇಳಿದ್ದಾರೆ.

ಕೆಜಿಎಫ್‌-2: ಬಿಡುಗಡೆ ಬೆನ್ನಲ್ಲೇ ಸಂಜಯ ದತ್‌ ಪೋಸ್ಟರ್‌ ವೈರಲ್‌

ನಟ ಯಶ್‌ ಅಭಿನಯದ ಕೆಜಿಎಫ್‌ 2 ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ಪಾತ್ರದ ಗುಟ್ಟು ಬಿಟ್ಟುಕೊಡುವ ನಿಟ್ಟಿನಲ್ಲಿ ಅವರ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಡೀಸೆಲ್ ಬೆಲೆ 8.36 ರೂ ಇಳಿಕೆ, VAT ಕಡಿತಗೊಳಿಸಿದ ಸರ್ಕಾರ!...

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೀಗ ಭಾರತವನ್ನೇ ಕಂಗೆಡಿಸಿದೆ. ಕೊರೋನಾ ವೈರಸ್ ಹೊಡೆತದ ನಡುವೆ ಇಂಧನ ಬೆಲೆಯೂ ಏರಿಕೆ ಕಂಡಿರುವುದು ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿರುವುದು ಮತ್ತಷ್ಟು ಆತಂಕ ತಂದಿದೆ. ಇದೀಗ ಸರ್ಕಾರ ಡೀಸೆಲ್ ಮೇಲಿನ VAT ತೆರಿಗೆ ಕಡಿತಗೊಳಿಸೋ ಮೂಲಕ ಬರೋಬ್ಬರಿ 8.36 ರೂಪಾಯಿ ಕಡಿಮೆ ಮಾಡಿದೆ.

ಭೂಮಿ ತೂಕದ ಹುಡುಗಿಯ ಫಿಟ್‌ನೆಸ್‌;ವರ್ಕೌಟ್‌ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್‌

ಒಂದು ಪೀಸ್‌ ಕೇಕ್‌ ತಿಂದ್ರೆ ಅದರಿಂದ ಕ್ರಿಯೇಟ್‌ ಆಗಿರೋ ಕೊಬ್ಬು ಕರಗಿಸೋ ತನಕ ಈಕೆಗೆ ತೃಪ್ತಿ ಇರಲ್ಲ. ಇತ್ತೀಚೆಗೆ ತನ್ನ 31ನೇ ಬತ್‌ರ್‍ ಡೇ ಆಚರಿಸಿಕೊಂಡ ಈ ನಟಿ ತನ್ನ ವರ್ಕೌಟ್‌ ಕತೆ ಹೇಳ್ಕೊಂಡಿದ್ದಾರೆ.