Asianet Suvarna News Asianet Suvarna News

"ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದ ಕಾಂಗ್ರೆಸ್", ಇದೀಗ ಭಕ್ತರಾಗಿದ್ದು ಹೇಗೆ? ಬಿಜೆಪಿ ತಿರುಗೇಟು!

ರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೇರವೇರಿಸಲಿದ್ದಾರೆ. ಇದೀಗ ಭೂಮಿ ಪೂಜೆ ಕಾರ್ಯಕ್ರಮ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. 

Bjp hits out congress for Ram mandir Bhumi Pujan Allegation
Author
Bengaluru, First Published Jul 30, 2020, 2:56 PM IST

ನವದೆಹಲಿ(ಜು.30):   ಹಲವು ದಶಕಗಳ ಕಾಲ ರಾಜಕೀಯ ಹಾಗೂ ಚುನಾವಣೆಯ ಪ್ರಮಖ ವಸ್ತುವಾಗಿದ್ದ ರಾಮಮಂದಿರ ವಿಚಾರ ಇನ್ನೂ ಮುಂದುವರಿಯುತ್ತಲೇ ಇದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಜನ್ಮ ಭೂಮಿ ಸಮಿತಿ ಮಂದಿರ ನಿರ್ಮಾಣ ಆರಂಭಿಸಿದೆ. ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜಯೊಂದಿಗೆ ಮಂದಿರ ನಿರ್ಮಾಣ ಆರಂಭಗೊಳ್ಳಲಿದೆ. ಇದೀಗ ಕಾಂಗ್ರೆಸ್, ರಾಮ ಮಂದಿರ ಭೂಮಿ ಪೂಜೆಗೆ ಬಿಜೆಪಿ ಸರ್ಕಾರ ತಮಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿಎಲ್‌ವಿ ನರಸಿಂಹ ರಾವ್ ತಿರುಗೇಟು ನೀಡಿದ್ದಾರೆ. 

ರಾಮ ಜನ್ಮಭೂಮಿ ಮಂದಿರದ ಅರ್ಚಕ, 16 ಭದ್ರತಾ ಸಿಬ್ಬಂದಿಗೆ ಕೊರೋನಾ!

ಇದೇ ಕಾಂಗ್ರೆಸ್ ಪಕ್ಷ ಶ್ರೀರಾಮನ ಅಸ್ಥಿತ್ವವೇ ಇಲ್ಲ ಎಂದಿತ್ತು. ತಮ್ಮ ಅಧಿಕಾರವದಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಯಾವ ಪ್ರಯತ್ನಗಳನ್ನು ಮಾಡಲಿಲ್ಲ. ಬದಲಾಗಿ ಮಂದಿರ ನಿರ್ಮಾಣ ಮಾಡದಂತೆ ತಡೆಯಲಾಯಿತು. ಧ್ವಂಸಗೊಳಿಸಿದ ಬಾಬ್ರಿ ಮಸೀದಿ ಮರುಸ್ಥಾಪಿಸುವ  ಪ್ರಯತ್ನಕ್ಕೂ ಕಾಂಗ್ರೆಸ್ ಒಲವು ತೋರಿತ್ತು. ಇದೀಗ ಇದೇ ಕಾಂಗ್ರೆಸ್ ರಾಮ ಮಂದಿರ ಭೂಮಿ ಪೂಜೆಗೆ ಆಮಂತ್ರಿಸಿಲ್ಲ ಎಂದು ಆರೋಪ ಮಾಡುತ್ತಿದೆ. ಎಂದು ನರಸಿಂಹ ರಾವ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ದಿನ ಮತ್ತೆ ಬರುತ್ತೇನೆ ಎಂದಿದ್ದ ಮೋದಿ!.

ರಾಮ ಮಂದಿರ ನಿರ್ಮಾಣ ಈ ಹಂತಕ್ಕೆ ತಲುಪಲು ಕಾಂಗ್ರೆಸ್ ಮುಖ್ಯ ಕಾರಣ. ಕಾಂಗ್ರೆಸ್‌ಗೂ ಆಮಂತ್ರ ನೀಡಬೇಕು. ಆದರೆ ಬಿಜೆಪಿ ತಾನೇ ಮಾಡಿದೆ ಎಂದು ಬೀಗುತ್ತಿದೆ. ಬಿಜೆಪಿ ನಡೆ ಸರಿಯಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು.

Follow Us:
Download App:
  • android
  • ios