ಮುಂಬೈ(ಜು.30): ಕೊರೋನಾತಂಕ ಇಡೀ ದೇಶವನ್ನೇ ಆವರಿಸಿದೆ. ಹೀಗಾಗಿ ಜನರ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಅಗತ್ಯ ಬಿದ್ದರಷ್ಟೇ ಹೊರ ಹೋಗುವ ಮಂದಿ ಜ್ವರ, ನೆಗಡಿಯಾದರೂ ಬೆಚ್ಚಿ ಬೀಳುತ್ತಿದ್ದಾರೆ. ಹೀಗಿರುವಾಗ ಲ್ಯಾಬ್‌ ಟೆಕ್ನಿಷಿಯನ್ ಒಬ್ಬ ಕೊರೋನಾ ಭಯವನ್ನೇ ಬಂಡವಾಳವಾಗಿಸಿಕೊಂಡು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

1.25 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಂಟರ್‌ನ್ಯಾಷನಲ್‌ ಡ್ರಗ್ಸ್‌ ದಂಧೆಕೋರರು ಬೆಂಗ್ಳೂರಲ್ಲಿ ಸೆರೆ

ಹೌದು ಮಹಾರಾಷ್ಟ್ರದ ಅಮರಾವತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲೊಬ್ಬ ಲ್ಯಾಬ್ ಟೆಕ್ನಿಷಿಯನ್ ಕೊರೋನಾ ಟೆಸ್ಟ್‌ಗೆಂದು ಬಂದ 24 ವರ್ಷದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಪಡೆದಿದ್ದಾನೆ. ಇದಾದ ಬಳಿಕ ಯುವತಿ ನೀಡಿದ ದೂರಿನ ಮೇರೆಗೆ ಬಡ್ನೇರಾ ಪೊಲೀಸರು ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಧಿತ ಆರೋಪಿಯ ಹೆಸರು ಅಲ್ಪೇಶ್ ಅಶೋಕ್ ದೇಶ್ಮುಖ್‌ ಎನ್ನಲಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಯುವತಿ ಇಲ್ಲಿನ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ಅಲ್ಲೇ ಕೆಲಸಕ್ಕಿದ್ದ ಸಹೋದ್ಯೋಗಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ. ಹೀಗಿರುವಾಗ ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಕೆಲಸಕ್ಕಿದ್ದವರೆಲ್ಲರಿಗೂ ಜುಲೈ 28ರಂದು ಸರ್ಕಾರಿ ಲ್ಯಾಬ್‌ನಲ್ಲಿ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಆದರೆ ಆ ಲ್ಯಾಬ್‌ನ ಟೆಕ್ನಿಶಿಯನ್ ಇದನ್ನು ದುರುಪಯೋಗಪಡಿಸಿಕೊಂಡು ಯುವತಿಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ.

ಸೈಟ್‌ ಕೊಡಿಸುತ್ತೇನೆ ಎಂದು 50 ಕೋಟಿ ಪೀಕಿದ್ದ ಮಹಿಳೆ: ಟ್ಯಾಂಕ್‌ಗೆ ಹಾರಿ ಗೃಹಿಣಿ ಆತ್ಮಹತ್ಯೆ?

ಇನ್ನು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಹಾಗೂ ಸಿಬ್ಬಂದಿ ಪರಿಶ್ರಮ ಪಡುತ್ತಿದ್ದಾರೆ. ಸದ್ಯ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 15 ಲಕ್ಷ ದಾಟಿದ್ದು, ಐದು ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.