ದೆಹಲಿ(ಜು.30):  ಕೊರೋನಾ ವೈರಸ್ ಕಾರಣ ಜನರ ಜೀವನ ಕಷ್ಟವಾಗಿದೆ. ಆದಾಯದ ಮೂಲಕಕ್ಕೆ ಕತ್ತರಿ ಬಿದ್ದಿದೆ. ಇದರ ಬೆನ್ನಲ್ಲೇ ಇಂಧನ ದರ ಏರಿಕೆಯೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ, ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ಇದರಿಂದ ಅಗತ್ಯ ವಸ್ತು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರಿಗೆ ಡೀಸೆಲ್ ಬೆಲೆ ಏರಿಕೆ ಬಿಸಿ ತಪ್ಪಿಸಲು ದೆಹಲಿ ಸರ್ಕಾರ VAT ಕಡಿತಗೊಳಿಸಿದೆ.

ಪೆಟ್ರೋಲ್‌ಗಿಂತ ಈಗ ಡೀಸೆಲ್‌ ದುಬಾರಿ! 

ಡೀಸೆಲ್ ಮೇಲಿನ VAT(value added tax)ಶೇಕಡಾ 16.75 ರಷ್ಟು ಕಡಿತ ಮಾಡಲಾಗಿದೆ. ಈ ಮೊದಲು ದೆಹಲಿಯಲ್ಲಿ ಡೀಸೆಲ್ ಮೇಲೆ ಶೇಕಡಾ 30 ರಷ್ಟು VAT ತೆರಿಗೆ ಹಾಕಲಾಗುತ್ತಿತ್ತು. ಸದ್ಯ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 81.94 ರೂಪಾಯಿ ಆಗಿದೆ. ಡೀಸೆಲ್ ಬೆಲೆ ಪೆಟ್ರೋಲ್‌ಗಿಂತ ದುಬಾರಿಯಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 80.43 ರೂಪಾಯಿ. 

ಇಂಧನ ಬೆಲೆ ಏರಿಕೆ ಸರಿಯಲ್ಲ: ಮೋದಿಗೆ ಸೋನಿಯಾ ಪತ್ರ.

VAT ಕಡಿತದಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ 73.64 ರೂಪಾಯಿ  ಆಗಲಿದೆ. ವ್ಯಾಪಾರಿಗಳು, ಕೈಗಾರಿಕೆಗಳು ಡೀಸೆಲ್ ಮೇಲಿನ VAT ಕಡಿತಕ್ಕೆ ಮನವಿ ಮಾಡಿತ್ತು. ದೆಹಲಿ ಆರ್ಥಿಕತ ಪುನ್ಚೇತನ ದೃಷ್ಟಿಯಿಂದ ಡೀಸೆಲ್ ಮೇಲಿನ VAT ಕಡಿತಗೊಳಿಸಿ, ಡೀಸೆಲ್ ಬೆಲೆಯನ್ನ ಕಡಿಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.