ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆಯೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸುಶಾಂತ್‌ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಯುವ ನಟನ ಸಾವಿನ ಸುತ್ತ ಸಾವಿರ ಅನುಮಾನಗಳಿದ್ದು, ಈ ಸಂಬಂಧ ಹಲವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಖ್ಯಾತ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ.

ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಬಿಗ್ ಟ್ವಿಸ್ಟ್, ಪ್ರೇಯಸಿ ರಿಯಾ ನಾಪತ್ತೆ!

ಇಂತಹ ಸಂದರ್ಭದಲ್ಲಿಯೇ ಗುರುವಾರ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, ಹತ್ಯೆಯ ಸಿದ್ಧಾಂತ ಪ್ರತಿಪಾದಿಸುವ 24 ಅಂಶಗಳನ್ನು ಹಂಚಿಕೊಂಡಿದ್ದಾರೆ. ಡಿಪ್ರೆಷನ್ ಹಾಗೂ ಸೋಷಿಯಲ್ ಮೀಡಿಯಾದಿಂದ ದೂರವಿದ್ದಿದ್ದು ಮಾತ್ರ ಆತ್ಮಹತ್ಯೆ ಸಿದ್ಧಾಂತವನ್ನು ಹೋಲುತ್ತದೆ.

ಆದರೆ ಹತ್ಯೆ ಸಿದ್ಧಾಂತದಲ್ಲಿ ಕುತ್ತಿಗೆಯ ಮೇಲೆ  ಗುರುತು ಇರುವ ಸ್ಥಳ, ಬಾಯಿಯಿಂದ ನೊರೆ ಬಂದಿಲ್ಲ, ಆತ್ಮಹತ್ಯೆ ಸಂದರ್ಭದಲ್ಲಿ ಆಗುವಂತೆ ಕಣ್ಣು ಹೊರಗೆ ಬಂದಿಲ್ಲ ಇಷ್ಟೂ ಅಲ್ಲದೆ ಸುಶಾಂತ್ ಹಿಂದಿನ ದಿನ ಬೆಳಗ್ಗೆ ವಿಡಿಯೋ ಗೇಮ್ ಆಡಿಕೊಂಡಿದ್ದ ಎಂದು ಬರೆದಿದ್ದಾರೆ.

15 ಕೋಟಿ ಹಣ ಕಬಳಿಕೆ: ಸುಶಾಂತ್‌ ಕಂಪನಿಗೆ ರಿಯಾ ಸೋದರ ನಿರ್ದೇಶಕ!

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಏಕೆ ಅಂದುಕೊಳ್ಳಬೇಕು ಎಂದು ಬರೆದಿರುವ ಅವರು ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಆತ್ಮಹತ್ಯೆ ಸಿದ್ಧಾಂತ ಹಾಗೂ ಹತ್ಯೆಯ ಸಿದ್ಧಾಂತದ ಅಂಶಗಳು ನಮೂದಿಸಲ್ಪಟ್ಟಿವೆ.

ಸುಶಾಂತ್ ಸಿಂಗ್ ಸಾವಿನ ಬಗ್ಗೆ ತಂದೆ ಕೆಕೆ ಸಿಂಗ್ ಬಿಹಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ ಬಗ್ಗೆ ಪ್ರತಿಕ್ರಿಯಿಸಿ, ಎರಡೂ ರಾಜ್ಯದ ಪೊಲೀಸರು ಪ್ರತ್ಯೇಕವಾಗಿ ಒಂದೇ ಪ್ರಕರಣ ತನಿಖೆ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸಿಬಿಐ ತನಿಖೆ ಮಾಡಬೇಕು ಎಂದಿದ್ದಾರೆ. ಮುಂಬೈ ಪೊಲೀಸರು ಜೂ.14ರಿಂದಲೂ ತನಿಖೆ ನಡೆಸುತ್ತಲೇ ಇದ್ದಾರೆ ಎಂದಿದ್ದಾರೆ.

ಸುಶಾಂತ್ ಆತ್ಮಹತ್ಯೆ: ದೀಪಿಕಾಳನ್ನು ವಿಚಾರಣೆ ಮಾಡಿ ಎಂದ ಬಾಲಿವುಡ್ 'ಕ್ವೀನ್'

ಸುಶಾಂತ್ ಸಿಂಗ್ ದಾಖಲಿಸಿದ ದೂರಿನಲ್ಲಿ ರಿಯಾ ಸುಶಾಂತ್ ಖಾತೆಯಿಂದ 15 ಕೋಟಿ ರೂಪಾಯಿ ಡ್ರಾ ಮಾಡಿದ್ದಳು. ಆ ಹಣವನ್ನು ಸುಶಾಂತ್‌ಗೆ ಸಂಬಂಧವೇ ಇಲ್ಲದ ಖಾತೆಗಳಿಗೆ ವರ್ಗಾಯಿಸಿದ್ದಳು ಎಂದಿದ್ದಾರೆ.