ಭೂಮಿ ತೂಕದ ಹುಡುಗಿಯ ಫಿಟ್‌ನೆಸ್;ವರ್ಕೌಟ್ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್
ಒಂದು ಪೀಸ್ ಕೇಕ್ ತಿಂದ್ರೆ ಅದರಿಂದ ಕ್ರಿಯೇಟ್ ಆಗಿರೋ ಕೊಬ್ಬು ಕರಗಿಸೋ ತನಕ ಈಕೆಗೆ ತೃಪ್ತಿ ಇರಲ್ಲ. ಇತ್ತೀಚೆಗೆ ತನ್ನ 31ನೇ ಬತ್‌ರ್ ಡೇ ಆಚರಿಸಿಕೊಂಡ ಈ ನಟಿ ತನ್ನ ವರ್ಕೌಟ್ ಕತೆ ಹೇಳ್ಕೊಂಡಿದ್ದಾರೆ.
ದಿನಾ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತೀನಿ. ಇದರಿಂದ ನನ್ನ ಇಮ್ಯುನಿಟಿ ಹೆಚ್ಚಾಗಿರೋದು ನನಗೆ ಗೊತ್ತಾಗುತ್ತೆ
ಜಿಮ್‌ಗೆ ಹೋಗಲ್ಲ ಅಂದ್ರೆ ಮನೆಯಲ್ಲೇ ವರ್ಕೌಟ್ ಮಾಡಿ.
ತೂಕ ಹೆಚ್ಚಾಗಿದ್ರೆ ಆಲಸ್ಯವೂ ಹೆಚ್ಚಾಗುತ್ತೆ. ಹೈಟ್‌ಗೆ ತಕ್ಕ ತೂಕ ಇರೋ ಹಾಗೆ ನೋಡ್ಕೊಳ್ಳಿ.
ಮೈಂಡ್‌ಫುಲ್‌ನೆಸ್ ಈಗೀಗ ಫೇಮಸ್ ಆಗ್ತಿದೆ.
ದೇಹ, ಮನಸ್ಸಿನ ಬಗೆಗಿನ ಎಚ್ಚರದ ಸ್ಥಿತಿ ಇದು. ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ.
ಈ ಮೈಂಡ್‌ಫುಲ್‌ನೆಸ್ ಸಾಧಿಸಲು ವರ್ಕೌಟ್ ಸಹಕಾರಿ.
ವಾಲ್ನಟ್, ಕರ್ಜೂರ ತಿನ್ನೋದು ದೇಹಕ್ಕೆ ಸ್ಟೆ್ರಂಥ್ ಕೊಡುತ್ತೆ. ನನ್ನ ಡಯೆಟ್‌ನಲ್ಲಿ ಇವೆಲ್ಲ ಇದ್ದೇ ಇರುತ್ತವೆ.
ಇದು ತಿನ್ನೋಕ್ಕಾಗಲ್ಲ ಅನ್ನೋರು ಸೀಸನಲ್ ಆಗಿ ಸಿಗುವ ಹಣ್ಣು ತಿನ್ನೋದು ಉತ್ತಮ.
ಕೈಗಳನ್ನು ಆಗಾಗ ವಾಶ್ ಮಾಡಿಕೊಳ್ಳೋ ಅಭ್ಯಾಸ ಶುರು ಮಾಡಿದ್ದೇನೆ.
ನೀವೂ ಮಾಡಿ. ಜೊತೆಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದರೆ ಕ್ವಾರಂಟೇನ್ ಆಗಲು ಭಯ ಪಡಬೇಡಿ.