11:17 PM (IST) May 04

Assembly Election results 2026 Live Gangotri to Ganga Sagar- ಗಂಗೆ ಹರಿವಲ್ಲೆಲ್ಲಾ ಅರಳಿದ 'ಕಮಲ' - ನಿಜವಾಯ್ತು ಆ ಮಾತು

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಮಮತಾ ಬ್ಯಾನರ್ಜಿ ಸೋಲನುಭವಿಸಿದ್ದಾರೆ. ಈ ಗೆಲುವಿನ ನಂತರ ಮಾತನಾಡಿದ ಪ್ರಧಾನಿ ಮೋದಿ, ಗಂಗೆ ಹರಿಯುವಲ್ಲೆಲ್ಲಾ ಕಮಲ ಅರಳುತ್ತದೆ ಎಂದು ತಾವು ಹಿಂದೆ ಹೇಳಿದ್ದ ಮಾತು ನಿಜವಾಗಿದೆ ಎಂದು ಸ್ಮರಿಸಿಕೊಂಡರು.
Read Full Story
10:52 PM (IST) May 04

Assembly Election results 2026 Live West Bengal - ಟಿಎಂಸಿ ರೇ*ಪಿಸ್ಟ್ ಕಪಿಮುಷ್ಟಿಯಿಂದ ಹೆಣ್ಣುಮಕ್ಕಳ ಕಾಪಾಡಿದ ದಿಟ್ಟೆಗೆ ಭರ್ಜರಿ ಗೆಲುವು

ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ವಿರುದ್ಧ ನಡೆದ ದೌರ್ಜನ್ಯ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ರೇಖಾ ಪಾತ್ರ, ಮಹಿಳೆಯರ ಧ್ವನಿಯಾಗಿ ನಿಂತರು. ಅವರ ಈ ಧೈರ್ಯದ ಹೋರಾಟವೇ ಅವರನ್ನು ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಗೊಳ್ಳುವಂತೆ ಮಾಡಿತು.
Read Full Story
10:27 PM (IST) May 04

Assembly Election results 2026 Live West Bengal - ರೇ*ಪ್​ ಸಂತ್ರಸ್ತೆ ಅಮ್ಮನಿಗೆ ಗೆಲುವು; ಮಗಳ ಸಾವಿಗೆ ನ್ಯಾಯ ಕೋರಿ ದೀದಿ ವಿರುದ್ಧ ಸಿಡಿದೆದ್ದ ತಾಯಿ

2024ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್, ರಾಜಕೀಯ ಪ್ರವೇಶಿಸಿ ಬಿಜೆಪಿ ಅಭ್ಯರ್ಥಿಯಾಗಿ ಪಾನಿಹಟಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಅವರ ನ್ಯಾಯಕ್ಕಾಗಿನ ಹೋರಾಟದ ಹೊಸ ಅಧ್ಯಾಯವಾಗಿದೆ.

Read Full Story
09:56 PM (IST) May 04

Assembly Election results 2026 Live West Bengal Breaking - 'ಮಿನಿ ಇಂಡಿಯಾ'ದಲ್ಲಿಯೂ ದೀದಿ ಕೋಟೆ ಛಿದ್ರ - 11 ಸಾವಿರ ಮತಗಳಿಂದ ಹೀನಾಯ ಸೋಲು

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ, 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಅಂತ್ಯ ಹಾಡಿದೆ. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ತಮ್ಮ ಭದ್ರಕೋಟೆಯಾದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.
Read Full Story
08:02 PM (IST) May 04

Assembly Election results 2026 Live ನಟಿ ತ್ರಿಷಾ ಹುಟ್ಟುಹಬ್ಬದಂದೇ 'ವಿಜಯ'ದ ಮಾಲೆ! ಸಿಎಂ ಆಗೋ ಬಗ್ಗೆ 12 ವರ್ಷಗಳ ಹಿಂದೆ ಹೇಳಿದ್ದ ನಟಿ- ವಿಡಿಯೋ

ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ, ಈ ಹಿಂದೆ ತಾನು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದ ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

 

Read Full Story
05:59 PM (IST) May 04

Assembly Election results 2026 Live ಅತೀ ಹೆಚ್ಚು ಕಾಲ 'ಸಿಎಂ' ಆಗಿ ತಮಿಳುನಾಡನ್ನು ಆಳಿದವರು ಯಾರು?

ಆರಂಭದ ದಿನಗಳಲ್ಲಿ ಮದ್ರಾಸ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಪತ್ಯವಿತ್ತು. 1952ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ, ಚಾಣಕ್ಯ ರಾಜಾಜಿ (ಸಿ. ರಾಜಗೋಪಾಲಚಾರಿ) ಸಿಎಂ ಆದರು. ಆದರೆ, ಅವರ 'ಕುಲ ಕಲ್ವಿತ್' ಯೋಜನೆಗೆ ಭಾರಿ ವಿರೋಧ ವ್ಯಕ್ತವಾದಾಗ, ಅಧಿಕಾರ ಬಿಟ್ಟುಕೊಡಬೇಕಾಯಿತು. ಅಲ್ಲಿಗೆ ಶುರುವಾಗಿದ್ದೇ ಕೆ. ಕಾಮರಾಜ್ ಯುಗ! ಮುಂದೇನಾಯ್ತು ನೋಡಿ..

Read Full Story
05:58 PM (IST) May 04

Assembly Election results 2026 Live ಪಂಚರಾಜ್ಯ ಚುನಾವಣೆಗೆ ₹243 ಕೋಟಿ ಬೆಟ್ಟಿಂಗ್‌! ತ.ನಾಡಲ್ಲಿ ಅತಿ ಹೆಚ್ಚು ಬೆಟ್‌ ಎಲ್ಲವೂ ತಲೆಕೆಳಗಾಯ್ತು!

ಪಂಚರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ನಿಷೇಧಿತ ಪಾಲಿಮಾರ್ಕೆಟ್ ವೇದಿಕೆಯಲ್ಲಿ ಕ್ರಿಪ್ಟೋ ಮೂಲಕ ₹242.8 ಕೋಟಿಗೂ ಹೆಚ್ಚು ಬೆಟ್ಟಿಂಗ್ ನಡೆದಿದೆ. ತಮಿಳುನಾಡಿನಲ್ಲಿ ಬೆಟ್ಟಿಂಗ್ ನಿರೀಕ್ಷೆಗಳು ತಲೆಕೆಳಗಾಗಿದ್ದರೆ, ಕೇರಳದ ಬಿಜೆಪಿ ಅಭ್ಯರ್ಥಿಯೊಬ್ಬರು ತಮ್ಮ ಗೆಲುವಿನ ಮೇಲೆ ಕಟ್ಟಿದ್ದ 1 ಕೋಟಿ ರೂ. ಪಣವನ್ನು ಸೋತಿದ್ದಾರೆ.

Read Full Story
04:42 PM (IST) May 04

Assembly Election results 2026 Live ತಮಿಳುನಾಡು: ನಟ ವಿಜಯ್ ಟಿವಿಕೆ ಪಕ್ಷ ಐತಿಹಾಸಿಕ ಮುನ್ನಡೆಗೆ ಪ್ರಮುಖ ಕಾರಣಗಳಿವು, ಬದಲಾವಣೆ ಬಯಸಿದ್ದು ಇವರೇ..!

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಜಯ್ ಅವರ ಜನಪ್ರಿಯತೆ, ಯುವಜನರ ಬೆಂಬಲ, ಮತ್ತು ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ನೀಡಿದ ಭರವಸೆಗಳು ಈ ಐತಿಹಾಸಿಕ ಮುನ್ನಡೆಗೆ ಕಾರಣವಾಗಿವೆ.

Read Full Story
04:27 PM (IST) May 04

Assembly Election results 2026 Live ಭಾರತವೀಗ ಕಮ್ಯೂನಿಸ್ಟ್ ಮುಕ್ತ: ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನವದೆಹಲಿಯಲ್ಲಿ ಹೇಳಿಕೆ,

ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಫಲಿತಾಂಶ ಎನ್‌ಡಿಎ ಮತ್ತು ಬಿಜೆಪಿ ಗೆ ಬಹುದೊಡ್ಡ ಗೆಲುವು ತಂದುಕೊಟ್ಟಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 12 ವರ್ಷ ಗಳು ಆದ್ರೂ ಜನರ ಬೆಂಬಲ ಈ ಗೆಲುವು ಕೊಟ್ಟಿದ್ದಾರೆ. ಕೇರಳ ಬಿಟ್ರೆ ಕಾಂಗ್ರೆಸ್ ಹುಡುಕುವಂತಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಕಾಂಗ್ರೆಸ್ ಝಿರೋ ಆಗಿದೆ. ಪಶ್ಚಿಮ ಬಂಗಾಳದ ಫಲಿತಾಂಶ ಇಂಡಿ ಘಟಬಂಧನ್‌ಗೆ ದೊಡ್ಡ ಸಂದೇಶ ಕೊಟ್ಟಿದೆ. ತುಷ್ಟೀಕರಣ ರಾಜಕಾರಣ, ಬಹುಸಂಖ್ಯಾತ ತಿರಸ್ಕರಿಸಿದ್ದಕ್ಕೆ ಜನ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಎಡಪಕ್ಷಗಳು ಕೇರಳದಲ್ಲಿ ಸೋತಿದೆ.. ಕೇವಲ ಜೆಎನ್‌ಯು ಗೆ ಸೀಮಿತವಾಗಿದೆ. ದೇಶ ಕಮ್ಯುನಿಸ್ಟ್ ಮುಕ್ತ ಆಗಿದೆ. ಕೇರಳದಲ್ಲಿ ಮೂರು ಸ್ಥಾನ ಬಿಜೆಪಿ ಗೆದ್ದಿದೆ. ಕೇರಳದಲ್ಲೂ ಕಾಂಗ್ರೆಸ್ ಸ್ವಂತವಾಗಿ ಬಂದಿಲ್ಲ.. ಮೈತ್ರಿಯಿಂದ ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳ ದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು.. ಹಲವು ಕಡೆ ಮತದಾನ ಮಾಡುವುದಕ್ಕೆ ಕಳೆದ ಬಾರಿ ಬಿಟ್ಟಿರಲಿಲ್ಲ. 

04:10 PM (IST) May 04

Assembly Election results 2026 Live ಉಚಿತ ಯೋಜನೆಗಳಿಂದ ಜನರನ್ನು ಮರಳು ಮಾಡಲು ಆಗೋಲ್ಲ: ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ...

ಪಂಚ ಫಲಿತಾಂಶ ಜನ ಮೋದಿಯವರ ಮೇಲೆ ಇಟ್ಟಿರುವ ನಂಬಿಕೆ ಮತ್ತಷ್ಟು ದೃಢ ಪಡಿಸಿದೆ. ಉಚಿತ ಘೋಷಣೆಗಳಿಂದ ಜನರನ್ನು ಹೆಚ್ಚು ದಿನ ಮರುಳು ಮಾಡಲು ಆಗಲ್ಲ ಅನ್ನೋದನ್ನು ಫಲಿತಾಂಶ ತೋರಿಸಿದೆ. ನಾನು ಮೋದಿ, ಅಮಿತ್ ಷಾ ನಮ್ಮ ಎಲ್ಲ ನಾಯಕರಿಗೆ ಅಭಿನಂದನೆ ತಿಳಿಸ್ತೇನೆ.

ದಾವಣಗೆರೆ ಸೋಲು ನೋವಾಗಿದೆ. ದಾವಣಗೆರೆ ಗೆದ್ದೆ ಗೆಲ್ಲುತ್ತೇವೆ ಎಂದು ಕೊಂಡಿದ್ದೆವು. ಆದರೆ ಕೊನೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಮುಂದಿನ ದಿನಗಳಲ್ಲಿ ಇದೆಲ್ಲಾ ಸರಿ ಪಡಿಸಿಕೊಂಡು ಹೋಗುತ್ತೇವೆ ನಾನು ಮುಂದಿನ ದಿನಗಳಲ್ಲಿ ಜಿಲ್ಲಾ ಪ್ರವಾಸ ಮಾಡುತ್ತೇನೆ ವಾರಕ್ಕೊಂದು ಜಿಲ್ಲೆಗೆ ಹೋಗುತ್ತೇನೆಂದರು.

03:59 PM (IST) May 04

Assembly Election results 2026 Live ಕೇರಳಂಗೆ 5 ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ, ಇದೇ ಗೆಲುವಿಗೆ ಮೂಲ ಕಾರಣ

 

Scroll to load tweet…

 

03:04 PM (IST) May 04

Assembly Election results 2026 Live ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲವು: ಮೋದಿ ನಾಯಕತ್ವಕ್ಕೆ ಸಾಕ್ಷಿ

ನಿಖಿಲ್ ಕುಮಾರಸ್ವಾಮಿ ಟ್ವೀಟ್

 

Scroll to load tweet…

 

02:41 PM (IST) May 04

Assembly Election results 2026 Live ಕೇರಳದಲ್ಲಿ ಕಾಂಗ್ರೆಸ್ ಗೆದ್ದಿದ್ಯಾಕ? ಕೈ ಎಂಪಿ ಶಶಿ ತರೂರ್ ಹೇಳಿದ್ದೇನು?

ಬಹು ವರ್ಷಗಳ ಎಲ್‌ಡಿಎಫ್ ಆಡಳಿತಕ್ಕೆ ಕೇರಳಂನಲ್ಲಿ ಬ್ರೇಕ್ ಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ಜಯಭೇರಿ ಸಾಧಿಸಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದ್ದು, ಯುವಕರ ಕೆಲಸಕ್ಕಾಿ ರಾಜ್ಯವನ್ನು ತೊರೆಯುತ್ತಿದ್ದಾರೆ. ಅವರೆಲ್ಲರೂ ಸಿಟ್ಟಾಗಿದ್ದು ಕಾಂಗ್ರೆಸ್ಸಿನ ಗೆಲುವಿಗೆ ಮುಖ್ಯ ಕಾರಣವೆಂದು ಕಾಂಗ್ರೆಸ್ ಎಂಪಿ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

#WATCH | Thiruvananthapuram | On UDF leading in Keralam, Congress MP Shashi Tharoor says, "There are many factors and the anti-incumbency against the 10-year tenure of the LDF. What is happening in Keralam is that youth from the state are migrating to other states and abroad… pic.twitter.com/U6JP6emPqs

— ANI (@ANI) May 4, 2026

 

02:39 PM (IST) May 04

Assembly Election results 2026 Live ಶಾಕಿಂಗ್ ಸತ್ಯ - ದಳಪತಿ ವಿಜಯ್ ತಂದೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಡೈರೆಕ್ಟರ್; ಎಷ್ಟೋ ಜನಕ್ಕೆ ಗೊತ್ತಿಲ್ಲ!

ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಬಾಲನಟನಾಗಿ ಮಿಂಚಿದ ಹಲವು ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ವಿಜಯ್ ಅವರನ್ನು ನಾಯಕನನ್ನಾಗಿ ಮಾಡಿ 'ನಾಲಯ ತೀರ್ಪು' ಚಿತ್ರದ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡಿದರು. ಕನ್ನಡದ ಜೊತೆ ನಂಟೇನು?

Read Full Story
02:29 PM (IST) May 04

Assembly Election results 2026 Live ಒಂದೇ ಒಂದು ಪದದಿಂದ ಜನರ ಮನಸ್ಸನ್ನು ಬದಲಿಸಿದ Thalapathy Vijay; ಆಡಳಿತದಲ್ಲಿದ್ದ ಪಕ್ಷಕ್ಕೆ ಪೆಟ್ಟು ಕೊಟ್ಟ ನಟ

ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಒಂದೇ ಒಂದು ಪದದಿಂದ ಜನರ ಮತವನ್ನು ತಮ್ಮತ್ತ ಸೆಳೆಯುವ ಹಾಗೆ ಮಾಡಿದ್ದರು. ವಿಜಯ್ ಅವರ ಈ ಸೌಮ್ಯ ನಡೆ ಎಲ್ಲರನ್ನು ಆಕರ್ಷಿಸಿದ್ದು, ಡಿಎಂಕೆಯ ಆಕ್ರಮಣಕಾರಿ ರಾಜಕೀಯ ಶೈಲಿಗೆ ತಣ್ಣೀರೆರಚಿದೆ.

Read Full Story
01:53 PM (IST) May 04

Assembly Election results 2026 Live ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ, ಸನ್ ಟಿವಿ ಷೇರುಗಳು ದಿಢೀರ್ ಕುಸಿತ, ಕಾರಣವಾಗಿದ್ದು ಈ ಪಕ್ಷ!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಡಿಎಂಕೆಗಿಂತ ಮುನ್ನಡೆ ಸಾಧಿಸುತ್ತಿದ್ದಂತೆ, ಡಿಎಂಕೆ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವ ಸನ್ ಟಿವಿ ಷೇರುಗಳು ತೀವ್ರ ಕುಸಿತ ಕಂಡಿವೆ. ಈ ರಾಜಕೀಯ ಬದಲಾವಣೆಯು ಷೇರು ಮಾರುಕಟ್ಟೆಯ ಮೇಲೆ ಬೀರಿದ ಪರಿಣಾಮ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹಿನ್ನಡೆಯನ್ನು ಈ ಲೇಖನ ವಿವರಿಸುತ್ತದೆ.

Read Full Story
01:26 PM (IST) May 04

Assembly Election results 2026 Live ಲೈಟ್ಸ್‌, ಕ್ಯಾಮೆರಾ..ಸರ್ಕಾರ್‌: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು TVK ಮುಂದಿರುವ ಆಯ್ಕೆಗಳೇನು?

ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸಲು ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

 

Read Full Story
01:03 PM (IST) May 04

Assembly Election results 2026 Live 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಭಾರತದ ಜನತೆ ಮತ್ತೊಮ್ಮೆ ಭರ್ಜರಿ ಬೆಂಬಲ: ಎಚ್ಡಿಕೆ ಟ್ವೀಟ್

ಪಂಚ ರಾಜ್ಯಗಳ ಚುನಾವಣೆ ಹಿನ್ನಲೆ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್

​ದೇಶದ ಅಭಿವೃದ್ಧಿ ಮತ್ತು 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಭಾರತದ ಜನತೆ ಮತ್ತೊಮ್ಮೆ ಬೆಂಬಲಿಸಿದ್ದಾರೆ.  ಪ್ರಧಾನಿ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಮಂತ್ರಕ್ಕೆ ಜನತೆ ಮನ್ನಣೆ ನೀಡಿದ್ದಾರೆ. ಚುನಾವಣಾ ಜಯವಲ್ಲ, ಇದು ಬದಲಾಗಿ ದೇಶದ ಜನರ ಅಚಲ ನಂಬಿಕೆಯ ಪ್ರತೀಕವಾಗಿದೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಸಂಘಟನಾತ್ಮಕ ಕೌಶಲ ಮತ್ತು ಕಾರ್ಯತಂತ್ರವು ಎನ್‌ಡಿಎ ಮೈತ್ರಿಕೂಟದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಿಜಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ತೋರಿದ ಶ್ರಮ ಹಾಗೂ ಸಂಘಟನಾ ಶಕ್ತಿ ಈ ಐತಿಹಾಸಿಕ ಫಲಿತಾಂಶಕ್ಕೆ ಮುನ್ನುಡಿ ಬರೆದಿದೆ. 
 

Scroll to load tweet…

 

12:56 PM (IST) May 04

Assembly Election results 2026 Live ಮತ ಎಣಿಕೆ ಕೇಂದ್ರಗಳ ಬಳಿಯೇ ಇರಿ, ಮತಗಳನ್ನು ತಿರುಚಲಾಗುತ್ತಿದೆ: ಮಮತ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ  ಟಿಎಂಸಿ ಕಾರ್ಯಕರ್ತರಿಗೆ ಮತ ಎಣಿಕೆ ಕೇಂದ್ರಗಳ ಬಳಿಯೇ ಇರಲು ಕರೆ ನೀಡಿದ್ದು, ಸೂರ್ಯಾಸ್ತದ ವೇಳೆ ಎಲ್ಲವೂ ಬದಲಾಗಲಿದೆ ಎಂದಿದ್ದಾರೆ. ಬಿಜೆಪಿ ತನ್ನ ಪ್ರಭಾವ ಬೀರಿ, ಮತಗಳನ್ನು ತಿರುಚಲಾಗಿದ್ದು, ಹಲವೆಡೆ ಮತ ಎಣಿಕೆಯೇ ನಡೆಯುತ್ತಿಲ್ಲವೆಂದು ಮಮತಾ ಆರೋಪಿಸಿದ್ದಾರೆ. 

ಸೋಲು ಒಪ್ಪಿಕೊಳ್ಳಲು ತಯಾರಿಲ್ಲದ ಟಿಎಂಸಿ ಅಭ್ಯರ್ಥಿಗಳು. 

 

Scroll to load tweet…

 

12:53 PM (IST) May 04

Assembly Election results 2026 Live ನಟ ವಿಜಯ್‌ಗೆ ಸೋಲು ಅನ್ನೋ ಸುಳ್ಳು ಸುದ್ದಿ ಕೇಳಿ ಕತ್ತು ಕುಯ್ದುಕೊಂಡ ಅಭಿಮಾನಿ!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸೋಲುತ್ತಾರೆ ಎಂಬ ವದಂತಿ ಕೇಳಿ ಮನನೊಂದ ಅವರ ಕಟ್ಟಾ ಅಭಿಮಾನಿಯೊಬ್ಬರು ಕೃಷ್ಣಗಿರಿಯಲ್ಲಿ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಕೆ. ಮಹೇಂದ್ರನ್ ಎಂಬ ಯುವಕ ಚೂಪಾದ ವಸ್ತುವಿನಿಂದ ಕುತ್ತಿಗೆ ಕುಯ್ದುಕೊಂಡಿದ್ದಾನೆ.

Read Full Story