MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ನಟಿ ತ್ರಿಷಾ ಹುಟ್ಟುಹಬ್ಬದಂದೇ 'ವಿಜಯ'ದ ಮಾಲೆ! ಸಿಎಂ ಆಗೋ ಬಗ್ಗೆ 12 ವರ್ಷಗಳ ಹಿಂದೆ ಹೇಳಿದ್ದ ನಟಿ- ವಿಡಿಯೋ

ನಟಿ ತ್ರಿಷಾ ಹುಟ್ಟುಹಬ್ಬದಂದೇ 'ವಿಜಯ'ದ ಮಾಲೆ! ಸಿಎಂ ಆಗೋ ಬಗ್ಗೆ 12 ವರ್ಷಗಳ ಹಿಂದೆ ಹೇಳಿದ್ದ ನಟಿ- ವಿಡಿಯೋ

ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ, ಈ ಹಿಂದೆ ತಾನು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದ ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. 

2 Min read
Author : Suchethana D
Published : May 04 2026, 08:02 PM IST
Share this Photo Gallery
  • FB
  • TW
  • Linkdin
  • Whatsapp
16
ತಮಿಳುನಾಡಿನಲ್ಲಿ ಇತಿಹಾಸ
Image Credit : Asianet News

ತಮಿಳುನಾಡಿನಲ್ಲಿ ಇತಿಹಾಸ

ತಮಿಳುನಾಡು ರಾಜಕೀಯವು ಹೊಸ ಇತಿಹಾಸವನ್ನೇ ಬರೆದಿದೆ. ದಶಕಗಳವರೆಗೆ ಚುಕ್ಕಾಣಿ ಹಿಡಿದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ ನಟ ದಳಪತಿ ವಿಜಯ್​ ಅವರ ‘ತಮಿಳು ವೆಟ್ರಿ ಕಳಗಂ'(ಟಿವಿಕೆ) ಭರ್ಜರಿ ಫಲಿತಾಂಶ ತಂದಿದೆ. ಸದ್ಯದ ಮಟ್ಟಿಗೆ ಬಹುಮತವಿಲ್ಲದಿದ್ದರೂ, ಇತರ ಪಕ್ಷಗಳ ಜೊತೆ ಸೇರಿ ಮೈತ್ರಿ ಮಾಡಿಕೊಂಡು ವಿಜಯ್​ ಅವರು ಮುಖ್ಯಮಂತ್ರಿ ಆಗುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗುವೆ.

26
ದಳಪತಿ ವಿಜಯ್​ ಡಿವೋರ್ಸ್ಸ್
Image Credit : Asianet News

ದಳಪತಿ ವಿಜಯ್​ ಡಿವೋರ್ಸ್ಸ್

ವಿಜಯ್​ ಮತ್ತು ಅವರ ಪತ್ನಿ ಸಂಗೀತಾ ನಡುವಿನ ಡಿವೋರ್ಸ್​ ವಿವಾದ, ಅದರ ಬೆನ್ನಲ್ಲೇ ವಿಜಯ್​ ಜೊತೆ ತ್ರಿಷಾ ಕೃಷ್ಣನ್​ಹೆಸರು ಇವೆಲ್ಲ ವಿವಾದಗಳ ನಡುವೆ ವಿಜಯ್​ ಅವರು ಗೆಲುವಿನ ನಗೆ ಬೀರುತ್ತಿದ್ದಾರೆ. ಇವರ ಪಾಲಿಗೆ ನಟಿ ತ್ರಿಷಾ (Trisha krishnan) ಅವರೇ ಲಕ್ಕಿ ಚಾರ್ಮ್​ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಫಲಿತಾಂಶದ ಬೆನ್ನಲ್ಲೇ ತ್ರಿಷಾ ವಿಜಯ್​ ಮನೆಗೆ ಓಡಿ ಹೋಗಿರುವುದು.

Related Articles

Related image1
ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?
Related image2
ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್
36
ತ್ರಿಷಾ ಕೃಷ್ಣನ್​ ಹಳೆಯ ವಿಡಿಯೋ
Image Credit : instagram

ತ್ರಿಷಾ ಕೃಷ್ಣನ್​ ಹಳೆಯ ವಿಡಿಯೋ

ಈ ಮಧ್ಯೆ, ತ್ರಿಷಾ ಕೃಷ್ಣನ್​ ಅವರ ಹಳೆಯ ವಿಡಿಯೋ ಒಂದು ಇದೀಗ ವೈರಲ್​ ಆಗುತ್ತಿದೆ. 2004 ರ ಸಂದರ್ಶನದ ವಿಡಿಯೋ ಇದಾಗಿದ್ದು, ಇವತ್ತಿನ ರಾಜಕೀಯ ಫಲಿತಾಂಶದಿಂದಾಗಿ ಮತ್ತೆ ವೈರಲ್​ ಆಗುತ್ತಿದೆ.

46
12 ವರ್ಷಗಳ ಹಿಂದಿನ ವಿಡಿಯೋ
Image Credit : instagram

12 ವರ್ಷಗಳ ಹಿಂದಿನ ವಿಡಿಯೋ

ತ್ರಿಷಾ ಅವರ ಚಲನಚಿತ್ರ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ನಡೆದ ಸಂದರ್ಶನದಲ್ಲಿ, ತ್ರಿಷಾ ಅವರನ್ನು ಅವರ ಮಹತ್ವಾಕಾಂಕ್ಷೆಗಳು ಮತ್ತು ದೀರ್ಘಕಾಲೀನ ಗುರಿಗಳ ಬಗ್ಗೆ ಕೇಳಲಾಯಿತು. ಆ ಸಮಯದಲ್ಲಿ ಅವರು ಮುಂದಿನ ಹತ್ತು ವರ್ಷಗಳಲ್ಲಿ ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಬಯಸುವೆ ಎಂದಿದ್ದರು.

56
ಮುಖ್ಯಮಂತ್ರಿ ಆಗುವ ಆಸೆ
Image Credit : x

ಮುಖ್ಯಮಂತ್ರಿ ಆಗುವ ಆಸೆ

ವೀಡಿಯೊದಲ್ಲಿ, ತ್ರಿಷಾ ತಮಾಷೆಯಾಗಿ, "ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ಪ್ರಾಮಾಣಿಕವಾಗಿ! ಕಾದು ನೋಡಿ; ಮುಂದಿನ 10 ವರ್ಷಗಳಲ್ಲಿ ನಾನು ಅದನ್ನು ಸಾಧಿಸುತ್ತೇನೆ ಎಂದಿದ್ದರು. ಮುಖ್ಯಮಂತ್ರಿಯಾದ ನಂತರ ನೀವು ಏನು ಮಾಡುತ್ತೀರಿ ಎಂದು ಅವರನ್ನು ಕೇಳಲಾಯಿತು, ಅದಕ್ಕೆ ತ್ರಿಷಾ, ಹಾಸ್ಯಮಯ ಉತ್ತರವನ್ನು ನೀಡಿ ಮೊದಲು, ನೀವೆಲ್ಲರೂ ಮತ ಚಲಾಯಿಸಿ ಮತ್ತು ನನ್ನನ್ನು ಆಯ್ಕೆ ಮಾಡಿ, ನಂತರ ನಾನು ನಿಮಗೆ ಹೇಳುತ್ತೇನೆ ಎಂದಿದ್ದರು.

66
 ವಿಜಯ್​ ನಿವಾಸಕ್ಕೆ ಭೇಟಿ
Image Credit : trisha krishnan instagram

ವಿಜಯ್​ ನಿವಾಸಕ್ಕೆ ಭೇಟಿ

ಇಂದು 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತ್ರಿಷಾ, ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಅವರ ಭೇಟಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ತ್ರಿಷಾ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಕಾರಿನಲ್ಲಿ ಆಗಮಿಸುತ್ತಿರುವುದು ಕಂಡುಬಂದಿದೆ. ಇದಾಗಲೇ, ನಟಿ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದಿದ್ದರು. ಬೆಟ್ಟದ ದೇವಾಲಯದ ದೃಶ್ಯಗಳು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದವು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದಳಪತಿ ವಿಜಯ್
ತಮಿಳುನಾಡು
ಚುನಾವಣೆ
ಭಾರತ ಸುದ್ದಿ
ಮನರಂಜನಾ ಸುದ್ದಿ
ರಾಜಕೀಯ ಸುದ್ದಿ
ತ್ರಿಷಾ ಕೃಷ್ಣನ್

Latest Videos
Recommended Stories
Recommended image1
Vijay Horoscope: ದಳಪತಿ ಗೆಲುವಿನ ಹಿಂದಿನ ಜ್ಯೋತಿಷ್ಯ ರಹಸ್ಯ ಬಯಲು; ಅದೊಂದು ಯೋಗವೇ ಈ 'ವಿಜಯ'ಕ್ಕೆ ಕಾರಣ!?
Recommended image2
ಪಶ್ಚಿಮ ಬಂಗಾಳ ಚುನಾವಣೆ 2026: ಮಮತಾ ಬ್ಯಾನರ್ಜಿ ಸಾಮ್ರಾಜ್ಯದಲ್ಲಿ ಬಿಜೆಪಿ 203 ಸ್ಥಾನ ಗೆಲ್ಲಲು ಈ 5 ಅಂಶಗಳೇ ಕಾರಣ!
Recommended image3
ಪಂಚರಾಜ್ಯ ಚುನಾವಣೆಗೆ ₹243 ಕೋಟಿ ಬೆಟ್ಟಿಂಗ್‌! ತ.ನಾಡಲ್ಲಿ ಅತಿ ಹೆಚ್ಚು ಬೆಟ್‌ ಎಲ್ಲವೂ ತಲೆಕೆಳಗಾಯ್ತು!
Related Stories
Recommended image1
ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?
Recommended image2
ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved