Kidney Stone: ಆರೋಗ್ಯ ತಜ್ಞರು 3 ಸಲಹೆಗಳನ್ನು ನೀಡಿದ್ದು, ಇವು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವಲ್ಲಿ ಅಥವಾ ಈಗಾಗಲೇ ಇರುವ ಕಲ್ಲುಗಳನ್ನು ತೊಡೆದುಹಾಕಲು ಪರಿಣಾಮಕಾರಿಯಾಗಬಹುದು.
Dietary tips: ಮೂತ್ರಪಿಂಡದಲ್ಲಿ ಕಲ್ಲುಗಳು (Kidney Stone) ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಸಾಮಾನ್ಯ ಆದರೆ ನೋವಿನ ಸಮಸ್ಯೆಯಾಗಿದೆ. ಒಂದು ವೇಳೆ ಈ ಸಮಸ್ಯೆ ಎದುರಾದರೆ ಸರಳ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಹ ನಿಮಗೆ ಸವಾಲಾಗಿ ಕಾಣಬಹುದು.ಇಂದಿನ ಕಾಲದಲ್ಲಿಯಂತೂ ಕಿಡ್ನಿ ಕಲ್ಲಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಕಲ್ಲುಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಒಂದು ವೇಳೆ ಕಿಡ್ನಿಯಲ್ಲಿ ಕಲ್ಲಾದರೆ ತೀವ್ರ ನೋವನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ನೋವು ಎಷ್ಟು ಹೆಚ್ಚಾಗುತ್ತದೆ ಎಂದರೆ ಔಷಧಿಗಳು ಸಹ ಪರಿಣಾಮ ಬೀರಲು ಸಮಯ ತೆಗೆದುಕೊಳ್ಳುತ್ತದೆ. ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಲೇಖನವು ನಿಮಗೆ ಸಹಾಯಕವಾಗಬಹುದು. ಇಲ್ಲಿ ಈ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ತಜ್ಞರು ತಿಳಿಸಿದ್ದಾರೆ ನೋಡಿ..
ತಜ್ಞರು ಹೇಳುವುದೇನು?
ಈ ವಿಷಯಕ್ಕೆ ಸಂಬಂಧಿಸಿದಂತೆ ಏಮ್ಸ್‌ನಲ್ಲಿ ಕೆಲಸ ಮಾಡಿರುವ ನರವಿಜ್ಞಾನಿ ಡಾ. ಪ್ರಿಯಾಂಕಾ ಸೆಹ್ರಾವತ್ (AIIMS expert Dr. Priyanka Sehrawat) ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೈದ್ಯರು, 'ಮೂತ್ರದಲ್ಲಿ ಅತಿಯಾದ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಕಲ್ಲು ರಚನೆಗೆ ಮುಖ್ಯ ಕಾರಣ.' ಈ ಎರಡೂ ಅಂಶಗಳು ಒಟ್ಟಿಗೆ ಬೆರೆತಾಗ, ಅವು ಹರಳುಗಳ ರೂಪದಲ್ಲಿ ಗಟ್ಟಿಯಾಗುತ್ತವೆ ಮತ್ತು ಕ್ರಮೇಣ ಕಲ್ಲಿನ ಆಕಾರವನ್ನು ಪಡೆಯುತ್ತವೆ. ಆದರೆ ಗುಡ್ ನ್ಯೂಸ್ ಎಂದರೆ ನಿಮ್ಮ ಆಹಾರದಲ್ಲಿ ಕೇವಲ 3 ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ನೀವು ಮೂತ್ರಪಿಂಡದಲ್ಲಿ ಕಲ್ಲುಗಳು ಆಗುವುದನ್ನು ತಪ್ಪಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಕಲ್ಲುಗಳನ್ನು ತೊಡೆದುಹಾಕಬಹುದು ಎಂದು ತಿಳಿಸಿದ್ದಾರೆ.
ಕಿಡ್ನಿ ಸ್ಟೋನ್ ಆಗಿದ್ದರೆ ಹೀಗೆ ಮಾಡಿ...
ಉಪ್ಪು ಸೇವನೆ ಕಡಿಮೆ ಮಾಡಿ
ಉಪ್ಪು ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಡಾ. ಸೆಹ್ರಾವತ್ ಹೇಳುತ್ತಾರೆ. ಕ್ಯಾಲ್ಸಿಯಂ ಮಟ್ಟಗಳು ಅಧಿಕವಾಗಿದ್ದಾಗ, ಅದು ಆಕ್ಸಲೇಟ್‌ನೊಂದಿಗೆ ಸೇರಿಕೊಂಡು ಕಲ್ಲುಗಳನ್ನು ರೂಪಿಸುತ್ತದೆ. ಅನೇಕ ಅಧ್ಯಯನಗಳ ಫಲಿತಾಂಶಗಳು ದಿನಕ್ಕೆ 5 ಗ್ರಾಂ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ, ಕಲ್ಲು ರಚನೆಯ ಸಾಧ್ಯತೆಗಳು ಬಹಳವಾಗಿ ಕಡಿಮೆಯಾಗುತ್ತವೆ ಎಂದು ತೋರಿಸುತ್ತವೆ. ಆದ್ದರಿಂದ, ನಿಮ್ಮ ಉಪ್ಪು ಸೇವನೆಯನ್ನು ಕಡಿಮೆ ಮಾಡಿ.
ಇದಲ್ಲದೆ, ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಹೊಂದಿರುವ ಹಣ್ಣುಗಳನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ನಿಂಬೆ, ಕಿತ್ತಳೆ ಮತ್ತು ಕಿವಿ ಇತ್ಯಾದಿ. ವೈದ್ಯರ ಪ್ರಕಾರ, ಸಿಟ್ರಿಕ್ ಆಮ್ಲವು ಮೂತ್ರದಲ್ಲಿ ಕಲ್ಲುಗಳ ರಚನೆಯನ್ನು ತಡೆಯುವ ಅಂಶಗಳನ್ನು ಹೆಚ್ಚಿಸುತ್ತದೆ ಮತ್ತು ಈಗಾಗಲೇ ಇರುವ ಸಣ್ಣ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ಆಕ್ಸಲೇಟ್ ನಿಂದ ದೂರ
ವೈದ್ಯರ ಪ್ರಕಾರ ಕಲ್ಲುಗಳಾದಾಗ ಮಾಡಬೇಕಾದ ಎರಡನೇಯ ಕೆಲಸ ಆಕ್ಸಲೇಟ್ ಸಮೃದ್ಧವಾಗಿರುವ ಆಹಾರವನ್ನು ತಪ್ಪಿಸುವುದು. ಹೌದು ಈ ಅವಧಿಯಲ್ಲಿ ಪಾಲಕ್, ಸಿಹಿ ಗೆಣಸು, ಬೀಟ್ರೂಟ್ ನಂತಹ ಪದಾರ್ಥಗಳನ್ನು ಕಡಿಮೆ ಸೇವಿಸಿ. ಅವುಗಳಲ್ಲಿ ಆಕ್ಸಲೇಟ್ ಕಂಡುಬರುತ್ತದೆ. ಆಕ್ಸಲೇಟ್ ಕ್ಯಾಲ್ಸಿಯಂ ಜೊತೆ ಸೇರಿ ಕಲ್ಲುಗಳನ್ನು ರೂಪಿಸುತ್ತದೆ.
ಸಾಕಷ್ಟು ನೀರು ಕುಡಿಯಿರಿ
ಇದೆಲ್ಲದರ ಹೊರತಾಗಿ ವಿಶೇಷವಾಗಿ ಕಲ್ಲುಗಳಾದಾಗ ನೀರಿನ ಸೇವನೆಯನ್ನು ಹೆಚ್ಚಿಸಲು ವೈದ್ಯರು ಸಲಹೆ ನೀಡುತ್ತಾರೆ. ವೈದ್ಯರ ಪ್ರಕಾರ, ಒಬ್ಬರು ದಿನಕ್ಕೆ ಕನಿಷ್ಠ 2.5 ಲೀಟರ್ ನೀರನ್ನು ಕುಡಿಯಬೇಕು, ಇದರಿಂದ ಮೂತ್ರವು ದುರ್ಬಲವಾಗಿರುತ್ತದೆ ಮತ್ತು ತ್ಯಾಜ್ಯ ಉತ್ಪನ್ನಗಳು ದೇಹದಿಂದ ಹೊರಬರುತ್ತಲೇ ಇರುತ್ತವೆ. ಹೆಚ್ಚು ನೀರು ಕುಡಿಯುವುದರಿಂದ, ಈಗಾಗಲೇ ಇರುವ ಸಣ್ಣ ಕಲ್ಲುಗಳು ಸಹ ಯಾವುದೇ ನೋವು ಇಲ್ಲದೆ ಹೊರಬರಬಹುದು.
