Kidney Stones: ಕಿಡ್ನಿ ಕಲ್ಲಿನ ಸಮಸ್ಯೆಯೇ? ಯೋಗದಲ್ಲಿದೆ ಪರಿಹಾರ

ಕಿಡ್ನಿಯಲ್ಲಿ ಕಲ್ಲು ಅಥವಾ ಹರಳು ರಚನೆಯಾಗುವ ಸಮಸ್ಯೆಗೆ ಯೋಗದಲ್ಲಿ ಪರಿಹಾರವಿದೆ. ಹಲವು ಯೋಗಾಸನಗಳಿಂದ ಕಿಡ್ನಿ ಕಲ್ಲುಗಳಿಂದಾಗುವ ನೋವಿಗೆ ಪರಿಹಾರ ಸಿಗುತ್ತವೆ. ಮತ್ತೆ ಕಲ್ಲುಗಳು ಉಂಟಾಗುವುದಿಲ್ಲ.  
 

Yoga for kidney stone take care about kidney health

ಎಂದಾದರೂ ನೀವು ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಅನುಭವಿಸಿದ್ದೀರಾ? ಇದು ಭಾರೀ ಹಿಂಸೆ ನೀಡುತ್ತದೆ. ಹಲವು ಜನರನ್ನು ಕಾಡಿಸುವ ಸಾಮಾನ್ಯ ಸಮಸ್ಯೆ. ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್‌, ಯೂರಿಕ್‌ ಆಸಿಡ್‌ ಅಂಶಗಳು ಸತತವಾಗಿ ಅಧಿಕವಾಗಿದ್ದರೆ ಕಿಡ್ನಿಯಲ್ಲಿ ಹರಳುಗಳು ರಚನೆಯಾಗುತ್ತವೆ. ಇವು ಕಿಡ್ನಿಯಿಂದ ಮುಂದಕ್ಕೆ ಅತಿ ಚಿಕ್ಕದಾದ ನಾಳಗಳಲ್ಲಿ ಚಲಿಸಿದಾಗ ತೀವ್ರವಾದ ನೋವು, ಮೂತ್ರದ ಹರಿಯುವಿಕೆಯಲ್ಲಿ ಸಮಸ್ಯೆ, ಮೂತ್ರ ಮಾಡುವಾಗ ಉರಿಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಕೆಲವರಿಗೆ ಏಕಾಏಕಿ ಕಿಡ್ನಿಯ ಭಾಗದಲ್ಲಿ ಅತೀವ ನೋವು ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಔಷಧ ಮಾಡುವುದು ಅನಿವಾರ್ಯ. ಕೆಲವರಿಗೆ ಆಪರೇಷನ್‌ ಕೂಡ ಮಾಡಬಹುದು. ಔಷಧಗಳ ಜತೆಗೇ ಯೋಗವನ್ನು ಸಹ ಅಭ್ಯಾಸ ಮಾಡುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಉತ್ತಮ ಎನ್ನುವುದು ಸಾಬೀತಾಗಿದೆ. ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಕಿಡ್ನಿ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದರಿಂದ ಜೀವನದ ಗುಣಮಟ್ಟ ಹೆಚ್ಚುತ್ತದೆ. ತಜ್ಞರ ಮಾರ್ಗದರ್ಶನದೊಂದಿಗೆ ಯೋಗವನ್ನು ಅಭ್ಯಾಸ ಮಾಡಲು ಆರಂಭಿಸುವುದು ಸೂಕ್ತ. ಯೋಗದಿಂದ ಹೆಚ್ಚಿನ ಪ್ರಯೋಜನ ದೊರೆಯಬೇಕು ಎಂದರೆ ಸಮಗ್ರ ಆಸನಗಳನ್ನು ಮಾಡಬೇಕಾಗುತ್ತದೆ. ಇದು ಎಲ್ಲರಿಗೂ ಸಾಧ್ಯವಿಲ್ಲದ ಸಂಗತಿ. ಹೀಗಾಗಿ, ಕೆಲವು ಸಮಸ್ಯೆಗಳಿಗೆ ನಿರ್ದಿಷ್ಟ ಆಸನಗಳನ್ನು ಮಾಡುವುದು ಹೆಚ್ಚು ಅನುಕೂಲ.

ಯೋಗದಿಂದ ಕಿಡ್ನಿಗೆ ಅನುಕೂಲ
ಕಿಡ್ನಿಯಲ್ಲಿ ಹರಳುಗಳ (Kidney Stones) ರಚನೆಯಾದಾಗ ಸೊಂಟದ ಅಕ್ಕಪಕ್ಕದ ಭಾಗದಲ್ಲಿ ನೋವಿರುತ್ತದೆ. ಕೆಲವೊಮ್ಮೆ ತೀವ್ರವಾಗಿ, ಕೆಲವೊಮ್ಮೆ ಸಣ್ಣಗೆ ಕಿರಿಕಿರಿ ನೀಡುವ ನೋವಿರುತ್ತದೆ. ವಾಕರಿಕೆ ಉಂಟಾಗುತ್ತದೆ. ಮೂತ್ರ (Urine) ಮಾಡುವಾಗ ಹಿಂಸೆಯಾಗುತ್ತದೆ. ಯೋಗವನ್ನು (Yoga) ಮಾಡುವುದರಿಂದ ಕಿಡ್ನಿಯ ನೋವು ಶಮನವಾಗುತ್ತದೆ. ದೀರ್ಘವಾದ ಉಸಿರಾಟದಿಂದ ಒತ್ತಡ (Stress) ನಿವಾರಣೆಯಾಗಿ, ದೇಹಕ್ಕೂ ಅನುಕೂಲವಾಗುತ್ತದೆ. 

ಮುಖ್ಯವಾಗಿ, ಕಿಡ್ನಿಯ ಆರೋಗ್ಯಕ್ಕೆ ಪೂರಕವಾಗುವ 9 ಆಸನಗಳನ್ನು ಗುರುತಿಸಲಾಗಿದೆ. ಅವು, ಬಾಲಾಸನ, ಮಾರ್ಜಾರ್ಯಾಸನ-ಬಿಟಿಲಾಸನ, ಸುಪ್ತ ಪಾದಾಂಗುಷ್ಠಾಸನ, ಪಶ್ಚಿಮೋತ್ಥಾನಾಸನ, ಭುಜಂಗಾಸನ, ಸೇತು ಬಂಧಾಸನ, ಉಷ್ಟ್ರಾಸನ, ಸುಪ್ತ ಮತ್ಸ್ಯೇಂದ್ರಾಸನ, ಶವಾಸನ. ಹಾಗೆಯೇ, ಕಿಡ್ನಿಯಲ್ಲಿ ಕಲ್ಲುಗಳಿದ್ದಾಗ ತೀವ್ರವಾಗಿ ಹಿಂದಕ್ಕೆ ಬಾಗುವ, ಮಡಚುವ ಆಸನಗಳನ್ನು (Asana) ಮಾಡಬಾರದು. 

ಬೆಳಗ್ಗೆ ಬೇಗ ಏಳಬೇಕು ಎಚ್ಚರವಾಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ನಿದ್ರೆಯೇ ಬಾರದಿದ್ದರೆ?

•    ಕಿಡ್ನಿ ಆರೋಗ್ಯ (Health) ಉತ್ತೇಜನ
ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ರಕ್ತದ ಹರಿವು (Blood Flow) ಉತ್ತಮಗೊಳ್ಳುತ್ತದೆ. ಜೀವಕೋಶಗಳಿಗೆ ತಾಜಾ ಆಮ್ಲಜನಕ ದೊರೆಯುತ್ತದೆ. ಇದರಿಂದಾಗಿ ನೈಸರ್ಗಿಕವಾಗಿ ದೇಹದ ಡಿಟಾಕ್ಸಿಕರಣ ಕ್ರಿಯೆಗೆ ಉತ್ತೇಜನ ದೊರೆಯುತ್ತದೆ. ಸೊಂಟ ಹಾಗೂ ಬೆನ್ನಿನ ಕೆಳಭಾಗವನ್ನು ವಿಸ್ತರಿಸಲು ಸಾಧ್ಯವಾಗುವುದರಿಂದ ಹೊಟ್ಟೆಯ ಸುತ್ತಮುತ್ತಲ ಮಾಂಸಖಂಡಗಳಿಗೆ (Muscles) ನೇರವಾಗಿ ಲಾಭ ಸಿಗುತ್ತದೆ. ಅಧ್ಯಯನದ ಪ್ರಕಾರ, ಯೋಗದಿಂದ ಕಿಡ್ನಿಯ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. 

•    ನೋವಿನಿಂದ (Pain) ಮುಕ್ತಿ
ಮೂತ್ರನಾಳಗಳಲ್ಲಿ ಹರಳುಗಳು ಚಲಿಸುವಾದ ಅಸಾಧ್ಯ ನೋವುಂಟು ಮಾಡುತ್ತವೆ. ಯೋಗಾಸನಗಳು ಮಾಂಸಖಂಡಗಳನ್ನು ಹಗುರವಾಗಿ ಅಷ್ಟೆ ದೃಢವಾಗಿ ಹಿಗ್ಗಿಸುವುದರಿಂದ ನೋವು ಕಡಿಮೆ ಆಗುತ್ತದೆ. ನೋವನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ ಎಂದರೆ ಅಚ್ಚರಿಯಾದೀತು. ಆಳವಾದ ಉಸಿರಾಟದಿಂದ (Deep Breathing) ದೇಹಕ್ಕೆ ಅತ್ಯಂತ ವಿಶ್ರಾಂತಿ ದೊರೆಯುತ್ತದೆ.

•    ಒತ್ತಡ ನಿವಾರಣೆ (Stress Removal)
ಯೋಗದಿಂದ ಒತ್ತಡ ನಿವಾರಣೆಯಾಗುತ್ತದೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಜತೆಗೆ, ಕಿಡ್ನಿಯಲ್ಲಿ ಕಲ್ಲುಗಳಾಗುವ ಸಮಸ್ಯೆಗೂ ಒತ್ತಡಕ್ಕೂ ನಂಟಿದೆ ಎನ್ನುವುದು ಸಹ ದೃಢಪಟ್ಟಿರುವ ಸಂಗತಿ. ಯೋಗದಲ್ಲಿ ಒತ್ತಡ ನಿವಾರಣೆಗೆ ಹಲವು ರೀತಿಯ ಧ್ಯಾನ (Meditation) ಪದ್ಧತಿ, ಆಸನಗಳಿವೆ. ಒತ್ತಡ ಕಡಿಮೆಯಾದಾಗ ಸಹಜವಾಗಿ ಕಿಡ್ನಿಯ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ.

ರಾತ್ರಿ ಕಾಲು ಊದಿಕೊಂಡು, ಬೆಳಗ್ಗೆ ಸರಿ ಹೋಗಿದೆಯಂದ್ರೆ ಅಲರ್ಟ್ ಆಗಿ, ಕಿಡ್ನಿ ಚೆಕ್ ಮಾಡಿಸಿಕೊಳ್ಳಿ!

•    ದ್ರವದ (Fluid) ವಿತರಣೆ
ಕೆಲವು ಯೋಗಾಸನಗಳು ನರಗಳ ಚಟುವಟಿಕೆ ಉತ್ತೇಜಿಸಿ ವಿಸರ್ಜನೆ ಕ್ರಿಯೆಯನ್ನು ಸರಾಗಗೊಳಿಸುತ್ತವೆ. ದ್ರವದ ವಿತರಣೆ ವ್ಯವಸ್ಥೆಯನ್ನು ಸರಿಪಡಿಸಿ, ಡಿಹೈಡ್ರೇಷನ್‌ ನಿಂದ ದೇಹವನ್ನು ರಕ್ಷಿಸುತ್ತವೆ. ದ್ರವದ ಕೊರತೆಯಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಮಸ್ಯೆ (Problem) ದೂರವಾಗುತ್ತದೆ. ಜತೆಗೆ, ಯೋಗದ ಅಭ್ಯಾಸದಿಂದ ಮತ್ತೆ ಮತ್ತೆ ಕಲ್ಲುಗಳಾಗುವ ಸಮಸ್ಯೆಯೂ ದೂರವಾಗುತ್ತದೆ. 

Latest Videos
Follow Us:
Download App:
  • android
  • ios