Kidney Stone: ಚೆನ್ನಾಗಿ ಜ್ಯೂಸ್ ಕುಡಿಯಿರಿ, ನೋವಿನಿಂದ ಮುಕ್ತರಾಗಿ

ಮನುಷ್ಯನ ದೇಹದಲ್ಲಿನ ಎಲ್ಲಾ ಅಂಗಗಳು ಬಹಳ ಮುಖ್ಯ. ಒಂದು ಅಂಗವೇನಾದರೂ ಡ್ಯಾಮೇಜ್ ಆದರೂ  ಕಷ್ಟವೇ. ಅದರಲ್ಲೂ ಕಿಡ್ನಿ ಪ್ರಾಬ್ಲಮ್ ಇರುವವರಿಗೆ ತಿನ್ನುವ ಆಹಾರದಿಂದ ಹಿಡಿದು ಎಲ್ಲದಕ್ಕೂ ಸಮಸ್ಯೆಯೇ. ಮನೆಯಲ್ಲೇ ಕೆಲ ಡ್ರಿಂಕ್ಸ್ ತಯಾರಿಸಿ ಕುಡಿದರೆ ಕಿಡ್ನಿ ಸ್ಟೋನ್ ಹೋಗಲಾಡಿಸಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

lemon Pomegranate Juice good for kidney stones that are common due to lifestyle

ಇಂದು ಸಾಮಾನ್ಯವಾಗಿರುವ ಕಿಡ್ನಿ ಸ್ಟೋನ್ ಸಮಸ್ಯೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಔಷಧಿಗಳು ಇವೆ. ಮೂತ್ರಪಿಂಡದ ಕಲ್ಲು ಮೂತ್ರದಲ್ಲಿನ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಗಟ್ಟಿಯಾದ ವಸ್ತುವಾಗಿದೆ. ಮೂತ್ರಪಿಂಡದ ಕಲ್ಲುಗಳಲ್ಲಿ ನಾಲ್ಕು ವಿಧಗಳಿವೆ ಕ್ಯಾಲ್ಶಿಯಂ ಆಕ್ಸಲೇಟ್, ಯೂರಿಕ್ ಆಮ್ಲ, ಸ್ಟುçವೈಟ್ ಮತ್ತು ಸಿಸ್ಟೆöÊನ್. ರಕ್ತದಲ್ಲಿ ಹೆಚ್ಚು ತ್ಯಾಜ್ಯವಿದ್ದರೆ ಮತ್ತು ದೇಹವು ಸಾಕಷ್ಟು ಮೂತ್ರವನ್ನು ಉತ್ಪಾದಿಸದಿದ್ದಾಗ ಮೂತ್ರಪಿಂಡದಲ್ಲಿ ಹರಳುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಹರಳುಗಳು ಇತರ ತ್ಯಾಜ್ಯಗಳು ಮತ್ತು ರಾಸಾಯನಿಕಗಳನ್ನು ಆಕರ್ಷಿಸಿ ಘನ ವಸ್ತುವನ್ನು ರೂಪಿಸುತ್ತವೆ. ಇವು ದೇಹದಿಂದ ಹೊರಹೋಗಲಾಗದೆ ಘನವಾಗಿ ದೊಡ್ಡದಾಗುತ್ತದೆ ಇದನ್ನೇ ಕಿಡ್ನಿ ಸ್ಟೋನ್ ಎನ್ನುತ್ತಾರೆ.

ಮನೆಯಲ್ಲಿ ಈ ಡ್ರಿಂಕ್ಸ್ ಕುಡಿದರೆ ಕಿಡ್ನಿ ಸ್ಟೋನ್ ಹೋಗಲಾಡಿಸಬಹುದು ಈ ಬಗ್ಗೆ ಇಲ್ಲಿದೆ ಮಾಹಿತಿ.

1. ನೀರು
ದೇಹದ ಪ್ರತೀ ಅಂಗಗಳಿಗೂ ನೀರು ಅಗತ್ಯವಾಗಿ ಬೇಕಾಗಿರುವ ವಸ್ತು ಹಾಗೂ ದೇಹವನ್ನು ಹೈಡ್ರೇಟೆಡ್(Hydrate) ಆಗಿರುವಂತೆ ನೋಡಿಕೊಳ್ಳುತ್ತದೆ. ಮೂತ್ರಪಿಂಡವು ದೇಹದ ಫಿಲ್ಟರಿಂಗ್ ಕಾರ್ಯ ನಿರ್ವಹಿಸುವುದರಿಂದ ಮೂತ್ರವನ್ನು ಉತ್ಪಾದಿಸಲು ನೀರಿನ ಅಗತ್ಯವಿದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳಗಾದವರು ದಿನದಲ್ಲಿ 12 ಲೋಟದಷ್ಟು ನೀರನ್ನು ಕುಡಿಯಲೇ ಬೇಕು. ಇದರಿಂದ ಮೂತ್ರಪಿಂಡದಲ್ಲಿ ಶೇಖರಣೆಯಾಗಿರುವ ಕಲ್ಲುಗಳು ಹಾಗೂ ವೇಸ್ಟ್ಗಳು ಪರಿಣಾಮಕಾರಿಯಾಗಿ ಹೊರಹಾಕಬಹುದು.

ಪದೇ ಪದೇ ಮೂತ್ರವನ್ನು ತಡೆಯೋದ್ರಿಂದ ಏನಾಗುತ್ತೆ?

2. ನಿಂಬೆ ಜ್ಯೂಸ್ (Lemon Juice)
ಫ್ರೆಶ್ ನಿಂಬೆ ಹಣ್ಣನ್ನು ಚೆನ್ನಾಗಿ ಹಿಂಡಿ ರಸ ತೆಗೆದು ಅದನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಆಗಾಗ್ಗೆ ಕುಡಿಯಬೇಕು. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್(Citric) ಅಂಶ ಹೇರಳವಾಗಿದ್ದು, ಕ್ಯಾಲ್ಶಿಯಂ ಕಲ್ಲುಗಳು ರಚನೆಯಾಗದಂತೆ ತಡೆಯುತ್ತದೆ. ಪ್ರತೀ ದಿನ ಎರಡು ಲೀಟರ್ ನೀರಿನಲ್ಲಿ ನಾಲ್ಕು ಸ್ಪೂನ್ ನಿಂಬೆ ರಸವನ್ನು ಹಾಕಿಕೊಂಡು ಕುಡಿಯುವುದು ಕಲ್ಲುಗಳ ರಚನೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

3. ದಾಳಿಂಬೆ ರಸ (Pomegranate Juice)
ಒಟ್ಟಾರೆ ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ದಾಳಿಂಬೆ ರಸವನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಹುಣ್ಣು ಮತ್ತು ಅತಿಸಾರ ಸೇರಿದಂತೆ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಕ್ಯಾಲ್ಶಿಯಂ ಆಕ್ಸಲೇಟ್ ಕಡಿಮೆ ಮಾಡುವುದಲ್ಲದೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

4. ಗೋಧಿ ಹುಲ್ಲಿನ ಜ್ಯೂಸ್
ಗೋಧಿ ಹುಲ್ಲಿನಲ್ಲಿ ನ್ಯೂಟ್ರೀಶನ್ ಹೆಚ್ಚಿದ್ದು, ಇದರ ರಸ ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರುತ್ತದೆ. ಇದು ಅಡ್ಡ ಪರಿಣಾಮಗಳನ್ನು ತಡೆಗಟ್ಟುವುದರಿಂದ ಚಿಕ್ಕ ಪ್ರಮಾಣದಲ್ಲಿ ಪ್ರಾರಂಭಿಸಿ ಕ್ರಮೇಣ ಇದರ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಕರಗಿಸಿ ವಿಸರ್ಜನೆಗೆ ಸಹಾಯ ಮಾಡುತ್ತದೆ.

5. ಗ್ರೀನ್ ಟೀ (Green Tea)
ಗ್ರೀನ್ ಟೀನಲ್ಲಿ ಕ್ಯಾಲ್ಶಿಯಂ ಆಕ್ಸಲೇಟ್ ಉತ್ತಮವಾಗಿದೆ. ಇದು ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಮೂತ್ರಪಿಂಡವು ದೀರ್ಘಕಾಲದವರೆಗೆ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್(Epigallocatechin Gallate)  ಅನ್ನು ಹೊಂದಿದೆ, ಇದು ಮೂತ್ರಪಿಂಡದಲ್ಲಿ ಕಲ್ಲುಗಳಾಗದಂತೆ ನೋಡಿಕೊಳ್ಳುತ್ತದೆ. 

ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?

6. ಕೊತ್ತಂಬರಿ ಸೊಪ್ಪಿನ ಜ್ಯೂಸ್
ನೈಸರ್ಗಿಕ ಮೂತ್ರವರ್ಧಕ ಮತ್ತು ನೋವು ನಿವಾರಕವಾಗಿರುವ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕಿಡ್ನಿ ಸ್ಟೋನ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಪ್ರತೀ ದಿನ ಕನಿಷ್ಠ ಒಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಅನ್ನು ತ್ವರಿತವಾಗಿ ಹೊರಹಾಕಲು ಸಹಾಯ ಮಾಡುತ್ತದೆ.

7. ರಾಜ್ಮಾ (Rajma)
ರಾಜ್ಮಾದಲ್ಲಿ ವಿಟಮಿನ್ ಬಿ ಹೇರಳವಾಗಿದೆ. ಇದು ಮೂತ್ರಪಿಂಡದಲ್ಲಿನ ಕಲ್ಲುನ್ನು ಹೊರಹಾಕುತ್ತಲ್ಲದೆ, ದೇಹಕ್ಕೆ ಬೇಕಾದ ಖನಿಜಾಂಶ ಮತ್ತು ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದು ಜೀರ್ಣಕ್ರಿಯೆಗೆ ಉತ್ತಮವಾದ ಕರಗುವ ಮತ್ತು ಕರಗದ ಫೈಬರ್ ಎರಡರ ಮಿಶ್ರಣವನ್ನು ಹೊಂದಿದೆ.

Latest Videos
Follow Us:
Download App:
  • android
  • ios