Ayurvedic hookah : ಯೋಗ ಗುರು ಬಾಬಾ ರಾಮದೇವ, ಆಯುರ್ವೇದಿಕ್‌ ಹುಕ್ಕಾ ತಯಾರಿಸುವ ವಿಧಾನವನ್ನು ಹೇಳಿದ್ದಾರೆ. ಅದ್ರಿಂದ ಏನು ಪ್ರಯೋಜನ ಎಂಬುದನ್ನೂ ವಿವರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇ-ಸಿಗರೇಟ್ ಹಾಗೂ ಫ್ಲೇವರ್ಡ್ ಹುಕ್ಕಾ ಯುವಜನರಲ್ಲಿ ಹೆಚ್ಚು ಚರ್ಚೆಯಲ್ಲಿವೆ. ಆದರೆ, ಇವು ಆರೋಗ್ಯಕ್ಕೆ ಹಾನಿಕಾರಕ. ಅವುಗಳನ್ನು ತೆಗೆದುಕೊಳ್ಳದಂತೆ ಆರೋಗ್ಯ ತಜ್ಞರು ಎಚ್ಚರಿಸ್ತಿರುತ್ತಾರೆ. ಇ-ಸಿಗರೇಟ್ ಮತ್ತು ಫ್ಲೇವರ್ಡ್ ಹುಕ್ಕಾದಲ್ಲಿರುವ ರಾಸಾಯನಿಕಗಳು ಹಾಗೂ ತಂಬಾಕು, ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯ ಕಾಡುವ ಸಾಧ್ಯತೆ ಹೆಚ್ಚಿದೆ.

ಇದರ ನಡುವೆ ಯೋಗ ಗುರು ಬಾಬಾ ರಾಮ್ದೇವ್ ಅವರ ಹಳೆಯ ವಿಡಿಯೋವೊಂದು ಮತ್ತೆ ಗಮನ ಸೆಳೆದಿದೆ. ಇದರಲ್ಲಿ ಅವರು ಆಯುರ್ವೇದಿಕ ಹುಕ್ಕಾದ ಬಗ್ಗೆ ಮಾತನಾಡಿದ್ದು, ಕೆಲವು ಗಿಡಮೂಲಿಕೆಗಳನ್ನು ಬಳಸುವ ವಿಧಾನವನ್ನು ತಿಳಿಸಿದ್ದಾರೆ.

ಆಯುರ್ವೇದಿಕ ಹುಕ್ಕಾಗೆ ಏನೇನು ಬೇಕು?

ಬಾಬಾ ರಾಮ್ದೇವ್ ಹೇಳುವ ಪ್ರಕಾರ, ಆಯುರ್ವೇದಿಕ್‌ ಹುಕ್ಕಾ ತಯಾರಿಸಲು ಒಂದು ಚಿಟಿಕೆ ಮುಲೇತಿ, ಒಂದು ಚಿಟಿಕೆ ಅರಿಶಿನ, ಒಂದು ಚಿಟಿಕೆ ಸಾಸಿವೆ, ಸ್ವಲ್ಪ ಹಸುವಿನ ತುಪ್ಪ, ಕಾಕಡ ಸಿಂಗಿ ಹಾಗೂ ದೇಸಿ ಕರ್ಪೂರದ ಅಗತ್ಯವಿದೆ.

ಆಯುರ್ವೇದಿಕ್‌ ಹುಕ್ಕಾ ತಯಾರಿಸೋದು ಹೇಗೆ?

ಮೊದಲು ಮುಲೇತಿಯನ್ನು ಸ್ವಲ್ಪ ಜಜ್ಜಿ ಅದಕ್ಕೆ ಹಸುವಿನ ತುಪ್ಪವನ್ನು ಸೇರಿಸಬೇಕು. ನಂತರ ಒಂದು ಚಿಟಿಕೆ ಅರಿಶಿನ ಮತ್ತು ಸಾಸಿವೆ ಸೇರಿಸಬೇಕು. ಹುಕ್ಕಾದ ಪ್ಲೇಟ್ನಲ್ಲಿ ಕರ್ಪೂರವನ್ನು ಉರಿಸಿ, ಅದರ ಮೇಲೆ ಕಾಕಡ ಸಿಂಗಿಯನ್ನು ಹಾಕಬೇಕು. ಈ ಪದಾರ್ಥಗಳನ್ನು ಹುಕ್ಕಾದ ಮೂಲಕ ಸೇವಿಸುವುದರಿಂದ ಕಟ್ಟಿಕೊಂಡ ಮೂಗು ಬಿಡುತ್ತದೆ. ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಹಾಗೆಯೇ ವಾತ, ಪಿತ್ತ, ಕಫದ ಸಮತೋಲನಕ್ಕೂ ಸಹಾಯವಾಗುತ್ತದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.

ಇದೇ ವೇಳೆ, ಇ-ಸಿಗರೇಟ್ ಮತ್ತು ಫ್ಲೇವರ್ಡ್ ಹುಕ್ಕಾದಲ್ಲಿರುವ ವಿವಿಧ ರಾಸಾಯನಿಕಗಳು ಹಾಗೂ ತಂಬಾಕು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ಹಾಗಾಗಿ ಇವುಗಳಿಂದ ದೂರವಿರುವಂತೆ ಬಾಬಾ ರಾಮ್ದೇವ್ ಕೂಡ ಸಲಹೆ ನೀಡಿದ್ದಾರೆ. ಯಾವುದೇ ಇಂತಹ ವಿಧಾನವನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಮುಖ್ಯ.