Kannada

ರಾತ್ರಿ ಬೇಗ, ಆರಾಮವಾಗಿ ನಿದ್ದೆ ಮಾಡಬೇಕಾ? ಈ ಟಿಪ್ಸ್ ನಿಮಗಾಗಿ!

Kannada

ಬಿಸಿ ಬಿಸಿ ಹಾಲು ಕುಡಿಯಿರಿ

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿದರೆ, ಕೆಲವರಿಗೆ ಬೇಗನೆ ನಿದ್ದೆ ಬರುತ್ತದೆ. ಇದೊಂದು ಹಳೆಯ ಕಾಲದ ಟ್ರಿಕ್.

Image credits: Getty
Kannada

ಫೋನ್‌ಗೆ ಸ್ವಲ್ಪ ದೂರ ಇರಿ

ಮಲಗುವುದಕ್ಕೆ ಕನಿಷ್ಠ ಒಂದು ಗಂಟೆ ಮುಂಚೆಯೇ ಫೋನ್ ನೋಡುವುದನ್ನು ನಿಲ್ಲಿಸಿ. ಯಾಕಂದ್ರೆ, ಫೋನ್‌ನಿಂದ ಬರುವ ಬ್ಲೂ ಲೈಟ್ ನಿಮ್ಮ ನಿದ್ದೆಗೆ ಅಡ್ಡಿಪಡಿಸುತ್ತದೆ.

Image credits: Getty
Kannada

ಕಾಫಿ, ಟೀ ಬೇಡವೇ ಬೇಡ

ರಾತ್ರಿ ಹೊತ್ತು ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ. ಇವುಗಳಲ್ಲಿರುವ ಕೆಫೀನ್ ಅಂಶವು ನಿದ್ದೆಗೆ ಅಡ್ಡಿ ಉಂಟುಮಾಡುತ್ತದೆ.

Image credits: Getty
Kannada

ವ್ಯಾಯಾಮದ ಬಗ್ಗೆ ಗಮನವಿರಲಿ

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ರಾತ್ರಿ ಮಲಗುವ ಮುನ್ನ ಹೆಚ್ಚು ವ್ಯಾಯಾಮ ಮಾಡಬಾರದು. ಅದರಲ್ಲೂ, ಕಠಿಣ ಯೋಗಾಸನಗಳನ್ನು ಮಾಡಿದರೆ ದೇಹ ಉತ್ತೇಜಿತಗೊಂಡು ನಿದ್ದೆ ಬರುವುದಿಲ್ಲ.

Image credits: unsplash
Kannada

ಬೇಗನೇ ಡಿನ್ನರ್ ಮಾಡಿ

ರಾತ್ರಿ ತಡವಾಗಿ ಊಟ ಮಾಡಿದರೆ, ಅದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೊರೆ ಹಾಕುತ್ತದೆ. ಇದು ಕೂಡ ನಿದ್ದೆ ಬಾರದಿರಲು ಒಂದು ಕಾರಣ. ಹೀಗಾಗಿ, ಬೇಗನೇ ಡಿನ್ನರ್ ಮುಗಿಸುವುದು ಉತ್ತಮ.

Image credits: Getty
Kannada

ಮೆಡಿಟೇಶನ್ ಮಾಡಿ

ಮನಸ್ಸು ಪ್ರಶಾಂತವಾಗಿದ್ದರೆ ಮಾತ್ರ ಚೆನ್ನಾಗಿ ನಿದ್ದೆ ಬರುತ್ತದೆ. ಅದಕ್ಕಾಗಿ, ಮಲಗುವ ಮುನ್ನ ಸ್ವಲ್ಪ ಹೊತ್ತು ಹಗುರವಾದ ಧ್ಯಾನ ಮಾಡುವುದು ತುಂಬಾ ಒಳ್ಳೆಯದು.

Image credits: Getty

Rose Gold Earrings: 2 ಗ್ರಾಂ ಒಳಗೆ ಸಿಗುವ ಡೈಲಿವೇರ್ ರೋಸ್ ಗೋಲ್ಡ್ ಓಲೆಗಳು.. ಇಲ್ಲಿವೆ ಡಿಸೈನ್ಸ್

ನೆನೆಸಿದ ಬಾದಾಮಿ ತಿಂದ್ರೆ ಸಾಕು, ಈ ಎಲ್ಲಾ ರೋಗಗಳಿಂದ ದೂರವಿರಬಹುದು

Sarees: ಈ ಸೀರೆಗಳನ್ನು ನೋಡಿದ್ರೆ ಯಾರಿಗಾದ್ರೂ ಇಷ್ಟ ಆಗುತ್ತೆ.. ಡಿಸೈನ್​ಗಳು ಅಷ್ಟು ಚೆನ್ನಾಗಿವೆ!

​ಬಾಯಲ್ಲಿಟ್ಟರೆ ಕರಗುವಂತಹ ನೀರಿನ ದೋಸೆ ಬೇಕಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು