ಗೊತ್ತಿಲ್ಲದ ಒತ್ತಡ ಕಾಡ್ತಿದ್ದರೆ ಅವಳಿಗೊಂದು ಕಾಲ್ ಮಾಡಿ, ಆಕೆ ಧ್ವನಿ ಬರೀ ಧ್ವನಿಯಲ್ಲ ಔಷಧಿ
close friends :ಇನ್ಮುಂದೆ ನಿನ್ನ ಕ್ಲೋಸ್ ಫ್ರೆಂಡ್ ಗೆ ಮೆಸ್ಸೇಜ್ ಮಾಡ್ಬೇಡಿ. ಕಾಲ್ ಮಾಡಿ ಮಾತಾಡಿ. ಇದ್ರಿಂದ ಲಾಭ ಎಷ್ಟಿದೆ ಅನ್ನೋದನ್ನು ಸ್ವತಃ ವಿಜ್ಞಾನಿಗಳೇ ಒಪ್ಕೊಂಡಿದ್ದಾರೆ.

ಬೆಸ್ಟ್ ಫ್ರೆಂಡ್
ಜಗತ್ತಿನ ಅತ್ಯಂತ ಪರಿಶುದ್ಧ ಸಂಬಂಧ ಅಂದ್ರೆ ಅದು ಸ್ನೇಹ ಸಂಬಂಧ. ಸುಖ – ದುಃಖ ಎರಡರಲ್ಲೂ ಸಮವಾಗಿ ಪಾಲ್ಗೊಳ್ಳುವ ಒಬ್ಬ ಸ್ನೇಹಿತ- ಸ್ನೇಹಿತೆ ಇದ್ರೆ ಸಾಕು. ಜೀವನ ಸಾರ್ಥಕ. ಅತ್ಯುತ್ತಮ, ಬೆಸ್ಟ್ ಫ್ರೆಂಡ್ ಪಡೆಯೋದು ಸುಲಭದ ಕೆಲ್ಸವಲ್ಲ. ಜೀವಕ್ಕೆ ಜೀವ ನೀಡುವ ಬೆಸ್ಟ್ ಫ್ರೆಂಡ್ ನಿಮಗೂ ಇದ್ರೆ ಈಗ್ಲೇ ಅವರಿಗೆ ಕಾಲ್ ಮಾಡಿ.
ಬೆಸ್ಟ್ ಫ್ರೆಂಡ್ ಗೆ ಕಾಲ್ ಮಾಡಿದ್ರೆ ಏನಾಗುತ್ತೆ?
ಬೆಸ್ಟ್ ಫ್ರೆಂಡ್ ಬರೀ ಗಾಸಿಪ್ ಮಾಡೋಕೆ, ನಿಮ್ಮ ಸಂತೋಷ, ನೋವನ್ನು ತೋಡಿಕೊಳ್ಳೋಕೆ ಮಾತ್ರವಲ್ಲ ನಿಮಗೆ ಮೆಡಿಸಿನ್ ಆಗಿ ಕೆಲ್ಸ ಮಾಡ್ತಾರೆ. ಇದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ನಿಮ್ಮ ಬೆಸ್ಟ್ ಫ್ರೆಂಡ್ ಧ್ವನಿ ನಿಮ್ಮ ಎಲ್ಲ ನೋವನ್ನು ಮರೆಸುತ್ತೆ. ಟೆನ್ಷನ್ ಕಡಿಮೆ ಮಾಡುತ್ತೆ.
ಫೋನ್ ಮಾಡೋದು ಮುಖ್ಯ
ಅನೇಕರು ಪ್ರತಿ ದಿನ ಬೆಸ್ಟ್ ಫ್ರೆಂಡ್ ಜೊತೆ ಸಂಪರ್ಕದಲ್ಲಿರ್ತಾರೆ. ಆದ್ರೆ ಅಧಿಕೃತವಾಗಿ ಫೋನ್ ಮಾಡಿ ಮಾತನಾಡೋದಿಲ್ಲ. ವಾಟ್ಸ್ ಅಪ್ ಚಾಟ್ ನಲ್ಲಿಯೇ ಮಾತು ಮುಗಿಸ್ತಾರೆ. ನಿಮ್ಮ ಟೆನ್ಷನ್ ಕಡಿಮೆ ಆಗ್ಬೇಕು, ಮಾನಸಿಕವಾಗಿ ನೀವು ಮತ್ತಷ್ಟು ಗಟ್ಟಿಯಾಗ್ಬೇಕು ಅಂದ್ರೆ ಮೆಸ್ಸೇಜ್ ಬಿಟ್ಟು ಕಾಲ್ ಮಾಡಿ. ಅವರ ಧ್ವನಿಯೇ ನಿಮಗೆ ಔಷಧಿ. ನಿಮ್ಮ ದೇಹದಲ್ಲಿರುವ ಒತ್ತಡದ ಹಾರ್ಮೋನ್ಗಳು ತಕ್ಷಣವೇ ಕಡಿಮೆಯಾಗುತ್ತವೆ.
ವಿಜಾನಿಗಳು ಹೇಳೋದೇನು?
ಸಂಶೋಧನೆಗಳ ಪ್ರಕಾರ, ಬೆಸ್ಟ್ ಫ್ರೆಂಡ್ ಜೊತೆ ನಿಯಮಿತವಾಗಿ ಮಾತನಾಡುವ ಮಹಿಳೆಯರಲ್ಲಿ ರಕ್ತದೊತ್ತಡ ಕಡಿಮೆ ಇರುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಅವರು ಹೆಚ್ಚು ಆರೋಗ್ಯಕರ ಜೀವನ ನಡೆಸುತ್ತಾರೆ. 80 ವರ್ಷಗಳ ಕಾಲ ನಡೆದ ಹಾರ್ವರ್ಡ್ ಅಧ್ಯಯನದ ಪ್ರಕಾರ, ಉತ್ತಮ ಸ್ನೇಹಿತರನ್ನು ಹೊಂದಿರುವ ಮಹಿಳೆಯರು ಹೆಚ್ಚು ವರ್ಷಗಳ ಕಾಲ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.
ಟೆಂಡ್ ಆಂಡ್ ಬಿಫ್ರೆಂಡ್ ರೆಸ್ಪಾನ್ಸ್
ವಿಜ್ಞಾನಿಗಳು ಇದಕ್ಕೆ ಟೆಂಡ್ ಆಂಡ್ ಬಿಫ್ರೆಂಡ್ ರೆಸ್ಪಾನ್ಸ್ ಅಂತ ಹೆಸರಿಟ್ಟಿದ್ದಾರೆ. ಒತ್ತಡ ಅಥವಾ ಸಮಸ್ಯೆ ಬಂದಾಗ ಮಹಿಳೆಯರು ಸಹಜವಾಗಿಯೇ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಾರೆ. ಅದು ಕೇವಲ ಭಾವನೆಯಲ್ಲ, ಅದು ನಮ್ಮ ದೇಹದ ಸಹಜ ಪ್ರತಿಕ್ರಿಯೆ. ಹಾಗಾಗಿ ಮುಂದಿನ ಬಾರಿ ನಿಮಗೆ ಬೇಸರ ಆದ್ರೆ, ಟೆನ್ಷನ್ ಹೆಚ್ಚಾದ್ರೆ, ಮನಸ್ಸು ಅನ್ನಿಸಿದ್ರೆ ಸುಮ್ನಿರಬೇಡಿ, ನಿಮ್ಮ ಆಪ್ತ ಸ್ನೇಹಿತೆಗೆ ಕರೆ ಮಾಡಿ. ಕೆಲವೊಮ್ಮೆ ಒಂದು ಫೋನ್ ಕಾಲ್, ನೂರಾರು ಔಷಧಿಗಳಿಗಿಂತ ಹೆಚ್ಚು ನೆಮ್ಮದಿಯನ್ನು ನಿಮಗೆ ನೀಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

