ಚಹಾ ಕಾಫಿ ಜೊತೆ ಮೀನು ಸೇವಿಸೋ ತಪ್ಪು ಮಾಡ್ಲೇಬೇಡಿ…ಆರೋಗ್ಯ ಹಾಳು
Fish Eating Tips: ಮೀನು ಆರೋಗ್ಯಕ್ಕೆ ಉತ್ತಮವಾದ ಆಹಾರಗಳಾಗಿವೆ. ಆದರೆ ನಿಮಗೆ ಗೊತ್ತಾ? ಕೆಲವು ಆಹಾರಗಳ ಜೊತೆಗೆ ಮೀನು ಸೇವಿಸುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಯಾವ ಆಹಾರಗಳ ಜೊತೆಗೆ ಮೀನು ಸೇವಿಸಬಾರದು ಎನ್ನುವುದನ್ನು ನೋಡೋಣ.

ಈ ಆಹಾರಗಳ ಜೊತೆ ಮೀನು ತಿನ್ನಬೇಡಿ
ಕೆಲವು ಆಹಾರಗಳನ್ನು ತಿಂದ ನಂತರ ಮೀನು ತಿನ್ನಬಾರದು ಎಂದು ಹೇಳಲಾಗುತ್ತದೆ. ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೀನು ಆರೋಗ್ಯಕ್ಕೆ ತುಂಬಾನೆ ಉತ್ತಮವಾದ ಆಹಾರವಾಗಿದೆ. ಮೀನು ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ಹಲವಾರು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇವೆಲ್ಲವೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತೆ. ಮೀನು ತಿಂದ ನಂತರ ನೀವು ಕೆಲವು ಆಹಾರಗಳನ್ನು ತಪ್ಪಿಸಬೇಕು. ಅಂತಹ ಆಹಾರಗಳು ಯಾವುವು ಎನ್ನುವುದನ್ನು ನೋಡೋಣ.
ಹಾಲು
ಮೀನು ತಿಂದ ನಂತರ ಹಾಲು ಸೇವಿಸುವುದನ್ನು ತಪ್ಪಿಸಬೇಕು. ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ವಿಟಲಿಗೋ ಮತ್ತು ಹೊಟ್ಟೆ ನೋವು ಮುಂತಾದ ಕಾಯಿಲೆಗಳು ಬರಬಹುದು. ಹಾಗಾಗಿ ಹಾಲಿನ ಜೊತೆ ಮೀನನ್ನು ತಿನ್ನುವ ತಪ್ಪನ್ನು ಮಾತ್ರ ಮಾಡಬೇಡಿ.
ಚಹಾ ಮತ್ತು ಕಾಫಿ
ಮೀನು ತಿಂದ ನಂತರ ನೀವು ಚಹಾ ಮತ್ತು ಕಾಫಿಯನ್ನು ತಪ್ಪಿಸಬೇಕು. ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್‌ಗಳು ಮತ್ತು ಕೆಫೀನ್ ನಿಮ್ಮ ದೇಹದ ಎಲ್ಲಾ ಪೋಷಕಾಂಶಗಳನ್ನು ಕಸಿದುಕೊಳ್ಳುತ್ತವೆ. ಮೀನು ತಿಂದ ಕನಿಷ್ಠ 1 ರಿಂದ 2 ಗಂಟೆಗಳ ನಂತರ ನೀವು ಚಹಾ ಅಥವಾ ಕಾಫಿಯನ್ನು ಸೇವಿಸಬೇಕು.
ಸಿಟ್ರಸ್ ಹಣ್ಣುಗಳು
ನೀವು ಮೀನು ತಿನ್ನುತ್ತಿದ್ದರೆ, ಹೆಚ್ಚು ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಿ. ಮೀನು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗುತ್ತದೆ.
ಕರಿದ ಆಹಾರ
ಮೀನು ತಿಂದ ನಂತರ ಕರಿದ ಆಹಾರವನ್ನು ಸಹ ತಪ್ಪಿಸಬೇಕು. ಇದನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ತೀವ್ರ ತೊಂದರೆ ಉಂಟಾಗುತ್ತದೆ ಮತ್ತು ಅಜೀರ್ಣ, ಗ್ಯಾಸ್, ಹೊಟ್ಟೆ ನೋವು ಮತ್ತು ಅರೆನಿದ್ರಾವಸ್ಥೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೊಸರು
ಮೀನು ತಿಂದ ನಂತರ ನೀವು ಮೊಸರು ಸೇವಿಸುವುದನ್ನು ಸಹ ತಪ್ಪಿಸಬೇಕು. ಒಂದು ವೇಳೆ ನೀವು ಮೀನಿನ ಜೊತೆ ಮೊಸರು ತಿಂದರೆ, ನಿಮಗೆ ತೀವ್ರವಾದ ಹೊಟ್ಟೆ ಸಮಸ್ಯೆಗಳು ಮತ್ತು ಇತರ ಹಲವು ತೊಂದರೆಗಳು ಉಂಟಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

