MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಹೆರಿಗೆಯ ನಂತರ ತಲೆನೋವು... ಭಯ ಬಿಡಿ ಈ ಬದಲಾವಣೆ ಮಾಡಿ

ಹೆರಿಗೆಯ ನಂತರ ತಲೆನೋವು... ಭಯ ಬಿಡಿ ಈ ಬದಲಾವಣೆ ಮಾಡಿ

ಹೆರಿಗೆಯ(Delivery) ನಂತರ ಯಾವುದೇ ಸಮಯದಲ್ಲಿ ತಲೆನೋವು ಉಂಟಾಗಬಹುದು. ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಪ್ರಕಾರ, ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರು ಹೆರಿಗೆಯಾದ ಎರಡು ವಾರಗಳಲ್ಲಿ ತಲೆನೋವಿನ ಬಗ್ಗೆ ದೂರು ನೀಡುತ್ತಾರೆ, ಆದರೆ ಕೆಲವು ಮಹಿಳೆಯರು ಒಂದು ತಿಂಗಳೊಳಗೆ  ಮೈಗ್ರೇನ್ ಸಮಸ್ಯೆಯನ್ನು ಹೊಂದಿರುತ್ತಾರೆ.

2 Min read
Suvarna News
Published : Apr 27 2022, 07:44 PM IST
Share this Photo Gallery
  • FB
  • TW
  • Linkdin
  • Whatsapp
19

ಹೆರಿಗೆಯ ನಂತರದ ತಲೆನೋವನ್ನು (Postpartum headache) ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ ರಾಸಾಯನಿಕ ಮತ್ತು ಭೌತಿಕ ಬದಲಾವಣೆಗಳಿಂದ ಉಂಟಾಗುತ್ತದೆ. ಹಾರ್ಮೋನ್ ಮಟ್ಟವು ಕುಸಿದಾಗ ತಲೆನೋವು ದೂರವಾಗಬಹುದು. ಆದಾಗ್ಯೂ, ತಲೆನೋವು ದೀರ್ಘಕಾಲದವರೆಗೆ ಮುಂದುವರಿದರೆ, ನೀವು ವೈದ್ಯರೊಂದಿಗೆ ಮಾತನಾಡಬೇಕು. ನಿಮ್ಮ ಡೆಲಿವರಿ ಡೇಟ್ ಹತ್ತಿರದಲ್ಲಿದೆ ಎಂದಾದರೆ postpartum headache ನ್ನು ನೀವು ಹೇಗೆ ತಪ್ಪಿಸಬಹುದು ಎಂದು ನೀವು ತಿಳಿದಿರಬೇಕು.

29

ಹೆರಿಗೆಯ ನಂತರ ತಲೆನೋವಿನ ಕಾರಣಗಳು
ಗರ್ಭಾವಸ್ಥೆಯಲ್ಲಿ, ಈಸ್ಟ್ರೋಜೆನ್(Estrogen) ಮತ್ತು ಎಂಡಾರ್ಫಿನ್ ಹಾರ್ಮೋನುಗಳ ಮಟ್ಟವು ತುಂಬಾ ಹೆಚ್ಚಾಗುತ್ತದೆ. ಈಗಾಗಲೇ ಮೈಗ್ರೇನ್ ಇದ್ದರೆ, ಈ ಸಮಯದಲ್ಲಿ ರೋಗಲಕ್ಷಣಗಳು ಕಡಿಮೆಯಾಗಬಹುದು. ಆದಾಗ್ಯೂ, ಹೆರಿಗೆಯ ನಂತರ, ಈ ಹಾರ್ಮೋನುಗಳು ಸಾಮಾನ್ಯವಾದಾಗ, ತಲೆನೋವು ಸಹ ಹಿಂತಿರುಗುತ್ತದೆ. 

39

ಹೆರಿಗೆಯ ನಂತರ, ಮಹಿಳೆಯರು ಹೆಚ್ಚಾಗಿ ಮಗುವಿನ ಆರೈಕೆಗೆ ತಮ್ಮ ಎಲ್ಲಾ ಗಮನವನ್ನು ಮೀಸಲಿಡುತ್ತಾರೆ. ಗರ್ಭಾವಸ್ಥೆಯಲ್ಲಿ ಮತ್ತು ನಂತರ, ಒತ್ತಡ (Stress), ಆಯಾಸ ಮತ್ತು ದೈಹಿಕ ಬದಲಾವಣೆಗಳು ಆಯಾಸದ ಭಾವನೆಯನ್ನು ಉಂಟುಮಾಡುತ್ತವೆ, ಇದು ತಲೆನೋವಿಗೆ ಕಾರಣವಾಗಬಹುದು.
 

49

ಸ್ತನ್ಯಪಾನದಿಂದ(Breast feeding) ತಲೆನೋವು
ಸ್ತನ್ಯಪಾನದ ಸಮಯದಲ್ಲಿ, ದೇಹದಲ್ಲಿನ ಹಾರ್ಮೋನುಗಳ ಒಳಗೆ ಅನೇಕ ಬದಲಾವಣೆಗಲಾಗುತ್ತವೆ, ಇದು ತಲೆನೋವಿಗೆ ಕಾರಣವಾಗಬಹುದು.
ಇದಲ್ಲದೆ, ಹೆರಿಗೆಗೆ ಮೊದಲು ತಲೆನೋವು ಇದ್ದರೆ ಅಥವಾ ಮೈಗ್ರೇನ್ ನ ಕೌಟುಂಬಿಕ ಇತಿಹಾಸವಿದ್ದರೆ, ಅದು ಹೆರಿಗೆ  ನಂತರದ ಹೆಡ್ ಡೆಕ್ ನ ಅಪಾಯವನ್ನು ಸಹ ಹೆಚ್ಚಿಸಬಹುದು.

59

ತಲೆನೋವು ಏಕೆ ಬರಬಹುದು?
ಕೆಲವು ಅಂಶಗಳು ತೀವ್ರವಾದ postpartum headache ಗಳನ್ನು ಪ್ರಚೋದಿಸಬಹುದು, ಅವುಗಳೆಂದರೆ:

ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳಲ್ಲಿ ಇಳಿಕೆ
ನಿರ್ಜಲೀಕರಣ(Dehydration)
ತಿನ್ನದೆ ಇರುವುದು   
ನಿದ್ರೆಯ ಕೊರತೆ
ಸ್ಟ್ರೆಸ್  ತುಂಬಾ ಆಗುವುದರಿಂದ 
ಸೆರೊಟೋನಿನ್ ಮತ್ತು ಆಕ್ಟಿಟೋನಿನ್ ಮಟ್ಟಗಳಲ್ಲಿನ ಬದಲಾವಣೆಗಳು

69

ಈ ಹೆರಿಗೆ ನಂತರದ ತಲೆನೋವನ್ನು ತಪ್ಪಿಸುವುದು ಹೇಗೆ?
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀವು ನಿಮ್ಮ ತಲೆನೋವನ್ನು ದೂರ ಮಾಡಬಹುದು. ಅದಕ್ಕಾಗಿ ಯಾವುದೇ ಔಷಧಿ(Medicine) ಸೇವಿಸುವ ಅಗತ್ಯವಿಲ್ಲ, ಬದಲಾಗಿ ನೀವು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿದರೆ ಸಾಕು, ಇದರಿಂದ ತಲೆನೋವು ಸಂಪೂರ್ಣವಾಗಿ ದೂರವಾಗುತ್ತದೆ. 

79

ಅದಕ್ಕಾಗಿ ನೀವೇನು ಮಾಡಬೇಕು ತಿಳಿಯಿರಿ... 
ಸಾಕಷ್ಟು ನಿದ್ರೆ ಪಡೆಯಿರಿ
ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ
ವಿಶ್ರಾಂತಿ ಪಡೆಯಿರಿ ಮತ್ತು ಒತ್ತಡವನ್ನು ತೆಗೆದುಕೊಳ್ಳಬೇಡಿ
ತಲೆನೋವನ್ನು ಪ್ರಚೋದಿಸುವ ವಿಷಯಗಳಿಂದ ದೂರವಿರಿ
ನಿಮ್ಮ ಆಹಾರದಲ್ಲಿ ಪ್ರೋಟೀನ್(Protein), ಕಾರ್ಬೋಹೈಡ್ರೇಟ್ ಗಳು ಮತ್ತು ಖನಿಜಗಳನ್ನು ತೆಗೆದುಕೊಳ್ಳಿ
ಪ್ರತಿದಿನ ದೈಹಿಕ ಚಟುವಟಿಕೆಯನ್ನು ಮಾಡಿ.
ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಹೇರಬೇಡಿ.
ನಿಮ್ಮ ಭಂಗಿಯನ್ನು ಚೆನ್ನಾಗಿ ಇರಿಸಿಕೊಳ್ಳಿ

89

ಅಧ್ಯಯನ ಏನು ಹೇಳುತ್ತೆ ಗೊತ್ತಾ? 
ಒಂದು ಅಧ್ಯಯನವು ಸುಮಾರು 40 ಪ್ರತಿಶತದಷ್ಟು ಮಹಿಳೆಯರಿಗೆ ಪ್ರಸವಾನಂತರದ(After delivery) ಅವಧಿಯಲ್ಲಿ ತಲೆನೋವು ಉಂಟಾಗುತ್ತದೆ ಮತ್ತು ಈ ಮೊದಲು ತಲೆನೋವು ಹೊಂದಿದ್ದ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ ಎಂದು ಕಂಡುಹಿಡಿದಿದೆ.

99

ಚಿಕಿತ್ಸೆ (Treatment)ನೀಡುವುದು ಹೇಗೆ?
ತಲೆನೋವಿಗೆ ಕಾರಣವೇನು ಎಂಬುದು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೋವು ನಿವಾರಕಗಳು, ಪೋಷಣೆ ಮತ್ತು ಉತ್ತಮ ನಿದ್ರೆಯನ್ನು ಒದಗಿಸುವ ಮೂಲಕವೂ ತಲೆನೋವನ್ನು ನಿವಾರಿಸಬಹುದು. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಬಹುದು. 

About the Author

SN
Suvarna News
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved