Asianet Suvarna News Asianet Suvarna News

Health Tips: ಪ್ರಪಂಚದಲ್ಲಿ ಇಷ್ಟೊಂದು ಜನರನ್ನು ಕಾಡ್ತಿದೆ ತಲೆನೋವು..!

Home Remedies for Headache: ತಲೆ ಇದ್ದವರಿಗೆ ಕಾಡಲಿದೆ ತಲೆ ನೋವು ಅಂತಾ ನಾವು ಜೋಕ್ ಮಾಡ್ತೇವೆ. ಆದ್ರೆ ತಲೆ ನೋವು ಬಂದಾಗ ಇಂಥ ಮಾತು ಕೇಳಿದ್ರೆ ಕೋಪ ನೆತ್ತಿಗೇರುತ್ತದೆ. ಯಾಕೆಂದ್ರೆ ಈ ನೋವನ್ನು ಸಹಿಸಿಕೊಳ್ಳುವುದು ಸುಲಭವಲ್ಲ. 
 

Headache And Migraine Problem
Author
Bangalore, First Published Apr 18, 2022, 11:32 AM IST

ಕಣ್ಣಿಗೆ ಕಾಣದ, ಅನುಭವಿಸಲಾಗದ ನೋವು (Pain)ಗಳಲ್ಲಿ ತಲೆ ನೋವು ಒಂದು. ತಲೆ ನೋವು (Head Pain ) ಬಂದ್ರೆ ಸಹಿಸಿಕೊಳ್ಳುವುದು ಕಷ್ಟ. ತಲೆ ನೋವಿನಲ್ಲಿ ಅನೇಕ ವಿಧಗಳಿವೆ. ಹಾಗೆ ಅನೇಕ ಕಾರಣ (Reason) ಗಳಿಗೆ ತಲೆ ನೋವು ಕಾಣಿಸಿಕೊಳ್ಳುತ್ತದೆ. ತಲೆ ನೋವು ಬರ್ತಿದ್ದಂತೆ ಮಾತ್ರೆ (Pill ) ನುಂಗುವವರಿದ್ದಾರೆ. ನೋವು ಸಹಿಸಲಾಗದೆ ಕೆಲವರು ಮಲಗ್ತಾರೆ. ಇನ್ನೂ ಕೆಲವರಿಗೆ ಬೆಳಿಗ್ಗೆ Morning) ಬಂದ ತಲೆ ನೋವು ರಾತ್ರಿ (Night) ಯಾದ್ರೂ ಹೋಗುವುದಿಲ್ಲ. ನಿಮಗೆ ಅಚ್ಚರಿಯಾಗ್ಬಹುದು, ಪ್ರಪಂಚದ ಜನಸಂಖ್ಯೆಯ ಶೇಕಡಾ 52 ಕ್ಕಿಂತ ಹೆಚ್ಚು ಜನರು ಪ್ರತಿ ವರ್ಷ ತಲೆನೋವಿನ ಸಮಸ್ಯೆ (Problem) ಯನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಶೇಕಡಾ 14 ರಷ್ಟು ಪ್ರಕರಣಗಳು ಮೈಗ್ರೇನ್ ಆಗಿವೆ. ಮೈಗ್ರೇನ್ (Migraine) ಪೀಡಿತ ವ್ಯಕ್ತಿಗೆ ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಮಾತ್ರವಲ್ಲ ವಾಂತಿ ಕೂಡ ಆಗುವುದಿದೆ. ಮೈಗ್ರೇನ್ ನಲ್ಲಿ ವಿಪರೀತ ನೋವು ತಿನ್ನಬೇಕಾಗುತ್ತದೆ. ತಲೆ ನೋವಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ, ಅಧ್ಯಯನಗಳು ನಡೆದಿವೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ತಲೆನೋವಿಗೆ ಒಳಗಾಗುತ್ತಾರೆ ಎಂದು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ. ನಾರ್ವೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನಾ ವರದಿಯ ಪ್ರಕಾರ, ಪ್ರಪಂಚದಾದ್ಯಂತ 20 ರಿಂದ 65 ವರ್ಷ ವಯಸ್ಸಿನವರಲ್ಲಿ ತಲೆ ನೋವು ಹೆಚ್ಚು ಕಾಣಿಸಿಕೊಳ್ತಿದೆಯಂತೆ.

ತಲೆ ನೋವಿಗೆ ಇದು ಮುಖ್ಯ ಕಾರಣ: ತಲೆ ನೋವು ಬರ್ತಿದ್ದಂತೆ ನಾವು ಕಾರಣ ಹುಡುಕಲು ಶುರು ಮಾಡ್ತೇವೆ. ಬಿಸಿಲು ಹೆಚ್ಚಾಯ್ತು, ಸುತ್ತಾಟ ಜಾಸ್ತಿಯಾಯ್ತು ಹೀಗೆ ಅನೇಕ ಕಾರಣಗಳನ್ನು ಹೇಳ್ತೇವೆ. ಆದ್ರೆ ತಲೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದು ಟೆನ್ಷನ್ ನಿಂದ. 1961 ಮತ್ತು 2022 ರ ನಡುವೆ ಪ್ರಕಟವಾದ ವರದಿಗಳ ಆಧಾರದ ಮೇಲೆ ಸಂಶೋಧಕರು ತಲೆನೋವಿನ ಸಮಸ್ಯೆಯನ್ನು ವಿವರಿಸಿದ್ದಾರೆ. ಸುಮಾರು 26 ಪ್ರತಿಶತದಷ್ಟು ಜನರು ಉದ್ವೇಗ-ಸಂಬಂಧಿತ ತಲೆನೋವಿನಿಂದ ಬಳಲುತ್ತಿದ್ದಾರೆ ಎಂದು ವಿಮರ್ಶೆ ವರದಿಯಲ್ಲಿ ಹೇಳಲಾಗಿದೆ. ಇದಲ್ಲದೆ ಶೇಕಡಾ 4.6 ರಷ್ಟು ಜನರು ಪ್ರತಿ ತಿಂಗಳು 15 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳು ತಲೆನೋವಿನಿಂದ ಬಳಲುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ. 

ಮಕ್ಕಳಿಗೆ ನಿರ್ಜಲೀಕರಣದ ಸಮಸ್ಯೆಯಿದ್ದರೆ ಗೊತ್ತಾಗೋದು ಹೇಗೆ ?

ಎಷ್ಟು ಜನರಲ್ಲಿ ಕಾಣಿಸಿಕೊಂಡಿದೆ ಮೈಗ್ರೇನ್? : ಸುಮಾರು ಶೇಕಡಾ 15.8ರಷ್ಟು ಜನರಿಗೆ ದಿನದಲ್ಲಿ ಯಾವಾಗ ಬೇಕಾದ್ರೂ ತಲೆ ನೋವು ಬರಬಹುದು. ಈ ಪೈಕಿ ಸುಮಾರು 50 ಪ್ರತಿಶತದಷ್ಟು ಜನರು ಮೈಗ್ರೇನ್ ಇದೆ ಎಂದು ಮಾಹಿತಿ ಸಂಗ್ರಹಿಸುವು ವೇಳೆ ಹೇಳಿದ್ದಾಳೆ. ಪ್ರಪಂಚದಾದ್ಯಂತ ತಲೆನೋವಿನ ಸಮಸ್ಯೆ ಸಾಮಾನ್ಯವಾಗಿದೆ ಮತ್ತು ಅನೇಕ ಜನರು ಅದರ ವಿವಿಧ ರೂಪಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಸಂಶೋಧನಾ ವರದಿಯ ಪ್ರಮುಖ ಲೇಖಕ ಲಾರ್ಸ್ ಜಾಕೋಬ್ ಸೊವ್ನರ್ ಹೇಳಿದ್ದಾರೆ. ತಲೆನೋವು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಉತ್ತಮ ಮಾರ್ಗಗಳನ್ನು ಕಂಡುಹಿಡಿಯುವ ಅವಶ್ಯಕತೆಯಿದೆ ಎಂದವರು ಹೇಳಿದ್ದಾರೆ. 

ಆಹಾರದ ವಿಚಾರದಲ್ಲಿ ಎಲ್ಲರೂ ಮಾಡುವ ತಪ್ಪುಗಳನ್ನು ನೀವೂ ಮಾಡ್ಬೇಡಿ

ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ತಲೆ ನೋವು : ಯಸ್. ಸಂಶೋಧನೆ ವರದಿ ಪ್ರಕಾರ, ಮಹಿಳೆಯರಿಗೆ ಹೆಚ್ಚಿನ ತಲೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಶೇಕಡಾ 8.6 ಪುರುಷರು ಮೈಗ್ರೇನ್‌ಗೆ ಬಲಿಯಾಗುತ್ತಾರೆ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಆದರೆ 17 ಪ್ರತಿಶತದಷ್ಟು ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ. ತಲೆ ನೋವು ಹೆಚ್ಚಿನ ಮಹಿಳೆಯರಿಗೆ ಕಾಡುವುದಲ್ಲದೆ ಹೆಚ್ಚು ದಿನ ಮಹಿಳೆಯರನ್ನೇ ಕಾಡುತ್ತದೆ. ಶೇಕಡಾ 6 ರಷ್ಟು ಮಹಿಳೆಯರಿಗೆ ತಿಂಗಳಲ್ಲಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಪುರುಷರ ವಿಷಯದಲ್ಲಿ ಇದು ಕೇವಲ 2.9 ಪ್ರತಿಶತದಷ್ಟು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. 

Follow Us:
Download App:
  • android
  • ios