ಲಂಚ್ ಬ್ಯಾಗ್‌ನಲ್ಲಿರುವ ಜಿಡ್ಡು, ಕಲೆ, ವಾಸನೆ ಹೋಗಲಾಡಿಸಲು ಇಲ್ಲಿದೆ ಸ್ಮಾರ್ಟ್ ಐಡಿಯಾ
Lunch bag cleaning: ಕೆಲಸಕ್ಕೆ, ಕಾಲೇಜಿಗೆ ಲಂಚ್ ಬ್ಯಾಗ್ ಒಯ್ಯುತ್ತೇವೆ. ಆದರೆ ಬ್ಯಾಗ್ ಒಳಗೆ ಆಗುವ ಸಣ್ಣ ಸಣ್ಣ ಸೋರಿಕೆಗಳು, ಜಿಡ್ಡು ಮತ್ತು ತೇವಾಂಶದಿಂದಾಗಿ ಬ್ಯಾಗ್ ಅಶುಚಿಯಾಗಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಅದು ಯಾವಾಗಲೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್.

ಸರಳ ಹಂತ
ನಾವು ಪ್ರತಿದಿನ ಕೆಲಸಕ್ಕೆ ಅಥವಾ ಕಾಲೇಜಿಗೆ ಲಂಚ್ ಬ್ಯಾಗ್ ತೆಗೆದುಕೊಂಡು ಹೋಗುತ್ತೇವೆ. ಊಟದ ಸಾರು ಅಥವಾ ಎಣ್ಣೆ ಸೋರಿ ಬ್ಯಾಗ್ ಒಳಗೆ ಕಲೆ ಮತ್ತು ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಬರೀ ಬಟ್ಟೆಯಿಂದ ಒರೆಸಿದರೆ ಈ ವಾಸನೆ ಹೋಗುವುದಿಲ್ಲ. ಹಾಗಾದರೆ ಬ್ಯಾಗ್ ಅನ್ನು ಡೀಪ್ ಆಗಿ ಸ್ವಚ್ಛಗೊಳಿಸುವುದು ಹೇಗೆ? ಈ ಸರಳ ಹಂತ ಅನುಸರಿಸಿ.
ಮೂಲೆ ಮತ್ತು ಹೊಲಿಗೆಗಳ ಮೇಲೆ ಗಮನವಿರಲಿ
ಬ್ಯಾಗ್‌ನ ಮೂಲೆಗಳಲ್ಲಿ ಮತ್ತು ಹೊಲಿಗೆಯ ಎಳೆಗಳ ಮಧ್ಯೆ ಸಣ್ಣದಾದ ಅನ್ನದ ಕಣಗಳು ಅಥವಾ ಸಾಂಬಾರ್ ಕಲೆಗಳು ಸಿಲುಕಿಕೊಂಡಿರುತ್ತವೆ. ಒಂದು ಹಳೆಯ ಟೂತ್‌ಬ್ರಷ್ ತೆಗೆದುಕೊಂಡು, ಸ್ವಲ್ಪ ಸೋಪ್ ನೀರಿನಲ್ಲಿ ಅದ್ದಿ ಆ ಮೂಲೆಗಳನ್ನು ಉಜ್ಜಿ ಸ್ವಚ್ಛಗೊಳಿಸಿ.
ಎನ್‌ಜೈಮ್ ಕ್ಲೀನರ್ ಬಳಸಿ
ಒಂದು ವೇಳೆ ಬ್ಯಾಗ್‌ನಲ್ಲಿ ಹಾಲು ಅಥವಾ ಮಾಂಸದ ಸಾರಿನ ಕಲೆಗಳಿದ್ದರೆ, ಸಾಮಾನ್ಯ ಸೋಪಿಗಿಂತ ಎನ್‌ಜೈಮ್ ಕ್ಲೀನರ್ ಹೆಚ್ಚು ಪರಿಣಾಮಕಾರಿ. ಇದು ಕೆಟ್ಟ ವಾಸನೆಯನ್ನು ಹರಡದಂತೆ ತಡೆದು, ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.
ಸ್ಟೀಮ್ ಕ್ಲೀನಿಂಗ್
ಬ್ಯಾಗ್ ಅನ್ನು ನೀರಿನಲ್ಲಿ ನೆನೆಸಲು ಸಾಧ್ಯವಾಗದಿದ್ದರೆ, ಬಿಸಿ ನೀರಿನ ಆವಿಯನ್ನು ಬಳಸಿ. ಇದು ಬ್ಯಾಗ್‌ನ ಒಳಭಾಗದಲ್ಲಿ ಅಂಟಿಕೊಂಡಿರುವ ಜಿಡ್ಡನ್ನು ಸಡಿಲಗೊಳಿಸುತ್ತದೆ ಮತ್ತು ಕ್ರಿಮಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಅಡುಗೆ ಸೋಡಾ
ಬ್ಯಾಗ್ ಒಳಗೆ ವಾಸನೆ ಹೋಗದಿದ್ದರೆ, ಒಂದು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಅಥವಾ ಇದ್ದಿಲಿನ ಚೂರನ್ನು ಇಟ್ಟು ಬ್ಯಾಗ್‌ನ ಜಿಪ್ ಹಾಕಿ ರಾತ್ರಿಯಿಡೀ ಇಡಿ. ಇದು ಬ್ಯಾಗ್‌ನಲ್ಲಿರುವ ಎಲ್ಲಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.
ಜಿಪ್‌ಗಳ ನಿರ್ವಹಣೆ ಹೇಗೆ?
ಜಿಪ್‌ಗಳಲ್ಲಿ ಜಿಗುಟಾದ ಅಂಶವಿದ್ದರೆ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ. ಇಯರ್ ಬಡ್ಸ್ ಬಳಸಿ ಜಿಪ್‌ನ ಹಲ್ಲುಗಳನ್ನು ಸ್ವಚ್ಛಗೊಳಿಸಿ. ನಂತರ ಸ್ವಲ್ಪ ವ್ಯಾಸಲಿನ್ ಅಥವಾ ಮೇಣವನ್ನು ಹಚ್ಚಿದರೆ ಜಿಪ್ ಸುಲಭವಾಗಿ ರನ್ ಆಗುತ್ತದೆ.
ಗಾಳಿ ಮತ್ತು ಬಿಸಿಲು
ಬ್ಯಾಗ್ ತೊಳೆದ ನಂತರ ಅಥವಾ ಸ್ವಚ್ಛಗೊಳಿಸಿದ ನಂತರ ಅದನ್ನು ಉಲ್ಟಾ ಮಾಡಿ (ಒಳಗಿನ ಭಾಗ ಹೊರಗೆ ಬರುವಂತೆ) ಸ್ವಲ್ಪ ಸಮಯ ಬಿಸಿಲಿನಲ್ಲಿ ಮತ್ತು ಗಾಳಿಯಲ್ಲಿ ಇಡಿ. ಸೂರ್ಯನ ಕಿರಣಗಳು ನೈಸರ್ಗಿಕವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

