- Home
- Life
- Food
- ತಣ್ಣಗಾಗಿ, ಒಣಗಿ ಗಟ್ಟಿಯಾದ ಚಪಾತಿಯನ್ನ ಈಗಷ್ಟೇ ಲಟ್ಟಿಸಿದಂತೆ ಹತ್ತಿ ಹಾಗೆ ಸಾಫ್ಟ್ ಆಗಿ ಒಟ್ಟಿಗೆ ಬಿಸಿ ಮಾಡೋದು ಹೇಗೆ?
ತಣ್ಣಗಾಗಿ, ಒಣಗಿ ಗಟ್ಟಿಯಾದ ಚಪಾತಿಯನ್ನ ಈಗಷ್ಟೇ ಲಟ್ಟಿಸಿದಂತೆ ಹತ್ತಿ ಹಾಗೆ ಸಾಫ್ಟ್ ಆಗಿ ಒಟ್ಟಿಗೆ ಬಿಸಿ ಮಾಡೋದು ಹೇಗೆ?
How to soften hard chapatis: ಬೆಳಗ್ಗೆ ಮಾಡಿಟ್ಟ ಚಪಾತಿ ರಾತ್ರಿ ವೇಳೆಗೆ ತಣ್ಣಗಾಗಿ, ಒಣಗಿದಂತೆ ಗಟ್ಟಿಯಾಗುವುದು ಸಾಮಾನ್ಯ. ಇದನ್ನು ಓವನ್ ಇಲ್ಲದೆ, ಹಂಚಿನ ಮೇಲೆ ತುಪ್ಪ-ಬೆಣ್ಣೆ ಹಚ್ಚಿ ಕಾಯಿಸದೇ, ಈಗಷ್ಟೇ ಲಟ್ಟಿಸಿ ಮಾಡಿದಂತೆ ಹತ್ತಿಯ ಹಾಗೆ ಸಾಫ್ಟ್ ಆಗಿ ಒಟ್ಟಿಗೆ ಬಿಸಿ ಮಾಡೋ ವಿಧಾನವಿದು.

ಮತ್ತೆ ಬಿಸಿ ಮಾಡಿದರೆ ಗಟ್ಟಿಯಾಗುತ್ತವೆ
ಮತ್ತೆ ಬಿಸಿ ಮಾಡಿದರೆ ಗಟ್ಟಿಯಾಗುತ್ತವೆ
ಹೊರಗೆ ಥಂಡಿ ವಾತವರಣವಿದ್ದಾಗ ಬಿಸಿ ಬಿಸಿಯಾದ ಆಹಾರವನ್ನು ಸೇವಿಸಿದರೆ ಸಿಗುವ ಮಜಾವೇ ಬೇರೆ. ಆದರೆ ಪ್ರತಿಯೊಬ್ಬರಿಗೂ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಕೆಲಸಕ್ಕೆ ಹೋಗುವವರ (Working professionals) ಮನೆಗಳಲ್ಲಿ ಅಡುಗೆಯವರಾಗಲಿ ಅಥವಾ ನಾವೇ ಆಗಲಿ ಮೊದಲೇ ಚಪಾತಿ ಮತ್ತಿತರ ಅಡುಗೆಗಳನ್ನು ಮಾಡಿಡಬೇಕಾಗುತ್ತದೆ. ಹೀಗೆ ಮಾಡಿಟ್ಟ ಚಪಾತಿಯನ್ನ ನಂತರ ಮತ್ತೆ ಬಿಸಿ ಮಾಡಿ ತಿನ್ನಬೇಕೆಂದರೆ ಅವು ಗಟ್ಟಿಯಾಗುತ್ತವೆ (ಖಡಕ್ ಆಗುತ್ತವೆ) ಮತ್ತು ಒಂದೊಂದೇ ಚಪಾತಿಯನ್ನ ಬಿಸಿ ಮಾಡಲು ತುಂಬಾ ಸಮಯವೂ ಹಿಡಿಯುತ್ತದೆ. ಮನೆಯಲ್ಲಿ ಓವನ್ (Oven) ಇಲ್ಲದಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚು. ಏಕೆಂದರೆ ಚಪಾತಿಗೆ ಮತ್ತೆ ತುಪ್ಪ ಅಥವಾ ಬೆಣ್ಣೆ ಸವರಿ ಹಂಚಿನ ಮೇಲೆ ಕಾಯಿಸಿದರೂ ಅವುಗಳ ರುಚಿ ಬದಲಾಗುತ್ತದೆ ಮತ್ತು ಇದು ಆರೋಗ್ಯಕ್ಕೂ ಅಷ್ಟೊಂದು ಒಳ್ಳೆಯದಲ್ಲ.
ಏನಿದು ಪ್ರೆಶರ್ ಕುಕ್ಕರ್ ಹ್ಯಾಕ್
ಏನಿದು ಪ್ರೆಶರ್ ಕುಕ್ಕರ್ ಹ್ಯಾಕ್
ಚಿಂತಿಸಬೇಡಿ, ಇಂತಹ ಸಂದರ್ಭದಲ್ಲಿ ಈ ಒಂದು ಕಿಚನ್ ಹ್ಯಾಕ್ ನಿಮಗೆ ತುಂಬಾ ಸಹಾಯ ಮಾಡುತ್ತದೆ. ತಣ್ಣಗಾದ ಚಪಾತಿಯನ್ನ ಬಿಸಿ ಮಾಡುವ ಈ ವಿಧಾನವು ಅತ್ಯಂತ ಸರಳವಾಗಿದ್ದು, ಇದರಿಂದ ಚಪಾತಿ ಈಗಷ್ಟೇ ಲಟ್ಟಿಸಿ ಮಾಡಿದ ತಾಜಾ ಚಪಾತಿಯಂತೆಯೇ ಬಿಸಿಯಾಗಿ, ಅಷ್ಟೇ ಮೃದುವಾದ ರುಚಿ ನೀಡುತ್ತದೆ. ಹಾಗಾದರೆ ಏನಿದು ಪ್ರೆಶರ್ ಕುಕ್ಕರ್ ಹ್ಯಾಕ್ ಎಂದು ನೀವೂ ತಿಳಿದುಕೊಳ್ಳಿ.
ಉಳಿದಿರುವ ಚಪಾತಿ ಬಿಸಿ ಮಾಡುವ ವಿಧಾನ
ಉಳಿದಿರುವ ಚಪಾತಿ ಬಿಸಿ ಮಾಡುವ ವಿಧಾನ
ಮೊದಲೇ ಮಾಡಿಟ್ಟ ಚಪಾತಿ ತಣ್ಣಗಾದ ಮೇಲೆ, ಅದನ್ನು ಊಟದ ಸಮಯದಲ್ಲಿ ಬಿಸಿ ಮಾಡಲು ಹೋದಾಗ ಗಟ್ಟಿಯಾಗುವುದು ಸಾಮಾನ್ಯ. ಇದರಿಂದ ಚಪಾತಿಯ ಅಸಲಿ ರುಚಿಯೇ ಬದಲಾಗಿ ಒಣಗಿದಂತೆ ಅನಿಸುತ್ತದೆ. ಹೀಗಾಗದಿರಲು ಈ ಅದ್ಭುತ ಹ್ಯಾಕ್ ಅನ್ನು ಖಂಡಿತವಾಗಿ ತಿಳಿದುಕೊಳ್ಳಿ. ಇದರಲ್ಲಿ ಪ್ರೆಶರ್ ಕುಕ್ಕರ್ ಸಹಾಯದಿಂದ ಚಪಾತಿಯನ್ನ ಬಿಸಿ ಮಾಡಲಾಗುತ್ತದೆ. ಇದರಿಂದ ಚಪಾತಿಯು ನೂರಕ್ಕೆ ನೂರರಷ್ಟು ಸಾಫ್ಟ್ ಆಗಿ ಉಳಿಯುತ್ತದೆ ಮತ್ತು ಇವುಗಳಿಗೆ ಯಾವುದೇ ರೀತಿಯ ತುಪ್ಪ ಅಥವಾ ಬೆಣ್ಣೆಯನ್ನು ಸವರುವ ಅಗತ್ಯವೂ ಇರುವುದಿಲ್ಲ.
ಹಂತ ಹಂತವಾಗಿ ಈ ಹ್ಯಾಕ್ ಅನ್ನು ಹೀಗೆ ಫಾಲೋ ಮಾಡಿ
ಹಂತ ಹಂತವಾಗಿ ಈ ಹ್ಯಾಕ್ ಅನ್ನು ಹೀಗೆ ಫಾಲೋ ಮಾಡಿ
*ಚಪಾತಿಯನ್ನು ಇಡಲು ಪ್ಲಾಸ್ಟಿಕ್ ಕೋಟಿಂಗ್ ಇರುವ ಕ್ಯಾಸರೋಲ್ (Casserole) ಬಳಸುವ ಬದಲು, ಹಳೆಯ ಶೈಲಿಯ ನಮ್ಮ ದೇಶಿ ಸ್ಟೀಲ್ ಡಬ್ಬಿಗಳನ್ನು (Steel Boxes) ಬಳಸಿ.
*ಈ ಸ್ಟೀಲ್ ಡಬ್ಬಿಗಳಲ್ಲಿ ಒಂದು ಸ್ವಚ್ಛವಾದ ಹತ್ತಿ ಬಟ್ಟೆಯನ್ನು (Cotton cloth) ಹರಡಿ, ಅದರೊಳಗೆ ಚಪಾತಿಯನ್ನ ಚೆನ್ನಾಗಿ ಸುತ್ತಿ ಇಡಿ.
*ಚಪಾತಿಯನ್ನು ಬಿಸಿ ಮಾಡಬೇಕಾದಾಗ ಒಂದು ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ. ಆದರೆ ಗಮನಿಸಿ, ಆ ಪ್ರೆಶರ್ ಕುಕ್ಕರ್ ನಿಮ್ಮ ಚಪಾತಿಯ ಸ್ಟೀಲ್ ಡಬ್ಬಿಯು ಅದರೊಳಗೆ ಸುಲಭವಾಗಿ ಕೂರುವಷ್ಟು ದೊಡ್ಡದಾಗಿರಬೇಕು.
*ಒಂದು ವೇಳೆ ನಿಮ್ಮ ಚಪಾತಿಯ ಡಬ್ಬಿ ದೊಡ್ಡದಾಗಿದ್ದರೆ, ಆಗ ಚಪಾತಿಯನ್ನು ಯಾವುದೇ ಸಣ್ಣ ಸ್ಟೀಲ್ ಟಿಫಿನ್ ಬಾಕ್ಸ್‌ನಲ್ಲಾದರೂ ಇಡಬಹುದು. ಅಂದರೆ ಆ ಟಿಫಿನ್ ಬಾಕ್ಸ್ ಕುಕ್ಕರ್‌ನೊಳಗೆ ಆರಾಮವಾಗಿ ಫಿಟ್ ಆಗುವಂತಿರಬೇಕು.
ವಿಶಲ್ ಹಾಕದೆ ಹಬೆಯಲ್ಲಿ ಬೇಯಿಸಿ
ವಿಶಲ್ ಹಾಕದೆ ಹಬೆಯಲ್ಲಿ ಬೇಯಿಸಿ
ಈಗ ಕುಕ್ಕರ್‌ನ ತಳಕ್ಕೆ ಸ್ವಲ್ಪ ನೀರು ಹಾಕಿ, ಅದರ ಮೇಲೆ ಒಂದು ಸ್ಟ್ಯಾಂಡ್ ಇಟ್ಟು, ಈ ಚಪಾತಿಯ ಡಬ್ಬಿಯನ್ನು ಅದರ ಮೇಲೆ ಮುಚ್ಚಳ ಮುಚ್ಚಿ ಇಡಬೇಕು. ನಂತರ ಕುಕ್ಕರ್‌ನ ಮುಚ್ಚಳ ಹಾಕಿ ವಿಸಿಲ್ ಹಾಕದೆ ಕೇವಲ 3-4 ನಿಮಿಷ ಹಬೆಯಲ್ಲಿ (Steam) ಬಿಸಿ ಮಾಡಿದರೆ ಚಪಾತಿಯು ಹತ್ತಿಯಂತೆ ಸಾಫ್ಟ್ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.