Vastu Tips: ತುಳಸಿ ಗಿಡಕ್ಕೆ ಈ ದಿನಗಳಂದು ನೀರು ಹಾಕಿದ್ರೆ ದಟ್ಟ ದರಿದ್ರತನ ಬರುತ್ತೆ!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ತುಳಸಿ ಗಿಡಕ್ಕೆ ನೀರು ಹಾಕಲು ಕೆಲವು ನಿಯಮಗಳಿವೆ. ಈ ಸಮಯದಲ್ಲಿ ತುಳಸಿಗೆ ನೀರು ಹಾಕುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು.

ವಾಸ್ತು ಶಾಸ್ತ್ರ
ಬಹುತೇಕರ ಜನರ ಜೀವನದಲ್ಲಿ ವಾಸ್ತು ಶಾಸ್ತ್ರ ಪ್ರಮುಖ ಭಾಗವಾಗಿ ಬದಲಾಗಿದೆ. ಕೆಲವರು ಮನೆ ನಿರ್ಮಿಸುವಾಗ ಮಾತ್ರ ವಾಸ್ತುಶಾಸ್ತ್ರ ಪರಿಗಣಿಸುತ್ತಾರೆ. ಆದ್ರೆ ಜೀವನದ ಪ್ರತಿಯೊಂದು ಹಂತದಲ್ಲಿಯೂ ವಾಸ್ತುಶಾಸ್ತ್ರ ಪ್ರಾಮುಖ್ಯತೆಯನ್ನು ಹೊಂದಿದೆ.
ಯಾವಾಗ ನೀರು ಹಾಕಬಾರದು?
ಮನೆಯಂಗಳ ಅಥವಾ ಮನೆ ಮುಂದೆ ತುಳಸಿ ಗಿಡ ನಡೆಸಲಾಗುತ್ತದೆ. ಈ ತುಳಸಿ ಗಿಡದ ಪೂಜೆ ಸೇರಿದಂತೆ ನೀರು ಹಾಕೋದರ ಬಗ್ಗೆಯೂ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ನಿಯಮಗಳ ಪಾಲನೆಯಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ತುಳಸಿ ಗಿಡಕ್ಕೆ ಯಾವಾಗ ನೀರು ಹಾಕಬಾರದು ಎಂಬ ನಿಯಮವಿದೆ. ಈ ವಿಷಯ ತಿಳಿಯದೇ ಹಲವರು ನಿಯಮ ಪಾಲನೆ ಮಾಡಲ್ಲ. ಇದರಿಂದ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಭಾನುವಾರ ನೀರು ಹಾಕಬೇಡಿ
ವಾಸ್ತುಶಾಸ್ತ್ರಜ್ಞರ ಪ್ರಕಾರ, ಭಾನುವಾರವನ್ನು ವಿಷ್ಣುವಿಗೆ ಅರ್ಪಿಸಿದ ದಿನ ಎಂದು ಹೇಳುತ್ತಾರೆ. ಹಾಗೆಯೇ ಭಾನುವಾರ ತುಳಸಿಗೆ ವಿಶೇಷವಾದ ದಿನ. ಈ ದಿನ ತುಳಸಿ ನೀರು ಇಲ್ಲದೇ ಉಪವಾಸ ಆಚರಿಸುತ್ತಾಳೆ. ನಾವು ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕೋದರಿಂದ ಉಪವಾಸವನ್ನು ಕೊನೆ ಮಾಡಿದಂತಾಗುತ್ತದೆ. ಹಾಗಾಗಿ ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕೋದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.
ಏಕಾದಶಿಯಂದು ನೀರು ಹಾಕೋದು ಅಶುಭ
ಅದೇ ರೀತಿ ಏಕಾದಶಿಯಂದು ಸಹ ತುಳಸಿ ಗಿಡಕ್ಕೆ ನೀರು ಹಾಕಬಾರದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಏಕಾದಶಿಯ ದಿನದಂದು ತುಳಸಿಯು ವಿಷ್ಣುವಿಗೆ ಉಪವಾಸ ಆಚರಿಸುತ್ತಾಳೆ. ಉಪವಾಸದ ಸಂದರ್ಭದಲ್ಲಿ ನೀರು ಹಾಕಿದ್ರೆ ತುಳಸಿ ದೇವಿಯ ವ್ರತವನ್ನು ಮುರಿದಂತಾಗುತ್ತದೆ. ಈ ಕಾರಣದಿಂದ ಏಕಾದಶಿಯಂದು ನೀರು ಹಾಕಬಾರದು.
ಗ್ರಹಣ ಸಮಯದಲ್ಲಿ ನೀರನ್ನು ಅರ್ಪಿಸಬೇಡಿ
ಭಾನುವಾರ, ಏಕಾದಶಿ ಜೊತೆ ಗ್ರಹಣದ ಸಂದರ್ಭದಲ್ಲಿಯೂ ತುಳಸಿಗೆ ನೀರು ಅರ್ಪಿಸಬಾರದು. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಶುಭ ಫಲ ಸಿಗುವುದಿಲ್ಲ. ಆದ್ದರಿಂದ ತುಳಸಿಗೆ ನೀರು ಅರ್ಪಿಸಬಾರದು. ಗ್ರಹಣ ಮೋಕ್ಷದ ನಂತ್ರವೇ ನೀರು ಅರ್ಪಿಸಬೇಕು. ಕೆಲವರು ಗ್ರಹಣ ಸಮಯದಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸಬಾರದು ಎಂದು ಸಲಹೆ ನೀಡುತ್ತಾರೆ.

