- Home
- Entertainment
- TV Talk
- Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ
Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ
ತೇಜಸ್ ಮತ್ತು ಆತನ ಪೋಷಕರನ್ನು ಅಪಹರಿಸಿ, ಅದಕ್ಕೆ ಕರ್ಣನೇ ಕಾರಣ ಎಂದು ನಂಬಿಸಲಾಗಿದೆ. ಇದರಿಂದ ಕರ್ಣನ ಮೇಲೆ ಮತ್ತೊಂದು ಅಪವಾದ ಬಂದಿದ್ದು, ನಿತ್ಯಾ ಮತ್ತೆ ತಪ್ಪು ತಿಳಿದುಕೊಳ್ಳುವ ಆತಂಕ ಎದುರಾಗಿದೆ. ಮತ್ತೊಂದೆಡೆ, ನಿತ್ಯಾ ಮೂರು ತಿಂಗಳ ನಂತರ ಕರ್ಣನ ಜೀವನದಿಂದ ದೂರ ಹೋಗಲು ನಿರ್ಧರಿಸಿದ್ದಾಳೆ.

ವೀಕ್ಷಕರಲ್ಲಿ ಆತಂಕ
ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಮತ್ತು ತಾಳ್ಮೆಯಿಂದ ಎದುರಿಸುತ್ತಿರುವ ಮೇಲೆ ಮತ್ತೊಂದು ಅಪವಾದ ಬಂದಿದೆ. ಪದೇ ಪದೇ ಕೋಪಗೊಳ್ಳುವ ಸಿಡುಕಿನ ಸ್ವಭಾವ ಹೊಂದಿರುವ ನಿತ್ಯಾ ಮತ್ತೆ ಕರ್ಣನನ್ನು ತಪ್ಪು ಅರ್ಥ ಮಾಡಿಕೊಂಡ್ರೆ ಹೇಗೆ ಎಂದು ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ. ನೀಚ ರಮೇಶ್‌ನ ದುಷ್ಟತನಕ್ಕೆ ವೀಕ್ಷಕರು ಹಿಡಿಶಾಪ ಹಾಕುತ್ತಿದ್ದಾರೆ.
ಕೋಣೆಯಲ್ಲಿ ಬಂಧಿಯಾಗಿರುವ ತೇಜಸ್
ಮದುವೆ ಮಂಟಪದಿಂದ ತೇಜಸ್ ಮತ್ತು ಆತನ ತಂದೆ-ತಾಯಿ ಎಲ್ಲಿ ಹೋದ್ರು ಎಂಬುವುದು ನಿಗೂಢವಾಗಿತ್ತು. ತೇಜಸ್ ಮತ್ತು ಆತನ ಪೋಷಕರನ್ನು ಕೋಣೆಯೊಂದರಲ್ಲಿ ಬಂಧಿಸಿಟ್ಟಿರೋದನ್ನು ಇಂದಿನ ಸಂಚಿಕೆಯಲ್ಲಿ ತೋರಿಸಲಾಗಿದೆ. ಆದ್ರೆ ಯಾರು ತಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಯದೇ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೋರ್ವ, ನಮ್ಮ ಬಾಸ್ ದಾರಿಗೆ ಅಡ್ಡ ಬಂದಿದ್ದಕ್ಕೆ ಈ ಪರಿಸ್ಥಿತಿ ಎಂದು ಹೇಳಿದ್ದಾನೆ.
ತೇಜಸ್ ಮತ್ತು ಪೋಷಕರ ಅಪಹರಣ
ನಿಮ್ಮ ಬಾಸ್ ಯಾರು ಎಂದು ಕೇಳಿದ್ರೂ ಆ ವ್ಯಕ್ತಿ ಯಾವುದೇ ಉತ್ತರ ನೀಡಲ್ಲ. ಆದ್ರೆ ಫೋನ್‌ನಲ್ಲಿ ಮಾತನಾಡುವಾಗ ತೇಜಸ್‌ಗೆ ಕೇಳುವಂತೆ ಕರ್ಣನ ಹೆಸರು ಹೇಳುತ್ತಾ ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡ ತೇಜಸ್, ತಮ್ಮನ್ನು ಕಿಡ್ನ್ಯಾಪ್ ಮಾಡಿಸಿದ್ದು ಕರ್ಣ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಯಾಕೆ ಕರ್ಣ ಹೀಗೆ ಮಾಡಿದೆ? ನಾವು ಏನು ತಪ್ಪು ಮಾಡದ್ದೀವಿ ಎಂದು ತೇಜಸ್ ತಾಯಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?
ಕರ್ಣನ ಮೇಲೆ ಅಪವಾದ
ಒಂದು ವೇಳೆ ತೇಜಸ್ ಅಲ್ಲಿಂದ ಹೊರ ಬಂದ್ಮೇಲೆ ಅವನು ನೇರವಾಗಿಯೇ ಕರ್ಣನನ್ನು ದೂಷಿಸೋದು ಗ್ಯಾರಂಟಿ. ನಿತ್ಯಾ ಜೊತೆ ಮದುವೆಯಾಗಲು ಕರ್ಣ ನಮ್ಮನ್ನು ಕಿಡ್ನ್ಯಾಪ್ ಮಾಡಿಸಿದ್ದು ಎಂದು ತೇಜಸ್ ತಿಳಿದುಕೊಳ್ಳುವ ಸಾಧ್ಯತೆಗಳಿವೆ. ಹಿಂದಿರುಗಿ ಬಂದು ನಿತ್ಯಾಳನ್ನು ತೇಜಸ್ ಒಪ್ಪಿಕೊಳ್ಳದೇ ಹೋದ್ರೆ ಸೀರಿಯಲ್ ಮತ್ತೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: Karna Serial: ಮುತ್ತಿನಂಥ ಮಾತು ಹೇಳಿ ಅಪ್ಪ-ತಮ್ಮನಿಗೆ ಶಾಕ್ ಕೊಟ್ಟ ಕರ್ಣ; ನಿಧಿ ಕನ್ಫ್ಯೂಸ್
ಮೂರು ತಿಂಗಳ ಸಮಯ ಕೇಳಿದ ನಿತ್ಯಾ
ಕರ್ಣನ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಅಚ್ಚರಿ ಘಟನೆಗಳಿಗೆ ಗಂಡ ರಮೇಶ್ ಕಾರಣ ಎಂದು ಮಾಲತಿಗೆ ಗೊತ್ತಿದ್ರೂ ಏನು ಮಾಡಲಾಗದೇ ಅಸಹಾಯಕಳಾಗಿದ್ದಾಳೆ. ಮತ್ತೊಂದೆಡೆ ಕರ್ಣನ ಸಹಾಯಕ್ಕೆ ಆಭಾರಿಯಾಗಿರುವ ನಿತ್ಯಾ ಮೂರು ತಿಂಗಳ ಸಮಯ ಕೇಳಿದ್ದಾಳೆ. ಮೂರು ತಿಂಗಳ ನಂತರ ಕರ್ಣನ ಜೀವನದಿಂದ ದೂರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾಳೆ.
ಇದನ್ನೂ ಓದಿ: ಇಷ್ಟೆಲ್ಲಾ ಆದ್ಮೇಲೆ ಕರ್ಣನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ: ಮೊದಲ ರಾತ್ರಿಯಲ್ಲಿ ಬಯಲಾಗುವುದೇ ಸತ್ಯ?