ಜರತಾರಿ ಸೀರೆ, ಮುಖದಲ್ಲಿ ನಾಚಿಕೆ…. ಕೊನೆಗೂ ಗುಡ್ ನ್ಯೂಸ್ ಕೊಟ್ಟೆ ಬಿಟ್ರು ನಮ್ರತಾ ಗೌಡ!
Namratha Gowda: ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿರುವ ಪ್ರಶ್ನೆ ಅಂದ್ರೆ ನಮ್ರತಾ ಗೌಡ ಅವರ ಮದುವೆ ಯಾವಾಗ ಎಂದು? ಈ ಹಿಂದೆ ನಟಿಯನ್ನೇ ಆ ಪ್ರಶ್ನೆ ಕೇಳಿದಾಗ, ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದರು. ಇದೀಗ ನಮ್ರತಾ ಹೊಸ ಫೋಟೊ ನೋಡಿ ಫ್ಯಾನ್ಸ್ ಕುತೂಹಲ ಹೆಚ್ಚಿದೆ.

ನಮ್ರತಾ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ನಮ್ರತಾ ಗೌಡ ಶೇರ್ ಮಾಡಿರುವ ಹೊಸ ಫೋಟೊಗಳು ಹಾಗೂ ಅದಕ್ಕೆ ಅವರು ಕೊಟ್ಟಿರುವ ಕ್ಯಾಪ್ಶನ್ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ಫೋಟೋಗಳಲ್ಲಿ ಏನಿದೆ?
ಜರತಾರಿ ಸೀರೆಯಲ್ಲಿ ನಮ್ರತಾ
ನಮ್ರತಾ ಗೌಡ ಐವರಿ ಮತ್ತು ಕೆಂಪು ಬಣ್ಣದ ಜರತಾರಿ ಸೀರೆ ಧರಿಸಿ, ಕೈತುಂಬ ಬಳೆ, ಮುಡಿ ತುಂಬಾ ಹೂವು, ಜ್ಯುವೆಲ್ಲರಿ ಧರಿಸಿ ಪೋಸ್ ಕೊಟ್ಟಿದ್ದು, ಇದರ ಜೊತೆಗೆ ನಟಿ ಕೊಟ್ಟಿರುವ ಕ್ಯಾಪ್ಶನ್ ಇದೀಗ ಸದ್ದು ಮಾಡುತ್ತಿದೆ. ನಟಿಯ ಈ ಮುದ್ದಾದ ಲುಕ್, ಕೊಂಚ ನಾಚಿಕೆ ಮದುಮಗಳ ಕಳೆಯನ್ನು ಹೆಚ್ಚಿಸಿದೆ.
ನಟಿ ಕೊಟ್ಟಿರುವ ಕ್ಯಾಪ್ಶನ್ ಏನು?
This next chapter is called “Answered Prayers” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಂದರೆ ನಮ್ರತಾ ಕಂಡಿದ್ದ ಕನಸು ನನಸಾಗಿದೆ ಎಂದು ಅರ್ಥ. ಅವರ ಪ್ರಾರ್ಥನೆಯನ್ನು ದೇವರು ಕೇಳಿಕೊಂಡಿದ್ದಾನೆ, ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ ಅನ್ನೋದನ್ನು ಸೂಚಿಸುವ ಕ್ಯಾಪ್ಶನ್ ಇದಾಗಿದೆ. ಇದನ್ನು ನೋಡಿ ಅಭಿಮಾನಿಗಳು ಸಹ ಸಖತ್ ಖುಷಿಯಾಗಿದ್ದಾರೆ.
ಕಾರ್ತಿ-ನಮ್ಮು ಫ್ಯಾನ್ ಫುಲ್ ಖುಷ್
ನಮ್ರತಾ ಫೋಟೊಗಳನ್ನು ಹಾಗೂ ಕ್ಯಾಪ್ಶನ್ ನೋಡಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಫ್ಯಾನ್ ಪೇಜ್ ಗಳು ಖುಷಿ ಪಟ್ಟಿವೆ. ಶೀಘ್ರದಲ್ಲೇ ಇಬ್ಬರ ಮದುವೆಯಾಗಲಿದೆ ಎನ್ನುವ ಕುತೂಹಲ ಕೂಡ ಜನರಲ್ಲಿ ಮೂಡಿದೆ. ಇನ್ನೂ ಕೆಲವರು ಇದು ‘ಕರ್ಣ’ ಸೀರಿಯಲ್ ಗೆಟಪ್, ಕೊನೆಗೂ ನಿತ್ಯಾ ಮದುವೆ ನಡೆಯುತ್ತಿದೆ, ಅದೇ ದೊಡ್ಡ ಖುಷಿ ಸಂಗತಿ ಎಂದು ಹೇಳುತ್ತಿದ್ದಾರೆ.
ನಿತ್ಯಾ- ತೇಜಸ್ ಮದುವೆ ನಡೆಯುತ್ತಾ?
ಕರ್ಣ ಧಾರಾವಾಹಿಯಲ್ಲಿ ಸದ್ಯ ಕರ್ಣ, ನಿಧಿ, ನಿತ್ಯಾ ಮತ್ತು ತೇಜಸ್ ನಾಲ್ಕು ಜನ ಸಕಲೇಷ್ಪುರ ತೆರಳಿದ್ದು, ಅಲ್ಲಿಯೇ ನಿತ್ಯಾ ಹಾಗೂ ತೇಜಸ್ ಮದುವೆ ಮಾಡುವ ತಯಾರಿ ಮಾಡಿದ್ದಾರೆ. ಅದಕ್ಕಾಗಿಯೇ ನಿತ್ಯಾ ಆಲಿಯಾಸ್ ನಮ್ರತಾ ಗೌಡ ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಕೊನೆಗೂ ತಾನು ಇಷ್ಟಪಟ್ಟ ತೇಜಸ್ ಜೊತೆಗೆ ನಿತ್ಯಾ ಮದುವೆಯಾಗುವ ಬಗ್ಗೆ ಈ ಫೋಟೊ ಮೂಲಕ ನಮ್ರತಾ ಹಿಂಟ್ ಕೊಟ್ಟಿದ್ದಾರೆಯೇ ಅನ್ನೋದು ಸ್ಪಷ್ಟವಾಗುತ್ತಿಲ್ಲ.
ನಮ್ರತಾ ಲುಕ್ ಪ್ಯಾನ್ಸ್ ಫಿದಾ
ಒಟ್ಟಲ್ಲಿ ನಮ್ರತಾ ಗೌಡ ಈ ಬ್ರೈಡಲ್ ಲುಕ್ ನೋಡಿ ಫ್ಯಾನ್ಸ್ ಅನ್ನು ಫಿದಾ ಆಗ್ಬಿಟ್ಟಿದ್ದಾರೆ. ಪ್ರೆಟಿಯೆಸ್ಟ್ ಬ್ರೈಡ್, ನಮ್ಮ ದೃಷ್ಟಿಯೇ ತಾಗಬಹುದು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಬೇಗ ಕರ್ಣನ ಜೊತೆಯೇ ನಿತ್ಯಾ ಮದುವೆ ನಡೆಯಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು. ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

