Brahmagantu: ದಿಶಾನೇ ದೀಪಾ ಎಂದು ತಿಳಿಯದೇ ಮಗಳ ಕೊ*ಲೆಗೆ ಸುಪಾರಿ ಕೊಟ್ಟನಾ ಪೊಲೀಸಪ್ಪಾ?
'ಬ್ರಹ್ಮಗಂಟು' ಧಾರಾವಾಹಿಯು ರೋಚಕ ತಿರುವು ಪಡೆದಿದೆ. ಚಿರುಗೆ ಪ್ರೀತಿಯ ಪರೀಕ್ಷೆ ಒಡ್ಡಿದ ದೀಪಾಗೆ ಆಘಾತವಾಗಿದ್ದು, ಇನ್ನೊಂದೆಡೆ ಆಕೆಯ ತಂದೆಯೇ ದಿಶಾಳ ಕೊಲೆಗೆ ಸುಪಾರಿ ನೀಡಿರುವುದು ಕಥೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಸಂಚಿನಿಂದ ದೀಪಾ-ದಿಶಾ ಒಂದೇ ಎಂಬ ಸತ್ಯ ಹೊರಬೀಳುವುದೇ ಎಂಬ ಕುತೂಹಲ ಹೆಚ್ಚಾಗಿದೆ.

ರೋಚಕ ತಿರುವು
ಬ್ರಹ್ಮಗಂಟು ಸೀರಿಯಲ್ (Brahmagantu Serial) ಇದೀಗ ಊಹಿಸದ ತಿರುವು ಪಡೆದುಕೊಂಡಿದೆ. ಗುಣನೋ, ಸೌಂದರ್ಯನೋ ಎನ್ನುವ ವಿಷಯದಲ್ಲಿ ಇದೀಗ ಬೇರೆಯದ್ದೇ ರೂಪ ಪಡೆದುಕೊಂಡು ಬಿಟ್ಟಿದೆ.
ಸೌಂದರ್ಯ ಪ್ಲ್ಯಾನ್
ದಿಶಾ ಮತ್ತು ದೀಪಾ ಒಬ್ಬರೇ ಎನ್ನುವುದನ್ನು ಅರಿಯದ ಸೌಂದರ್ಯ ಚಿರುನ್ನು ದಿಶಾಗೆ ಕೊಟ್ಟು ಮದುವೆ ಮಾಡಲು ಪ್ಲ್ಯಾನ್ ಹಾಕಿದ್ದಾಳೆ. ಅದೇ ಇನ್ನೊಂದೆಡೆ ಚಿರುಗೆ ರೂಪ ಮತ್ತು ಗುಣ ಎರಡರಲ್ಲಿ ಯಾವುದು ಮುಖ್ಯ ಎನ್ನುವುದನ್ನು ಕಂಡುಹಿಡಿಯುವ ಪಣವನ್ನು ದೀಪಾ ತೊಟ್ಟಿದ್ದಾಳೆ.
ಚಿರುಗೆ ಪ್ರಪೋಸ್
ಅದೇ ರೀತಿ ದೀಪಾ, ದಿಶಾ ಆಗಿ ಬಂದು ಚಿರುನ್ನು ಪ್ರಪೋಸ್ ಮಾಡಿದ್ದಾಳೆ. ಆದರೆ ದಿಶಾಳ ರೂಪದಲ್ಲಿ ಚಿರುಗೆ ದೀಪಾನೇ ಕಾಣಿಸಿದ್ದಾಳೆ. ಆಕೆ ದೀಪಾ ಎಂದೇಅಂದುಕೊಂಡು ಲವ್ ಪ್ರಪೋಸಲ್ಗೆ ಒಪ್ಪಿಕೊಂಡು ಬಿಟ್ಟಿದ್ದಾನೆ. ಆದರೆ ಇದು ದೀಪಾಗೆ ಹೇಗೆ ಗೊತ್ತಾಗಬೇಕು? ದೀಪಾಗೆ ಸೋಲಾಗಿದೆ. ಅವಳಿಗೆ ಆಘಾತವಾಗಿ ಅಲ್ಲಿಂದ ಬಂದಿದ್ದಾಳೆ.
ಕೊ*ಲೆಗೆ ಸುಪಾರಿ?
ಅದೇ ಇನ್ನೊಂದೆಡೆ, ದೀಪಾ ಅಪ್ಪ ಪೊಲೀಸಪ್ಪ ನಿಷ್ಠಾವಂತ ಎನ್ನುವ ಬಿರುದು ಪಡೆದುಕೊಂಡಿದ್ದರೂ ದಿಶಾಳಿಂದ ತನ್ನ ಮಗಳ ಭವಿಷ್ಯ ಹಾಳಾಗುತ್ತದೆ ಎಂದು ಅಂದುಕೊಂಡಿದ್ದಾನೆ. ಆದ್ದರಿಂದ ಇದೀಗ ಒಬ್ಬರನ್ನು ಸಾಯಿಸಲು ರೌಡಿಗೆ ಸುಪಾರಿ ಕೊಟ್ಟಿದ್ದಾನೆ.
ಯಾರಿರಬಹುದು?
ಆದರೆ, ಅವರು ಯಾರು ಎನ್ನುವುದನ್ನು ತೋರಿಸಿಲ್ಲ. ಅದು ಯಾರಿರಬಹುದು ಎಂದು ಊಹಿಸಿದರೆ, ಅದು ದಿಶಾ ಇರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಅವರನ್ನು ಅಪಘಾತ ಮಾಡಿಸಿ ಸಾಯಿಸಬೇಕು ಎನ್ನುವಷ್ಟರಮಟ್ಟಿಗೆ ಪೊಲೀಸಪ್ಪ ಹೋಗಿದ್ದಾನೆ.
ಸತ್ಯ ಹೊರಬರತ್ತಾ?
ಆದರೆ ಇದು ಎಷ್ಟು ಸರಿ ಎನ್ನುವ ಚರ್ಚೆಯ ನಡುವೆಯೇ, ದಿಶಾಳಿಗೆ ಅಪಘಾತವಾದರೆ ಆಕೆಯೇ ದೀಪಾ ಎನ್ನುವ ಸತ್ಯ ಅಂತೂ ಗೊತ್ತಾಗುತ್ತದೆ. ಆದಷ್ಟು ಬೇಗ ಈ ಸತ್ಯ ಹೊರಕ್ಕೆ ಬರಲಿ ಎಂದು ವೀಕ್ಷಕರು ಕಾಯುತ್ತಿದ್ದರೂ ಈ ರೀತಿಯಾಗಿ ಬರುವುದು ಯಾರಿಗೂ ಇಷ್ಟವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

