MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Entertainment
  • TV Talk
  • ಫ್ರೈಡ್ ರೈಸ್ ಅಂಗಡಿಯಿಂದ ಫೌಂಡೇಶನ್‌ವರೆಗೆ: ಸಮಾಜ ಸೇವೆ ಮಾಡಲು ಮುಂದಾದ ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್

ಫ್ರೈಡ್ ರೈಸ್ ಅಂಗಡಿಯಿಂದ ಫೌಂಡೇಶನ್‌ವರೆಗೆ: ಸಮಾಜ ಸೇವೆ ಮಾಡಲು ಮುಂದಾದ ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್

Sam Fam Foundation: ಯೂಟ್ಯೂಬರ್ ಸ್ಯಾಮ್‌ ಸಮೀರ್ ಸಮಾಜ ಸೇವೆಯ ಕನಸು ಈಗ ಅಧಿಕೃತವಾಗಿ ನನಸಾಗಿದೆ. ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಸೇರಿ 'ಸ್ಯಾಮ್ ಫ್ಯಾಮ್ ಫೌಂಡೇಶನ್' ಅನ್ನು ನೋಂದಣಿ ಮಾಡಿಸಿರುವ ಅವರು, ಇನ್ಮೇಲೆ ಪ್ರತಿದಿನವೂ ಹಸಿದವರಿಗೆ ಮತ್ತು ಅಶಕ್ತರಿಗೆ ನೆರವಾಗುವ ದೊಡ್ಡ ಸಂಕಲ್ಪ ಮಾಡಿದ್ದಾರೆ.

2 Min read
Author : Ashwini HR
Published : Sep 01 2026, 03:33 PM IST
Share this Photo Gallery
  • FB
  • TW
  • Linkdin
  • Whatsapp
16
ಅಧಿಕೃತವಾಗಿ ನೋಂದಣಿಯಾಯ್ತು 'ಸ್ಯಾಮ್ ಫ್ಯಾಮ್ ಫೌಂಡೇಶನ್'
Image Credit : Instagram

ಅಧಿಕೃತವಾಗಿ ನೋಂದಣಿಯಾಯ್ತು 'ಸ್ಯಾಮ್ ಫ್ಯಾಮ್ ಫೌಂಡೇಶನ್'

ತಮ್ಮ ವಿಭಿನ್ನ ಲೈಫ್‌ಸ್ಟೈಲ್ ವ್ಲಾಗ್‌ಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಯೂಟ್ಯೂಬರ್ ಸ್ಯಾಮ್‌ ಸಮೀರ್ (ಸ್ಯಾಮ್ ಫ್ಯಾಮ್), ಈಗ ಸಮಾಜ ಸೇವೆಯತ್ತ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಅನಧಿಕೃತವಾಗಿ ಅನೇಕರಿಗೆ ಸಹಾಯ ಮಾಡುತ್ತಿದ್ದ ಸ್ಯಾಮ್‌ ಸಮೀರ್, ಈಗ ಅದನ್ನು ಕಾನೂನುಬದ್ಧವಾಗಿ ಮುಂದುವರಿಸಲು 'ಸ್ಯಾಮ್ ಫ್ಯಾಮ್ ಫೌಂಡೇಶನ್' (Sam Fam Foundation) ಅನ್ನು ಅಧಿಕೃತವಾಗಿ ನೋಂದಣಿ ಮಾಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕುಟುಂಬದ ಸಮ್ಮುಖದಲ್ಲಿ ನೋಂದಣಿ
Image Credit : Instagram

ಕುಟುಂಬದ ಸಮ್ಮುಖದಲ್ಲಿ ನೋಂದಣಿ

ಕುಟುಂಬದ ಸಮ್ಮುಖದಲ್ಲಿ ನೋಂದಣಿ
ಬೆಂಗಳೂರಿನ ಉಪನೋಂದಣಾಧಿಕಾರಿ ಕಚೇರಿಗೆ ಸಮೀರ್ ಜೊತೆಗೆ ಅವರ ತಂದೆ, ತಾಯಿ, ಅಕ್ಕ ಹಾಗೂ ಅವರ ವ್ಲಾಗ್‌ನ ಅವಿಭಾಜ್ಯ ಅಂಗವಾಗಿರುವ ಶಶಾಂಕ್, ನೀರಜ್ ಸೇರಿದಂತೆ ಇಡೀ ತಂಡ ಭೇಟಿ ನೀಡಿತ್ತು. ತಾಯಿ ಹಾಗೂ ಅಕ್ಕ ಸಾಕ್ಷಿ ಸಹಿ ಹಾಕುವ ಮೂಲಕ ಫೌಂಡೇಶನ್‌ಗೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮೀರ್ ತಂದೆಯವರ ಜೊತೆಗಿನ ತಮಾಷೆಯ ಕ್ಷಣಗಳು ಮತ್ತು ಅಭಿಮಾನಿಗಳ ಜೊತೆಗಿನ ಸಂವಾದ ಗಮನ ಸೆಳೆಯಿತು.

Related Articles

Related image1
"ಪಿಎ ಕ್ಯಾರೆಕ್ಟರ್ ಸಿಗುತ್ತೆ": ಸೀರಿಯಲ್‌ನಿಂದ ದೂರ ಉಳಿದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಗೌಡ ಕೊಟ್ಟ ಉತ್ತರವಿದು
Related image2
"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
36
ಪ್ರದರ್ಶನಕ್ಕಲ್ಲ, ಪ್ರೇರಣೆಗಾಗಿ ಈ ಫೌಂಡೇಶನ್
Image Credit : Instagram

ಪ್ರದರ್ಶನಕ್ಕಲ್ಲ, ಪ್ರೇರಣೆಗಾಗಿ ಈ ಫೌಂಡೇಶನ್

ಪ್ರದರ್ಶನಕ್ಕಲ್ಲ, ಪ್ರೇರಣೆಗಾಗಿ ಈ ಫೌಂಡೇಶನ್
ಫೌಂಡೇಶನ್ ಉದ್ದೇಶದ ಬಗ್ಗೆ ಮಾತನಾಡಿದ ಸಮೀರ್, "ನಾನು ಸಹಾಯ ಮಾಡುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುವುದು ಶೋ ಆಫ್ ಮಾಡಲು ಅಲ್ಲ, ಬದಲಿಗೆ ಇತರರಿಗೂ ಸಹಾಯ ಮಾಡಲು ಪ್ರೇರಣೆ ನೀಡಲು. ನಾವೊಬ್ಬರು ಸಹಾಯ ಮಾಡುವುದನ್ನು ನೋಡಿ ಇನ್ನೊಬ್ಬರು ಇನ್ಸ್‌ಪೈರ್ ಆದರೆ ಅದು ನಮ್ಮ ಯಶಸ್ಸು. ಲೀಗಲ್ ಆಗಿ ಫೌಂಡೇಶನ್ ಮಾಡುವುದರಿಂದ ನಮ್ಮ ತಂಡಕ್ಕೆ ಪ್ರತಿದಿನ ಹೆಚ್ಚು ಜನರಿಗೆ ತಲುಪಲು ಸುಲಭವಾಗುತ್ತದೆ," ಎಂದು ತಿಳಿಸಿದರು.

46
ಬಡತನದ ದಿನಗಳ ನೆನಪು
Image Credit : Instagram

ಬಡತನದ ದಿನಗಳ ನೆನಪು

ಬಡತನದ ದಿನಗಳ ನೆನಪು
"ನಾವೂ ಕೂಡ ಒಂದು ಕಾಲದಲ್ಲಿ ಕಷ್ಟಪಟ್ಟೇ ಮೇಲೆ ಬಂದವರು. ನಮಗೆ ಯಾರಾದರೂ ಸಹಾಯ ಮಾಡಿದರೆ ಎಷ್ಟು ಖುಷಿಯಾಗುತ್ತಿತ್ತು ಎಂಬುದು ನಮಗೆ ಗೊತ್ತು. ಅದೇ ಉದ್ದೇಶದಿಂದ ಈಗ ನಮಗೆ ದೇವರು ಶಕ್ತಿ ಕೊಟ್ಟಾಗ ಅದನ್ನು ಸಮಾಜಕ್ಕೆ ಮರಳಿಸಬೇಕು ಎಂಬುದು ನನ್ನ ಕನಸಾಗಿತ್ತು. ನಮ್ಮ ಇನ್ಕಮ್‌ನಲ್ಲಿ ಒಂದು ಭಾಗವನ್ನು ಈ ಫೌಂಡೇಶನ್ ಮೂಲಕ ಪ್ರತಿದಿನವೂ ಅಗತ್ಯವಿರುವವರಿಗೆ ತಲುಪಿಸುತ್ತೇವೆ," ಎಂದು ಸಮೀರ್ ಭಾವುಕರಾಗಿ ನುಡಿದರು.

56
ಹಸಿದವರಿಗೆ ಫ್ರೈಡ್ ರೈಸ್ ಪ್ಯಾಕೆಟ್‌
Image Credit : Instagram

ಹಸಿದವರಿಗೆ ಫ್ರೈಡ್ ರೈಸ್ ಪ್ಯಾಕೆಟ್‌

ಹಸಿದವರಿಗೆ ಫ್ರೈಡ್ ರೈಸ್ ಪ್ಯಾಕೆಟ್‌
ಸಮೀರ್ ಅವರ ಕುಟುಂಬ ಹಿಂದೆ ಫ್ರೈಡ್ ರೈಸ್ ಅಂಗಡಿ ನಡೆಸುತ್ತಿತ್ತು. ಆ ಸಮಯದಲ್ಲಿ ಅವರಿಗೆ ಅಷ್ಟೊಂದು ಆರ್ಥಿಕ ಶಕ್ತಿ ಇಲ್ಲದಿದ್ದರೂ ಸಹ, ಪ್ರತಿ ತಿಂಗಳು ನಿಯಮಿತವಾಗಿ 100 ಪ್ಲೇಟ್ ಫ್ರೈಡ್ ರೈಸ್ ಅನ್ನು ಬಡವರಿಗೆ ಅಥವಾ ಹಸಿದವರಿಗೆ ಉಚಿತವಾಗಿ ಹಂಚುತ್ತಿದ್ದರು. ತಾವು ಕಷ್ಟದಲ್ಲಿದ್ದಾಗಲೂ ಮಾಡಿದ ಆ ಪುಣ್ಯವೇ ಇಂದು ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

66
ಕ್ರಿಕೆಟ್ ಮತ್ತು ಗೆಳೆಯರ ಜೊತೆಗಿನ ಮೋಜು
Image Credit : Instagram

ಕ್ರಿಕೆಟ್ ಮತ್ತು ಗೆಳೆಯರ ಜೊತೆಗಿನ ಮೋಜು

ಕ್ರಿಕೆಟ್ ಮತ್ತು ಗೆಳೆಯರ ಜೊತೆಗಿನ ಮೋಜು
ನೋಂದಣಿ ಪ್ರಕ್ರಿಯೆಯ ನಂತರ ಸಮೀರ್ ತಮ್ಮ ತಂಡದ ಗೆಳೆಯರೊಂದಿಗೆ ಕ್ರಿಕೆಟ್ ಟರ್ಫ್‌ನಲ್ಲಿ ಪಂದ್ಯವಾಡಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ, ಮುಂದಿನ ವ್ಲಾಗ್‌ಗಾಗಿ 'ಜೋಲೋ ಚಿಪ್' (Jolo Chip) ಚಾಲೆಂಜ್ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡರು. ಗೆಳೆಯರೊಂದಿಗೆ 'ಬೆಲ್ಟ್ ಗೇಮ್' ಆಡುತ್ತಾ ಪರಸ್ಪರ ಕಾಲೆಳೆಯುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು.

ಒಟ್ಟಿನಲ್ಲಿ, ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದ ಹಿತದೃಷ್ಟಿಯಿಂದ ಫೌಂಡೇಶನ್ ಆರಂಭಿಸಿರುವ ಸಮೀರ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
Lakshmi Nivasa Serial ನಟಿ ರೂಪಿಕಾ ಮದುವೆ, ರಿಸೆಪ್ಷನ್​ ಕ್ಯೂಟ್​ ಫೋಟೋಸ್​ ವೈರಲ್​
Recommended image2
ನಟನೆಯಿಂದ ದೂರ… ಆಧ್ಯಾತ್ಮಿಕತೆಯತ್ತ… ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ಶ್ವೇತಾ ಪ್ರಸಾದ್
Recommended image3
Amruthadhaare: ಶಕುಂತಲಾಗೂ ತಿಳಿದೋಯ್ತು ರಹಸ್ಯ! ದೇವರ ಹೂವಿನ ಅಪಶಕುನ ನಿಜ ಆಗೋಯ್ತು
Related Stories
Recommended image1
"ಪಿಎ ಕ್ಯಾರೆಕ್ಟರ್ ಸಿಗುತ್ತೆ": ಸೀರಿಯಲ್‌ನಿಂದ ದೂರ ಉಳಿದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಗೌಡ ಕೊಟ್ಟ ಉತ್ತರವಿದು
Recommended image2
"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved