MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Entertainment
  • TV Talk
  • "ಪಿಎ ಕ್ಯಾರೆಕ್ಟರ್ ಸಿಗುತ್ತೆ": ಸೀರಿಯಲ್‌ನಿಂದ ದೂರ ಉಳಿದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಗೌಡ ಕೊಟ್ಟ ಉತ್ತರವಿದು

"ಪಿಎ ಕ್ಯಾರೆಕ್ಟರ್ ಸಿಗುತ್ತೆ": ಸೀರಿಯಲ್‌ನಿಂದ ದೂರ ಉಳಿದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಗೌಡ ಕೊಟ್ಟ ಉತ್ತರವಿದು

Comedy Khiladigalu Vani Gowda: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ದೊಡ್ಡ ಮಟ್ಟದ ನೇಮ್ ಮತ್ತು ಫೇಮ್ ಗಳಿಸಿದ ವಾಣಿ ಗೌಡ ಇತ್ತೀಚೆಗೆ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರೇ ಹಂಚಿಕೊಂಡ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

1 Min read
Author : Ashwini HR
Published : Sep 01 2026, 11:19 AM IST
Share this Photo Gallery
  • FB
  • TW
  • Linkdin
  • Whatsapp
15
ಧಾರಾವಾಹಿಗಳಲ್ಲಿ ಯಾಕೆ ಕಾಣಿಸುತ್ತಿಲ್ಲ?
Image Credit : Instagram

ಧಾರಾವಾಹಿಗಳಲ್ಲಿ ಯಾಕೆ ಕಾಣಿಸುತ್ತಿಲ್ಲ?

ಧಾರಾವಾಹಿಗಳಲ್ಲಿ ಯಾಕೆ ಕಾಣಿಸುತ್ತಿಲ್ಲ?
ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ಮನೆಮಾತಾಗಿದ್ದ ಪ್ರತಿಭಾನ್ವಿತ ಕಲಾವಿದೆ ವಾಣಿ ಗೌಡ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲಕ್ಕೆ ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಮಯದ ಹೊಂದಾಣಿಕೆ ಕಷ್ಟದ ಕೆಲಸ
Image Credit : Instagram

ಸಮಯದ ಹೊಂದಾಣಿಕೆ ಕಷ್ಟದ ಕೆಲಸ

ಸಮಯದ ಹೊಂದಾಣಿಕೆ ಕಷ್ಟದ ಕೆಲಸ
ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, "ಸೀರಿಯಲ್‌ನಲ್ಲಿ ಯಾಕೆ ನಟಿಸುತ್ತಿಲ್ಲ ಎನ್ನುವುದಕ್ಕೆ ದೊಡ್ಡ ಕಾರಣವೇನೂ ಇಲ್ಲ. ನಿಜ ಹೇಳಬೇಕೆಂದರೆ ನಾನು ಸ್ವಲ್ಪ ಸೋಮಾರಿ. ಸೀರಿಯಲ್ ಚಿತ್ರೀಕರಣ ಎಂದರೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಕೆಲಸ ಇರುತ್ತದೆ. ಅಷ್ಟು ಸುದೀರ್ಘ ಸಮಯವನ್ನು ಪ್ರತಿದಿನ ನೀಡುವುದು ನನಗೆ ಸ್ವಲ್ಪ ಕಷ್ಟದ ಕೆಲಸ ಎನಿಸುತ್ತದೆ" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

Related Articles

Related image1
Surekha Vani: ನನಗೆ ಇಷ್ಟ ಬಂದ ಫೋಟೋ ಹಾಕ್ತೀನಿ, ಎರಡನೇ ಮದುವೆ ಬಗ್ಗೆ ನಟಿ ಸುರೇಖಾ ವಾಣಿ ಖಡಕ್ ಮಾತು!
Related image2
"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
35
ಪಿಎ ಕ್ಯಾರೆಕ್ಟರ್ ಸಿಗುತ್ತೆ
Image Credit : Instagram

ಪಿಎ ಕ್ಯಾರೆಕ್ಟರ್ ಸಿಗುತ್ತೆ

ಪಿಎ ಕ್ಯಾರೆಕ್ಟರ್ ಸಿಗುತ್ತೆ
ಕೇವಲ ಸಮಯದ ಸಮಸ್ಯೆ ಮಾತ್ರವಲ್ಲದೆ, ಸಿಗುತ್ತಿರುವ ಪಾತ್ರಗಳ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಕಾಮಿಡಿಯನ್ ಎಂದು ಗುರುತಿಸಿರುವುದರಿಂದ ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಗೆ ಪಿಎ (Personal Assistant) ಆಗಿಯೋ ಅಥವಾ ಸಣ್ಣಪುಟ್ಟ ಕಾಮಿಡಿ ಪಾತ್ರಗಳಿಗೆ ಆಫರ್ ಬರುತ್ತಾ ಇರುತ್ತೆ. ಅಂತಹ ಪಾತ್ರಗಳಲ್ಲಿ ನಟನೆ ಪ್ರದರ್ಶಿಸಲು ಹೆಚ್ಚಿನ ಅವಕಾಶ ಇರುವುದಿಲ್ಲ. ಅಲ್ಲದೆ ಆ ಪಾತ್ರಗಳು ಕಥೆಯ ಉದ್ದಕ್ಕೂ ಇರುವುದಿಲ್ಲ ಅಥವಾ ವರ್ಷಪೂರ್ತಿ ಟ್ರಾವೆಲ್ ಆಗುವುದಿಲ್ಲ" ಎಂಬುದು ಅವರ ಅಭಿಪ್ರಾಯ.

45
ನಟನೆಗೆ ಒತ್ತು ನೀಡುವ ಪಾತ್ರ
Image Credit : Instagram

ನಟನೆಗೆ ಒತ್ತು ನೀಡುವ ಪಾತ್ರ

ನಟನೆಗೆ ಒತ್ತು ನೀಡುವ ಪಾತ್ರ
ಸದ್ಯಕ್ಕೆ ತಮಗೆ ಸರಿಹೊಂದುವ ಪಾತ್ರಕ್ಕಾಗಿ ಕಾಯುತ್ತಿರುವ ಅವರು, "ನಾನು ಈಗ ಯಾವುದಾದರೂ ಉತ್ತಮ ಲೀಡ್ ರೋಲ್ ಅಥವಾ ಕಥೆಗೆ ಪೂರಕವಾದ, ಅರ್ಥಪೂರ್ಣವಾದ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಸುಮ್ಮನೆ ಬಂದು ಹೋಗುವ ಪಾತ್ರಗಳಿಗಿಂತ ನಟನೆಗೆ ಒತ್ತು ನೀಡುವ ಪಾತ್ರ ಸಿಕ್ಕರೆ ಖಂಡಿತ ಮರಳುತ್ತೇನೆ" ಎಂದು ಹೇಳಿದ್ದಾರೆ.

55
ಅಭಿಮಾನಿಗಳ ಆಶಯ
Image Credit : Instagram

ಅಭಿಮಾನಿಗಳ ಆಶಯ

ಅಭಿಮಾನಿಗಳ ಆಶಯ
ಒಟ್ಟಿನಲ್ಲಿ, ಕೇವಲ ಸಂಖ್ಯೆಗಿಂತ ಗುಣಮಟ್ಟದ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ವಾಣಿ ಗೌಡ, ಶೀಘ್ರದಲ್ಲೇ ಒಂದು ಮನ್ನಣೆ ಸಿಗುವಂತಹ ಪಾತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಕ್ಯಾನ್ಸರ್ ರಿಸರ್ಚ್‌ನಿಂದ ಕಿರುತೆರೆಗೆ ಎಂಟ್ರಿ: ಇಲ್ಲಿದೆ ‘ವಸುದೇವ ಕುಟುಂಬ’ದ ಭಾವನಾ ಪಾಟೀಲ್‌ರ ಕಥೆ!
Recommended image2
Bigg Bossಗೆ ಅವಕಾಶ ಸಿಗದಿದ್ರೂ ಸಿಕ್ಕಿತು 5 ಲಕ್ಷ ಬಹುಮಾನದ ಜೊತೆ ಭರ್ಜರಿ ಜಾಬ್ ಆಫರ್​- ಕುಮಾರಿಗೆ ಒಲಿದ ಅದೃಷ್ಟ​
Recommended image3
ಮಾಲ್ಡೀವ್ಸ್‌ ಬೀಚ್‌ಅಲ್ಲಿ ಶಿಲಾಬಾಲಿಕೆಯಾದ ಜ್ಯೋತಿ ರೈ, ಅಂದಕ್ಕೆ ಮಾರುಹೋದ ಫ್ಯಾನ್ಸ್‌!
Related Stories
Recommended image1
Surekha Vani: ನನಗೆ ಇಷ್ಟ ಬಂದ ಫೋಟೋ ಹಾಕ್ತೀನಿ, ಎರಡನೇ ಮದುವೆ ಬಗ್ಗೆ ನಟಿ ಸುರೇಖಾ ವಾಣಿ ಖಡಕ್ ಮಾತು!
Recommended image2
"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved