ಗಣೇಶ ಚತುರ್ಥಿ ದಿನವೇ ಗುಡ್‌ನ್ಯೂಸ್ ಘೋಷಿಸಿದ ರಂಗನಾಯಕಿ ಸೀರಿಯಲ್ ನಟಿ ಪ್ರೇರಣಾ
ಕನ್ನಡದ ಜನಪ್ರಿಯ ನಟಿ ಪ್ರೇರಣಾ ಕಂಬಮ್ ಮತ್ತು ಪತಿ ಶ್ರೀಪಾದ್ ದೇಶಪಾಂಡೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಣೇಶ ಚತುರ್ಥಿಯ ಶುಭ ದಿನದಂದು ಪ್ರೇರಣಾ ತಮ್ಮ 'ಬೇಬಿ ಬಂಪ್' ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಮೊದಲ ಮಗುವಿನ ಆಗಮನದ ಸಂಭ್ರಮ
ಕನ್ನಡದ ಜನಪ್ರಿಯ ಕಿರುತೆರೆ ನಟಿ ಪ್ರೇರಣಾ ಕಂಬಮ್ ಹಾಗೂ ಶ್ರೀಪಾದ್ ದೇಶಪಾಂಡೆ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸದ್ಯ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ.
ಗಣೇಶ ಹಬ್ಬದಂದು ಬೇಬಿ ಬಂಪ್ ವಿಡಿಯೊ ಹಂಚಿಕೆ
ನಟಿ ಪ್ರೇರಣಾ ಕಂಬಮ್ ಅವರು ಗಣೇಶ ಚತುರ್ಥಿಯ ಶುಭ ದಿನದಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಬೇಬಿ ಬಂಪ್' ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು, ನೆಟ್ಟಿಗರು ಹಾಗೂ ಕಿರುತೆರೆ ಕಲಾವಿದರು ದಂಪತಿಗೆ ಶುಭಹಾರೈಸುತ್ತಿದ್ದಾರೆ.
ಶ್ರೀಪಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ:
2023ರ ನವೆಂಬರ್ 24ರಂದು ಶ್ರೀಪಾದ್ ದೇಶಪಾಂಡೆ ಅವರೊಂದಿಗೆ ಪ್ರೇರಣಾ ಕಂಬಮ್ ವಿವಾಹವಾಗಿದ್ದರು. ಮದುವೆಯ ನಂತರ ಆಕೆ ತೆಲುಗು ಬಿಗ್‌ಬಾಸ್ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ವೀಕ್ಷಕರ ಮನ ಗೆದ್ದಿದ್ದರು.
ಕಿರುತೆರೆ ಧಾರಾವಾಹಿಗಳಲ್ಲಿ ಸೈ ಎನಿಸಿಕೊಂಡಿದ್ದ ಅಭಿನಯ
ಪ್ರೇರಣಾ ಕಂಬಮ್ ಅವರು ಕನ್ನಡದ ಸೂಪರ್ ಹಿಟ್ 'ರಂಗನಾಯಕಿ' ಧಾರಾವಾಹಿ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದರು. ಇದರೊಂದಿಗೆ ತೆಲುಗಿನ 'ಕೃಷ್ಣ ಮುಕುಂದ ಮುರಾರಿ' ಹಾಗೂ 'ಹರಹರ ಮಹದೇವ' ಧಾರಾವಾಹಿಗಳಲ್ಲೂ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
ರಿಯಾಲಿಟಿ ಶೋಗಳಲ್ಲೂ ಸಕ್ರಿಯ
ಧಾರಾವಾಹಿಗಳಲ್ಲಷ್ಟೇ ಅಲ್ಲದೆ, ಪ್ರೇರಣಾ ಅವರು ಕಲರ್ಸ್ ಕನ್ನಡದ 'ಕ್ವಾಟ್ಲಿ ಕಿಚನ್ ಸೀಸನ್ 1' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ, 2021ರ ಆಗಸ್ಟ್‌ನಲ್ಲಿ ಪ್ರಸಾರವಾದ 'ಬಿಗ್‌ಬಾಸ್ ಮಿನಿ ಸೀಸನ್'ನಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

