- Home
- Entertainment
- TV Talk
- Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್ ರಾಜ್ ಹೇಳಿದ್ದೇನು
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್ ರಾಜ್ ಹೇಳಿದ್ದೇನು
'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳಿಂದ ಬರುವ ಮದುವೆ ಪ್ರಸ್ತಾಪಗಳ ಬಗ್ಗೆ ಹೇಳಿಕೊಂಡಿರುವ ಅವರು, ಸದ್ಯ ಲವ್ ಮ್ಯಾರೇಜ್ ಮಾತ್ರ ಆಯ್ಕೆ ಎಂದಿದ್ದಾರೆ. ಜೊತೆಗೆ, ಅವರ ನಿಜ ಜೀವನದ ಸಮಾಜ ಸೇವೆಯ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್
Karna Serial ಕರ್ಣ ಉರ್ಫ್ ನಟ ಕಿರಣ್ ರಾಜ್ ನಿಜ ಜೀವನದಲ್ಲಿ ಇನ್ನೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸದ್ಯ ಸೀರಿಯಲ್‌ನಲ್ಲಿ ನಿಧಿಯನ್ನು ಲವ್ ಮಾಡಿ ನಿತ್ಯಾಳ ಮನಸ್ಸನ್ನು ಕದ್ದಿರೋ ಕರ್ಣನಿಗೆ ಸಂಕಷ್ಟ ಎದುರಾಗಿದೆ. ಆದರೂ ನಿಧಿಗೆ ತನ್ನ ಮತ್ತು ನಿತ್ಯಾಳ ಲವ್ ವಿಷ್ಯ ಗೊತ್ತಾಗುವಂತೆ ಮಾಡಿ ನಿಧಿಯ ಜೊತೆ ಮದುವೆಯಾಗಲು ರೆಡಿಯಾಗಿದ್ದಾನೆ.

ಮದುವೆ ಯಾವಾಗ
ಆದರೆ, ರಿಯಲ್ ಲೈಫ್‌ನಲ್ಲಿ ಮಾತ್ರ ಕರ್ಣ ಅಂದ್ರೆ ಕಿರಣ್ ರಾಜ್ ಅವರ ಬ್ಯಾಚುಲರ್ ಆಗಿದ್ದು, ಮದುವೆ ಯಾವಾಗ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. kannada_pichharಗೆ ನೀಡಿರುವ ಸಂದರ್ಶನದಲ್ಲಿ ಇದೀಗ ಅವರು ಮದುವೆಯ ಬಗ್ಗೆ ಕೆಲವೊಂದು ಕುತೂಹಲದ ಅಂಶಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ನನ್ನ ಮಗಳನ್ನು ಮದುವೆಯಾಗು
ಶೂಟಿಂಗ್ ಸೆಟ್‌ನಲ್ಲಿ ಬರುವ ಕೆಲವರು ನನ್ನ ಮಗಳನ್ನು ಮದುವೆಯಾಗು ಎನ್ನುತ್ತಾರೆ. ನನ್ನ ಹಿಂದೆ ಮುಂದೆ ಗೊತ್ತಿರಲ್ಲ. ನಟನಾಗಿರುವ ಕಾರಣ ಹೀಗೆ ಹೇಳುತ್ತಾರೆ. ತಮ್ಮ ಮಗಳನ್ನು ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟಿದ್ದಾರೆ ಎನ್ನುವ ಖುಷಿಯಾಗುತ್ತದೆ ಎಂದಿದ್ದಾರೆ ಕಿರಣ್ ರಾಜ್.
ಲವ್ ಮ್ಯಾರೇಜೋ, ಅರೇಂಜೋ
ಲವ್ ಮ್ಯಾರೇಜೋ, ಅರೇಂಜೋ ಎಂದು ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿರಣ್ ರಾಜ್. ಒಂದು ವಯಸ್ಸಿನವರೆಗೆ ಮನೆಯವರು ಹುಡುಗಿ ನೋಡ್ತೇನೆ ಅಂದ್ರು ನಾನು ಬೇಡ ಎಂದೆ. ಈಗ ಅಪ್ಪ-ಅಮ್ಮ ಕೈಎತ್ತುಬಿಟ್ಟಿದ್ದಾರೆ. ಆದ್ದರಿಂದ ಸದ್ಯ ಇರೋ ಆಪ್ಷನ್ ಲವ್ ಮ್ಯಾರೇಜ್ ಮಾತ್ರ ಎಂದಿದ್ದಾರೆ.
ನಿಜ ಜೀವನದಲ್ಲಿಯೂ ಕರ್ಣನೇ
ಅಷ್ಟಕ್ಕೂ ಕಿರಣ್ ರಾಜ್ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಮೈಸೂರಿನರಾದ ಕಿರಣ್
ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

