MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪಬ್ಲಿಕ್‌ನಲ್ಲೇ ಪ್ರಶ್ನೆ ಕೇಳಿದ ಸೀರಿಯಲ್ ನಟಿ, ವೀಕ್ಷಕರ ಮನಸ್ಸಿನ ಮಾತು ಹೇಳಿದ Ravi Shankar Guruji

ಪಬ್ಲಿಕ್‌ನಲ್ಲೇ ಪ್ರಶ್ನೆ ಕೇಳಿದ ಸೀರಿಯಲ್ ನಟಿ, ವೀಕ್ಷಕರ ಮನಸ್ಸಿನ ಮಾತು ಹೇಳಿದ Ravi Shankar Guruji

Sri Ravi Shankar Guruji on Akanksha Chamola: ಖುಷಿಯಾಗಿರೋದು ಜನರಿಗೆ ಇಷ್ಟ ಆಗಲ್ವಾ? ಯಾಕೆ ನನ್ನನ್ನ ಹೀಗೆ ಜಡ್ಜ್ ಮಾಡ್ತಾರೆ? ಸದಾ ನಗ್ತಾ ಇರೋದು ತಪ್ಪಾ? ಅಂತ ಕಿರುತೆರೆ ನಟಿ ಆಕಾಂಕ್ಷಾ ಚಮೋಲಾ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

1 Min read
Author : Padmashree Bhat
Published : May 31 2026, 02:44 PM IST
Share this Photo Gallery
  • FB
  • TW
  • Linkdin
  • Whatsapp
14
ಆಕಾಂಕ್ಷಾಗೆ ಇರುವ ಸಮಸ್ಯೆ ಏನು?
Image Credit : instagram

ಆಕಾಂಕ್ಷಾಗೆ ಇರುವ ಸಮಸ್ಯೆ ಏನು?

ಕಿರುತೆರೆಯ ಅದರಲ್ಲಿಯೂ ಅನುಪಮಾ ಧಾರಾವಾಹಿಯ 'ಅನುಜ್' ಅಲಿಯಾಸ್ ಗೌರವ್ ಖನ್ನಾ ಅವರ ಪತ್ನಿ ಆಕಾಂಕ್ಷಾ ಚಮೋಲಾ ಅವರು ಆಗಾಗ ಒಂದಲ್ಲ ಒಂದು ಕಾರಣಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ, ತಮ್ಮಿಷ್ಟದಂತೆ ಬಿಂದಾಸ್ ಆಗಿ ಬದುಕುವ ನಟಿಯರಲ್ಲಿ ಆಕಾಂಕ್ಷಾ ಕೂಡ ಒಬ್ಬರು. 

ಇದೀಗ ನಟಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ ಬಳಿ ತಮ್ಮ ಸಮಸ್ಯೆಯೊಂದನ್ನು ಹೇಳಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ಸಮಸ್ಯೆ ಬೇರೇನೂ ಅಲ್ಲ, ಅವರ ಖುಷಿ ಖುಷಿಯಾದ ಸ್ವಭಾವವೇ ಅವರಿಗೆ ಮುಳುವಾಗಿದೆಯಂತೆ. ಹಾಗಾದ್ರೆ ಆಕಾಂಕ್ಷಾ ಗುರೂಜಿ ಬಳಿ ಹೇಳಿಕೊಂಡಿದ್ದೇನು? ಇಲ್ಲಿದೆ ವಿವರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ದುಃಖದಲ್ಲಿರೋದು ಟ್ರೆಂಡ್‌ ಆಗಿದ್ಯಾ?
Image Credit : instagram

ದುಃಖದಲ್ಲಿರೋದು ಟ್ರೆಂಡ್‌ ಆಗಿದ್ಯಾ?

ಆಕಾಂಕ್ಷಾ ಅವರು, "ಜನ ನನ್ನನ್ನು ತುಂಬಾ ಜಡ್ಜ್ ಮಾಡುತ್ತಾರೆ. ಈಗಂತೂ ನನ್ನ ಖುಷಿಯ ಸ್ವಭಾವವೇ ಜನರಿಗೆ ಇಷ್ಟ ಆಗ್ತಿಲ್ಲ ಅಂತ ಅನಿಸುತ್ತಿದೆ. ಗುರೂಜಿ, ನೀವಂತೂ ಯಾವಾಗ್ಲೂ ಮಜವಾಗಿರಿ, ಖುಷಿಯಾಗಿರಿ ಅಂತ ಹೇಳ್ತೀರಾ. ನಾನೂ ಹಾಗೇ ಇರಲು ಪ್ರಯತ್ನಿಸುತ್ತೇನೆ. ಆದರೆ ಜನರಿಗೆ ಅದು ಇಷ್ಟವಾಗುತ್ತಿಲ್ಲ. 'ಇವಳ್ಯಾಕೆ ಇಷ್ಟು ಖುಷಿಯಾಗಿದ್ದಾಳೆ, ಯಾವಾಗ್ಲೂ ಕುಣಿತಾ, ನಗುತ್ತಾ ಇರ್ತಾಳೆ?' ಅಂತ ಆಡಿಕೊಳ್ಳುತ್ತಾರೆ. 

ದುಃಖದಲ್ಲಿ ಇರುವುದೇ ಈಗಿನ ಟ್ರೆಂಡ್ ಆಗಿಬಿಟ್ಟಿದೆಯಾ? ಅಥವಾ ನಾನು ದುಃಖದಲ್ಲಿ, ಸೀರಿಯಸ್ ಆಗಿ, ಮೆಚ್ಯೂರ್ ಆಗಿ ಕಾಣಿಸಿಕೊಂಡರೆ ಮಾತ್ರ ಜನ ನನ್ನನ್ನು ಒಪ್ಪಿಕೊಳ್ಳುತ್ತಾರಾ?" ಎಂದು ಪ್ರಶ್ನಿಸಿದ್ದಾರೆ.

Related Articles

Related image1
ಆರ್ಟ್‌ ಆಫ್‌ ಲಿವಿಂಗ್‌ ರವಿಶಂಕರ್‌ ಗುರೂಜಿಯಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ, ಕೇಸ್‌ ರದ್ದು ಮಾಡಿದ ಹೈಕೋರ್ಟ್‌
Related image2
ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ಸಾಮೂಹಿಕ ಧ್ಯಾನ
34
ನಗುತ್ತ ಉತ್ತರ ಕೊಟ್ಟ ಗುರೂಜಿ
Image Credit : akankshagkhanna/instagram

ನಗುತ್ತ ಉತ್ತರ ಕೊಟ್ಟ ಗುರೂಜಿ

ಆಕಾಂಕ್ಷಾ ಅವರ ಮಾತನ್ನು ಶಾಂತವಾಗಿ ಕೇಳಿದ ಶ್ರೀ ಶ್ರೀ ರವಿಶಂಕರ್, ನಗುತ್ತಲೇ ಉತ್ತರ ಕೊಟ್ಟರು. "ಜನ ಏನು ಹೇಳ್ತಾರೆ ಅನ್ನೋದು ನಿನಗೆ ಯಾಕೆ ಬೇಕು? ನೀನು ಖುಷಿಯಾಗಿರಬೇಕು ಅಂತ ಅನಿಸಿದರೆ ಹಾಗೆಯೇ ಇರು" ಎಂದರು. ಅಷ್ಟೇ ಅಲ್ಲ, 'ಕುಚ್ ತೋ ಲೋಗ್ ಹೇ ಎಂಬ ಹಳೆಯ ಹಾಡನ್ನು ಸಹ ನೆನಪಿಸಿದರು.

44
ಜನರ ಮುಂದೆ ತೋರಿಸೋದು ಬೇಡ!
Image Credit : Asianet News

ಜನರ ಮುಂದೆ ತೋರಿಸೋದು ಬೇಡ!

ಮಾತನ್ನು ಮುಂದುವರಿಸಿದ ಅವರು, "ನೀನು ಯಾವಾಗಲೂ ಖುಷಿಯಾಗಿರುವುದು ಒಳ್ಳೆಯದೇ, ಆದರೆ ಅದನ್ನು ಎಲ್ಲರ ಮುಂದೆ ತೋರಿಸುವುದು ಅನಿವಾರ್ಯವಲ್ಲ. ಕೆಲವೊಮ್ಮೆ ಜನ ನಮ್ಮ ಖುಷಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ, ನಮ್ಮ ಸಂತೋಷವನ್ನು ಸ್ವಲ್ಪ ನಿಯಂತ್ರಣದಲ್ಲಿಟ್ಟುಕೊಂಡು ವ್ಯಕ್ತಪಡಿಸಬೇಕು. ಪೂರ್ತಿ ಖುಷಿಯನ್ನು ಎಲ್ಲರಿಗೂ ತೋರಿಸುವ ಅಗತ್ಯವಿಲ್ಲ" ಎಂದು ಸಲಹೆ ನೀಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಾಲಿವುಡ್
ಸೀರಿಯಲ್ ಶೂಟಿಂಗ್
ನಟಿ
ರವಿಶಂಕರ್ ಗುರೂಜಿ

Latest Videos
Recommended Stories
Recommended image1
Annayya Serial: ಆಸ್ತಿ ತನ್ನ ಹೆಸರಿಗೆ ಬಂದಿದ್ದೇ ತಡ… ಜಿಮ್ ಸೀನಾನನ್ನೆ ಮನೆಯಿಂದ ಹೊರ ಹಾಕಿದ ಗುಂಡಮ್ಮ
Recommended image2
ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು
Recommended image3
ಅಗ್ನಿ-ಸಾಕ್ಷಿಯನ್ನು ಒಂದು ಮಾಡಲು ಒಟ್ಟಾಗಿ ಬಂದ ಕಲರ್ಸ್ ಕನ್ನಡದ ಘಟಾನುಘಟಿ ನಟರು!
Related Stories
Recommended image1
ಆರ್ಟ್‌ ಆಫ್‌ ಲಿವಿಂಗ್‌ ರವಿಶಂಕರ್‌ ಗುರೂಜಿಯಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ, ಕೇಸ್‌ ರದ್ದು ಮಾಡಿದ ಹೈಕೋರ್ಟ್‌
Recommended image2
ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ಸಾಮೂಹಿಕ ಧ್ಯಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved