- Home
- Entertainment
- TV Talk
- ಅಬ್ಬಬ್ಬಾ.. ಕೂಸು ಹುಟ್ಟೋಕೂ ಮುನ್ನವೇ ಬಂಗಾರದ ಉಡುಗೊರೆ; Youtuber Madhu Gowda ಕೈ ಸೇರಿದ ಗೋಲ್ಡ್!
ಅಬ್ಬಬ್ಬಾ.. ಕೂಸು ಹುಟ್ಟೋಕೂ ಮುನ್ನವೇ ಬಂಗಾರದ ಉಡುಗೊರೆ; Youtuber Madhu Gowda ಕೈ ಸೇರಿದ ಗೋಲ್ಡ್!
Kannada Youtuber Madhu Gowda: ಯುಟ್ಯೂಬರ್ ಮಧು ಗೌಡ ಅವರು ಆಗಾಗ ಬಂಗಾರವನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಅವರು ತನ್ನ ಬಂಗಾರದ ಕಲೆಕ್ಷನ್ ತೋರಿಸಿ, ದೃಷ್ಟಿ ಹಾಕ್ಬೇಡಿ ಎಂದು ಹೇಳಿದ್ದರು. ಈಗ ಮತ್ತೆ ಬಂಗಾರ ಖರೀದಿಸಿದ್ದಾರೆ.

ಗರ್ಭಿಣಿಯಾಗಿರೋ ಮಧು ಗೌಡ
ಮಧು ಗೌಡ ಅವರು ಈಗ ಗರ್ಭಿಣಿ, ತಾಯಿಯಾಗುತ್ತಿದ್ದಾರೆ. ಹೀಗಾಗಿ ಅವರ ಸಹೋದರ, ಅಣ್ಣ ಮದನ್ ಗೌಡ ಅವರು ಮಗು ಹುಟ್ಟೋ ಮುಂಚೆಯೇ ರಿಂಗ್ ಕೊಟ್ಟಿದ್ದಾರೆ. ಮಾವನಾಗಿ ಉಡುಗೊರೆ ನೀಡಿದ್ದಾರೆ.
ಬಂಗಾರದ ಉಡುಗೊರೆ
ಮಗು ಗಂಡೋ ಅಥವಾ ಹೆಣ್ಣೋ ಎಂಬುದು ಗೊತ್ತಿಲ್ಲ. ಹೀಗಿದ್ದರೂ ಕೂಡ ಬಂಗಾರದ ಉಂಗುರವನ್ನು ನೀಡಿದ್ದಾರೆ. ಆಚಾರಿ ಬಳಿ ತೊಟ್ಟಿಲನ್ನು ಮಾಡಿಸಬೇಕು ಎಂದು ಮದನ್ ಗೌಡ ಅವರು ಪ್ಲ್ಯಾನ್ ಮಾಡಿದ್ದಾರಂತೆ.
ಎಲ್ಲರಿಗೂ ರಿಂಗ್ ಕೊಡ್ತಾರಂತೆ
ಇನ್ನೊಂದು ಕಡೆ ಕುಟುಂಬದಲ್ಲಿ ಎಲ್ಲರಿಗೂ ರಿಂಗ್ ಉಡುಗೊರೆ ಕೊಟ್ಟಿದ್ದೇವೆ, ನಮಗೂ ರಿಂಗ್ ಉಡುಗೊರೆ ಬರುತ್ತದೆ ಎಂಬ ನಂಬಿಕೆ ಇದೆ, ಮಾವ ಕೊಡಿಸುತ್ತಿರೋದಿಕ್ಕೆ ನೆನಪಿಗೆ ಇರಲಿ ಎಂದು ರಿಂಗ್ ಖರೀದಿ ಮಾಡಿದ್ದಾರಂತೆ.
ಸೀರೆ ಕೊಡಬೇಡಿ
ಅಂದಹಾಗೆ ಸೀಮಂತದಲ್ಲಿ ನನಗೆ ಸೀರೆ ಕೊಡಬೇಡಿ, ಬಂದು ಆಶೀರ್ವಾದ ಮಾಡಿ ಸಾಕು, ನಾನು ಅಷ್ಟಾಗಿ ಸೀರೆ ಹಾಕಿಕೊಳ್ಳೋದಿಲ್ಲ ಎಂದು ಮಧು ಗೌಡ ಅವರು ಮನವಿ ಕೂಡ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

