MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

'ಕನ್ನಡತಿ'ಯ ಹರ್ಷನಾಗಿ ನಂತರ 'ಕರ್ಣ' ಧಾರಾವಾಹಿಯಲ್ಲಿ ಕರ್ಣನಾಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಅವರ ಎರಡೂ ಸೀರಿಯಲ್‌ಗಳಲ್ಲಿ ಇಬ್ಬರು ನಾಯಕಿಯರಿರುವುದು ವಿಶೇಷ. ಇದೇ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ನಟನ ಕಾಲೆಯುತ್ತಿದ್ದಾರೆ. ಏನಿದು ಡಬಲ್​ ನಾಯಕಿ ಸೀಕ್ರೆಟ್​?

2 Min read
Author : Suchethana D
Published : Feb 03 2026, 06:28 PM IST
Share this Photo Gallery
  • FB
  • TW
  • Linkdin
  • Whatsapp
16
ಆಚೀಚಾದ್ರೂ ಅದೇ ಸ್ಟೋರಿ
Image Credit : X

ಆಚೀಚಾದ್ರೂ ಅದೇ ಸ್ಟೋರಿ

ಧಾರಾವಾಹಿಗಳು ಯಾವುದೇ ಭಾಷೆಯಲ್ಲಿ ಇರಲಿ, ಹೆಚ್ಚಿನ ಸೀರಿಯಲ್​ಗಳಲ್ಲಿ ಇರೋದು ಇಬ್ಬರು ನಾಯಕಿಯರು ಇಲ್ಲವೇ ಇತ್ತೀಚಿನ ಕೆಲವು ಸೀರಿಯಲ್​ಗಳ ಸ್ಟೋರಿಯಲ್ಲಿ ಮದುವೆಯಾದರೂ ದೈಹಿಕ ಸಂಬಂಧ ಬೆಳೆಸದ ಜೋಡಿಗಳು! ಇವರಿಬ್ಬರ ನಡುವೆ ಒಂದಿಷ್ಟು ಮಂದಿ ವಿಲನ್​ಗಳು. ಇಷ್ಟರ ಮಧ್ಯೆಯೇ ಸುತ್ತುವ ಕಥೆಗಳೇ ಹೆಚ್ಚು.

26
ಜನ ಮೆಚ್ಚಿದ ಕರ್ಣ
Image Credit : Instagram

ಜನ ಮೆಚ್ಚಿದ ಕರ್ಣ

ಆದರೆ, ಇದೇ ಕಥೆಯಲ್ಲಿ ಒಂದಿಷ್ಟು ಆಚೀಚೆ ಇದ್ದರೂ ಜನರ ಮನಸ್ಸನ್ನು ಕದ್ದು ಬೀಗುತ್ತಿರುವ ಸೀರಿಯಲ್​​ಗಳಲ್ಲಿ ಒಂದು ಜೀ ಕನ್ನಡದ ಕರ್ಣ (Karna Serial). ಕರ್ಣನ ಒಳ್ಳೆಯತನ ಸ್ವಲ್ಪ ಅತಿಯಾಯ್ತು ಎಂದು ಅಂದುಕೊಂಡವರೆಲ್ಲಾ ಫುಲ್​ ಖುಷ್​ ಆಗುವಂತೆ, ವಿಲನ್​ ರಮೇಶನ ಚಳಿ ಬಿಡಿಸ್ತಿದ್ದಾನೆ ಈ ಕರ್ಣ. ನಿಧಿಯನ್ನು ಲವ್​ ಮಾಡ್ತಿದ್ರೂ ನಿತ್ಯಾಳ ಖುಷಿಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದಾನೆ. ಇವನ ಒಳ್ಳೆಯತನ ನೋಡಿ ನಿತ್ಯಾ ಇವನನ್ನು ಲವ್​ ಮಾಡದಿದ್ರೆ ಸಾಕಪ್ಪಾ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು.

Related Articles

Related image1
ಬದಲಾಯ್ತು Bhagyalakshmi ಗೆಟಪ್​: ಇದೇನಿದು, ಆದಿಗೆ ಕೈಕೊಟ್ಟು ತಾಂಡವ್​ ಜೊತೆ ಹೋಗಿಬಿಟ್ಟಳಾ?
Related image2
Karna Serialನಲ್ಲಿ ಇಬ್ರನ್ನು ನಿಭಾಯಿಸ್ತಿರೋ ನಟನ ರಿಯಲ್​ ಲೈಫ್​ ಚೆಲುವೆ ಯಾರು? ಮದ್ವೆ ಯಾವಾಗ?
36
ಆಗ ಹರ್ಷನಾಗಿ, ಈಗ ಕರ್ಣನಾಗಿ...
Image Credit : Social Media

ಆಗ ಹರ್ಷನಾಗಿ, ಈಗ ಕರ್ಣನಾಗಿ...

ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಟನ ಹೆಸರು ಕಿರಣ್​ ರಾಜ್​ (Kiran Raj). ಸೀರಿಯಲ್​ ನೋಡುವವರು ಕಲರ್ಸ್​ ಕನ್ನಡದ ಕನ್ನಡತಿ ಸೀರಿಯಲ್​ ಕೂಡ ನೋಡಿರಲು ಸಾಕು. ಕನ್ನಡತಿಯಲ್ಲಿ ಕಿರಣ್​ ರಾಜ್​ ಅವರೇ ನಾಯಕ. ಅಲ್ಲಿ ಅವರು ಹರ್ಷನ ರೋಲ್​ ಮಾಡುತ್ತಿದ್ದರು.

46
ಕನ್ನಡತಿ ಸೀರಿಯಲ್​ ಸ್ಟೋರಿ
Image Credit : Instagram

ಕನ್ನಡತಿ ಸೀರಿಯಲ್​ ಸ್ಟೋರಿ

ಕನ್ನಡತಿ ಸೀರಿಯಲ್​ನಲ್ಲಿ ಹಳ್ಳಿ ಹುಡುಗಿ ಭುವಿ. ಸದಾ ಕನ್ನಡದಲ್ಲಿಯೇ ಮಾತನಾಡೋ ಈಕೆ ಹೃದಯ ಶ್ರೀಮಂತಿಕೆ ಇರೋ ಹೆಣ್ಣು. ಫ್ರೆಂಡ್ ವರುಧಿನಿ. ಅವಳ ನೆರವಿನಿಂದಲೇ ಹಳ್ಳಿಯಿಂದ ಬಂದು ಸಿಟಿ ಸೇರುವ ಭುವಿ ಸೇರೋದು. ಆದರೆ, ಪ್ರಾಣಕ್ಕಿಂತಲೂ ಹೆಚ್ಚು ವರುಧಿನಿ ಪ್ರೀತಿಸುತ್ತಿದ್ದ ಹುಡುಗನೇ ಹರ್ಷ. ಅವನು ಇವಳ ಬಲೆಗೆ ಬೀಳುತ್ತಾನೆ. ಪಾರ್ಟಿ, ಔಟಿಂಗ್ ಅಂತ ವರುಧಿನಿ ಜೊತೆ ಅಡ್ಡಾಡುತ್ತಿದ್ದ ಹರ್ಷ, ಹಳ್ಳಿ ಹುಡುಗಿಯ ಪ್ರೀತಿಯ ಸೆರೆಯಲ್ಲಿ ಸಿಕ್ಕಿ ಹಾಕಿಕೊಳ್ಳೋದು ಕಥೆ. ಈ ಸೀರಿಯಲ್ ಕಾಲೇಜು ಹುಡುಗರ ಫೇವರೇಟ್ ಸೀರಿಯಲ್ ಆಗಿದ್ದು, ಹರ್ಷ-ಭವಿ ಜೋಡಿ ಹವಿ ಅಂತಾನೇ ಫೇಮಸ್ ಆಗಿತ್ತು. ಇವರಿಬ್ಬರ ಪ್ರೇಮ ಕಹಾನಿ ಟಿನೇಜ್ ಹುಡುಗರಿಗೆ ಕಚಗುಳಿ ಇಡುವಂತಿತ್ತು.

56
ಕಾಲೆಳೆಯುತ್ತಿರೋ ಫ್ಯಾನ್ಸ್​
Image Credit : kiran raj instagram

ಕಾಲೆಳೆಯುತ್ತಿರೋ ಫ್ಯಾನ್ಸ್​

ಇದೀಗ ಸೀರಿಯಲ್​ ಪ್ರೇಮಿಗಳು, ಜಾಲತಾಣದಲ್ಲಿ ಕಿರಣ್​ ರಾಜ್​ ಅವರ ಕಾಲೆಳೆಯುತ್ತಿದ್ದಾರೆ. ನಿಮ್ಮ ಸೀರಿಯಲ್​ ಸಕ್ಸಸ್​ ಕಾಣಬೇಕು ಎಂದರೆ ಇಬ್ಬರು ಬ್ಯೂಟಿಗಳು ಇರಲೇಬೇಕಾ ಎನ್ನುವುದು ಅವರು ಪ್ರಶ್ನೆ. ಕಿರಣ್​ ರಾಜ್​ ಅವರ ಸಕ್ಸಸ್​ ಹಿಂದೆ ಇರೋದು ಇಬ್ಬರು ಸುಂದರಿಯರು ಎನ್ನುತ್ತಿದ್ದಾರೆ! ಕರ್ಣ ಸೀರಿಯಲ್​ನಲ್ಲಿ ನಿತ್ಯಾ ಆಗಿ ನಮ್ರತಾ ಗೌಡ ಹಾಗೂ ನಿಧಿಯಾಗಿ ಕಾವ್ಯಾ ಗೌಡ ಇದ್ದರೆ, ಕನ್ನಡತಿಯಲ್ಲಿ, ವರುಧಿನಿಯಾಗಿ ಸಾರಾ ಅಣ್ಣಯ್ಯ, ಭುವಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದರು.

66
ಅವಿವಾಹಿತ ನಟ
Image Credit : Asianet News

ಅವಿವಾಹಿತ ನಟ

ನಟ ಕಿರಣ್​ ರಾಜ್​ ನಿಜ ಜೀವನದಲ್ಲಿ ಇನ್ನೂ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​. ಆದರೆ ಸೀರಿಯಲ್​ನಲ್ಲಿ ಮಾತ್ರ ಇಬ್ಬಿಬ್ಬರು ಹೀರೋಯಿನ್​ಗಳು ಬೇಕೇ ಬೇಕು. ಇಬ್ಬರು ನಾಯಕಿಯರ ಮುದ್ದಿನ ನಾಯಕ ಇವರೇ ಎಂದು ನಟನ ಕಾಲೆಳೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಕಿರಣ್ ರಾಜ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಆ ವ್ಯಕ್ತಿ ನನಗೆ ಸೀರಿಯಲ್‌ ಇಂಡಸ್ಟ್ರಿಯಲ್ಲಿ ತುಂಬ ಕಷ್ಟ ಕೊಟ್ಟರು: ಸತ್ಯ ಹೇಳಿದ Radha Ramana ನಟಿ ಆಶಿತಾ ಚಂದ್ರಪ್ಪ
Recommended image2
ಮೀಟರ್‌ ಇದೆ, ಮೀಟರ್; ಅನುಮತಿ ಕೇಳದೆ ಗಿಲ್ಲಿ ನಟ ಇದ್ದಲ್ಲಿಗೆ ಹೋಗ್ತೀನಿ: Rakshita Shetty Open Talk
Recommended image3
ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್‌ ಶೆಟ್ಟಿಯ ಸುಂದರ Home Tour
Related Stories
Recommended image1
ಬದಲಾಯ್ತು Bhagyalakshmi ಗೆಟಪ್​: ಇದೇನಿದು, ಆದಿಗೆ ಕೈಕೊಟ್ಟು ತಾಂಡವ್​ ಜೊತೆ ಹೋಗಿಬಿಟ್ಟಳಾ?
Recommended image2
Karna Serialನಲ್ಲಿ ಇಬ್ರನ್ನು ನಿಭಾಯಿಸ್ತಿರೋ ನಟನ ರಿಯಲ್​ ಲೈಫ್​ ಚೆಲುವೆ ಯಾರು? ಮದ್ವೆ ಯಾವಾಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved