Karna ಸೀರಿಯಲ್ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್ ರಾಜ್ ರೋಚಕ ಸ್ಟೋರಿ
'ಕರ್ಣ' ಧಾರಾವಾಹಿಯ ಮೂಲಕ 'ಟಿಆರ್‌ಪಿ ಕಿಂಗ್' ಎನಿಸಿಕೊಂಡಿರುವ ನಟ ಕಿರಣ್ ರಾಜ್ ಅವರ ಬಗ್ಗೆ ಈ ಲೇಖನ ವಿವರಿಸುತ್ತದೆ. ಅವರ ಯಶಸ್ವಿ ನಟನಾ ಪಯಣ, 'ಕರ್ಣ 2.0' ನಲ್ಲಿನ ಅಭಿನಯ ಮತ್ತು ನಿಜ ಜೀವನದಲ್ಲಿ ಅವರು ಮಾಡುತ್ತಿರುವ ಸಮಾಜ ಸೇವೆಯ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಯಾರೀ ಕಿರಣ್ ರಾಜ್?
ಕಿರಣ್ ರಾಜ್ ಎಂದರೆ ಬಹಳಷ್ಟು ಮಂದಿಗೆ ತಿಳಿಯದೇ ಹೋಗಬಹುದು. ಆದರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial) ಕರ್ಣ ಎಂದರೆ ಸಾಕು, ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವನಾಗಿರುವ ನಾಯಕ ಕಣ್ಮುಂದೆ ಬರುತ್ತಾರೆ. ಈ ಹ್ಯಾಂಡ್ಸಮ್ ಯುವಕನೇ ಕಿರಣ್ ರಾಜ್ (Kiran Raj). TRP King ಎಂದೇ ಫೇಮಸ್ ಆಗಿದ್ದಾರೆ ಕಿರಣ್ ರಾಜ್.
ಕರ್ಣ 2.0
ಸದ್ಯ ಕರ್ಣ 2.0 ನಡೆಯುತ್ತಿದೆ. ಮೊದಲ ಹಂತದಲ್ಲಿ, ಮಾಮೂಲು ಎಲ್ಲಾ ಸೀರಿಯಲ್ಗಳ ನಾಯಕನಂತೆ, ಕರ್ಣ ಕೂಡ ದಡ್ಡನಂತೆ ಬಿಂಬಿಸಲಾಗಿತ್ತು. ಎಲ್ಲರನ್ನೂ ಒಳ್ಳೆಯವ ಅಂದುಕೊಂಡಿದ್ದ. ಪುಣ್ಯಕ್ಕೆ, ಸಂಪೂರ್ಣವಾಗಿ ಅಲ್ಲದಿದ್ದೂ, ಅರ್ಧದಷ್ಟಾದರೂ ಬುದ್ಧಿವಂತ ಆಗಿದ್ದಾನೆ ಕರ್ಣ. ಉಳಿದವರ ಕುತಂತ್ರ ತಿಳಿಯದಿದ್ದರೂ ರಮೇಶ್ನ ಕುತಂತ್ರ ತಿಳಿದುಕೊಂಡಿದ್ದಾನೆ.
ಟಿಆರ್‌ಪಿ ಕಿಂಗ್
ರಮೇಶ್ಗೆ ತಿರುಗೇಟು ನೀಡುವ ಮೂಲಕ ಕರ್ಣ 2.0ಗೆ ನಾಂದಿ ಹಾಡಲಾಗಿದೆ. ಮೊದಲ ಭಾಗ ಹಾಗೂ ಎರಡನೇ ಭಾಗ, ಎರಡರಲ್ಲಿಯೂ ಟಿಆರ್ಪಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕರ್ಣ ಸೀರಿಯಲ್ನಿಂದಾಗ ಕಿರಣ್ ರಾಜ್ ಮತ್ತೊಮ್ಮೆ ಟಿಆರ್‌ಪಿ ಕಿಂಗ್ ಎಂದು ಫೇಮಸ್ ಆಗುತ್ತಿದ್ದಾರೆ.
ಸೂಪರ್ ಅಭಿನಯ
ಕರ್ಣನ ಪಾತ್ರದ ತೀವ್ರತೆ ಮತ್ತು ಭಾವನಾತ್ಮಕ ಸಂಯಮದ ಸಮತೋಲನಕ್ಕಾಗಿ ಕಿರಣ್ ರಾಜ್ ಅವರ ಚಿತ್ರಣವು ವ್ಯಾಪಕವಾಗಿ ಮೆಚ್ಚುಗೆ ಪಡೆಯುತ್ತಿದೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ಮೋಡಿ ಮಾಡಿದ್ದಾರೆ.
ನಿಜಜೀವನದಲ್ಲಿ ನಟ
ಅಷ್ಟಕ್ಕೂ ಕಿರಣ್ ರಾಜ್ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ನಟನ ಹಿನ್ನೆಲೆ
ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

