ಧಾರವಾಹಿಯಲ್ಲಿ ಬಾಲನಟಿಯಾಗಿ ಮಿಂಚಿ ಇದೀಗ ಬಿಗ್ ಬಾಸ್ 20ಕ್ಕೆ ಕಾಲಿಟ್ಟಿ ಕಿರಿಯ ಸ್ಪರ್ಧಿ
ಬಿಗ್ ಬಾಸ್ 20ರಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಧಾರವಾಹಿಯಲ್ಲಿ ಬಾಲನಟಿಯಾಗಿ ಮಿಂಚಿದ್ದ ಈ ನಟಿಗೆ ಇದೀಗ 23 ವರ್ಷ. ಅಷ್ಟಕ್ಕೂ ಯಾರು ಈ ಆರಿಶ್ಫಾ ಖಾನ್?

ಬಿಗ್ ಬಾಸ್ ಶೋನ ಕಿರಿಯ ಸ್ಪರ್ಧಿ
ಬಿಗ್ ಬಾಸ್ ರಿಯಾಲಿಟಿ ಶೋ ಅದ್ದೂರಿಯಾಗಿ ಆರಂಭಗೊಂಡಿದೆ. ಕಿಚ್ಚ ಸುದೀಪ್, ಸಲ್ಮಾನ್, ನಾಗಾರ್ಜುನ, ಮೋಹನ್‌ಲಾಲ್ ಸೇರಿದಂತೆ ಪ್ರಮುಖ ಸ್ಟಾರ್ ನಿರೂಪಕರು ನಡೆಸಿಕೊಡುವ ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಶುರುವಾಗಿದೆ. ಈ ಪೈಕಿ ಬಿಗ್ ಬಾಸ್ 20ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಅತೀ ಕಿರಿಯ ಸ್ಪರ್ಧಿ ಅರಿಶ್ಫಾ ಖಾನ್ ಭಾರಿ ಸದ್ದು ಮಾಡುತ್ತಿದ್ದಾರೆ.
ಧಾರವಾಹಿಯಲ್ಲಿ ಬಾಲ ನಟಿಯಾಗಿದ್ದ ಸ್ಪರ್ಧಿ
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಾಸ್ ಶೋನಲ್ಲಿ ಅರಿಶ್ಫಾ ಖಾನ್ ಪ್ರವೇಶಿಸಿದ್ದಾರೆ. 23ರ ಹರೆಯದ ಅರಿಶ್ಫಾ ಖಾನ್ ಚಿಕ್ಕಂದಿನಿಂದಲೇ ಕ್ಯಾಮೆರಾ ಮುಂದೆ ನಟಿಸಿ ಪ್ರೇಕ್ಷಕರ ಮನಗೆದ್ದ ತಾರೆ. ಹಲವು ಧಾರವಾಹಿಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅರಿಶ್ಫಾ ಖಾನ್ ಇದೀಗ ಹಿಂದಿ ಬಿಗ್ ಬಾಸ್ ಶೋಗೆ ಪ್ರವೇಶಿಸಿದ್ದಾರೆ.
2012ರಲ್ಲಿ ಬಾಲ ನಟಿ, ಈಗ ಬಿಗ್ ಬಾಸ್ ಸ್ಪರ್ಧಿ
2012ರಲ್ಲಿ ಬಾಲನಟಿಯಾಗಿ ಚಲಚ್ಚಿ-ಶೆಹ್ ಔರ್ ಮಾತ್ ಧಾರವಾಹಿಯಲ್ಲಿ ನಟಿಸಿದ್ದಾರೆ. ಸದ್ಯ ಧಾರವಾಹಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಏಕ್ ವೀರ್ ಕಿ ಅರ್ದಾಸ್, ಜೀನಿ ಔರ್ ಜುಜು, ಉತ್ತರನ್, ಯೇ ಹೈ ಮೊಹಬ್ಬತೇನ್, ಗಂಗಾ, ಮೇರಿ ದುರ್ಗಾ, ಪಪ್ಪಾ ಬೈ ಚಾನ್ಸ್ ಸೇರಿದಂತೆ ಪ್ರಮುಖ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಡಿಜಿಟಲ್ ಕ್ರಿಯೇಟರ್
ಧಾರವಾಹಿ ಜೊತೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಗಮನಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾಶನ್ , ಬ್ಯೂಟಿ, ಲೈಫ್‌ಸ್ಟೈಲ್ ಸೇರಿದಂತೆ ಹಲವು ರೀತಿಯ ಕೆಂಟೆಂಟ್ ಹಂಚಿಕೊಳ್ಳುತ್ತಾರೆ. ಕೆಲ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ.
2018ರ ಘಟನೆ
ವಿವಾದಗಳಿಂದ ದೂರವಿದ್ದ ಆರಿಶ್ಫಾ ಖಾನ್ 2018ರಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ದಾನಿಶ್ ಜೆಹನ್ ನಿಧನದಿಂದ ವಿವಾದ ಸುತ್ತಿಕೊಂಡಿತು. ದಾನಿಶ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು. ಬಳಿಕ ಆರಿಶ್ಫಾ ಖಾನ್ ಸ್ಪಷ್ಟನೆ ನೀಡಿದ್ದರು. ಇದೀಗ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಶೋನಲ್ಲಿ ಕಿರಿಯ ಸ್ಪರ್ಧಿಯಾಗಿ ಗಮನಸೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

