- Home
- Entertainment
- TV Talk
- BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?
BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?
ಬಿಗ್‌ಬಾಸ್ ಸೀಸನ್ 12ರ ಫಿನಾಲೆ ಟಿಕೆಟ್‌ಗಾಗಿ ನಡೆದ ಮೊದಲ ಟಾಸ್ಕ್‌ನಲ್ಲಿ ಧ್ರುವಂತ್, ಗಿಲ್ಲಿ ನಟರನ್ನು ಸೋಲಿಸಿದ್ದಾರೆ. ಇದಾದ ನಂತರದ ಟಾಸ್ಕ್‌ನಲ್ಲಿ ಕಾವ್ಯಾ ಶೈವ ಗೆಲುವು ಸಾಧಿಸಿದ್ದು, ಇಷ್ಟು ದಿನ ತನ್ನ ಗೆಲುವಿಗೆ ಕಾರಣ ಎನ್ನಲಾಗಿದ್ದ ಗಿಲ್ಲಿಯನ್ನೇ ಹಿಂದಿಕ್ಕಿ ಅಚ್ಚರಿ ಮೂಡಿಸಿದ್ದಾರೆ.

ಕಾವ್ಯಾ ಶೈವ
ಬಿಗ್‌ಬಾಸ್ ಸೀಸನ್ 12 ಆರಂಭವಾದ ಕೆಲವೇ ದಿನಗಳಲ್ಲಿ ಕಾವ್ಯಾ ಶೈವ ಅವರಿಗೆ ಫ್ರೀ ಪ್ರೊಡಕ್ಟ್ ಎಂಬ ಹಣೆಪಟ್ಟಿಯನ್ನು ಅಶ್ವಿನಿ ಗೌಡ ನೀಡಿದ್ದರು. ಇದಾದ ಬಳಿಕ ಗಿಲ್ಲಿಯಿಂದಲೇ ಕಾವ್ಯಾ ಇಷ್ಟು ದಿನ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಫಿನಾಲೆ ಟಾಸ್ಕ್ ನಲ್ಲಿ ಕಾವ್ಯಾ ಶೈವ ಅಬ್ಬರಿಸಿ, ಗಿಲ್ಲಿಯನ್ನು ಹಿಂದಿಕ್ಕಿದ್ದಾರೆ.
ಗಿಲ್ಲಿ ನಟ ಮತ್ತು ಧ್ರುವಂತ್
ಹೌದು, ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಆರಂಭವಾಗಿರೋದನ್ನು ಪ್ರೋಮೋ ಮೂಲಕ ತೋರಿಸಲಾಗಿದೆ. ಮೊದಲ ಟಾಸ್ಕ್ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ನಡೆದಿದೆ. ಈ ಆಟ ಗೆಲ್ಲುವ ಸ್ಪರ್ಧಿ, ಟಾಪ್ 6 ಫಿನಾಲೆ ಟಿಕೆಟ್ ಟಾಸ್ಕ್‌ಗೆ ಆಯ್ಕೆಯಾಗಲಿದ್ದಾರೆ. ವರದಿಗಳ ಪ್ರಕಾರ, ಈ ಆಟವನ್ನು ಧ್ರುವಂತ್ ಗೆದ್ದಿದ್ದಾರೆ. ಮುಂದಿನ ಟಾಸ್ಕ್ ಕಾವ್ಯಾ ಆಡಿದ್ದಾರೆ.
ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ
ಬಿಗ್‌ಬಾಸ್ ಸೂಚಿಸುವ ಸ್ಪರ್ಧಿಗೆ ತನ್ನ ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಹಾಗಾಗಿ ಧ್ರುವಂತ್ ತಮ್ಮ ಎದುರಾಳಿಯಾಗಿ ಗಿಲ್ಲಿ ನಟ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಕಾಮಿಡಿ ಮಾಡೋದನ್ನು ಬಿಟ್ಟು ಇನ್ನುಳಿದ ಎಲ್ಲಾ ವಿಷಯಗಳಲ್ಲಿ ಶೂನ್ಯ. ಟಾಸ್ಕ್ ಮತ್ತು ಬೇರಾವ ನಿರ್ಧಾರ ತೆಗೆದುಕೊಳ್ಳುವಲ್ಲಿ ಗಿಲ್ಲಿ ಬದ್ಧತೆಯನ್ನು ನೋಡಿಲ್ಲ ಎಂದು ಧ್ರುವಂತ್ ಹೇಳಿದ್ದರು.
ಟಾಸ್ಕ್‌ನಲ್ಲಿ ಕಾವ್ಯಾ ಶೈವ ವಿನ್
ಮುಂದಿನ ಟಾಸ್ಕ್‌ನಲ್ಲಿ ಕಾವ್ಯಾ ಶೈವ ವಿನ್ ಆಗಿದ್ದಾರೆ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದ್ರೆ ಕಾವ್ಯಾ ಎದುರಾಳಿ ಯಾರು ಆಗಿದ್ರು ಮತ್ತು ಟಾಸ್ಕ್ ಏನಾಗಿತ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕಾವ್ಯಾ ಗೆಲುವಿನ ವಿಷಯ ಕೇಳಿದ ವೀಕ್ಷಕರು, ಗಿಲ್ಲಿಯನ್ನು ಹಿಂದೆ ಬಿಟ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: BBK 12: ಎಲ್ಲಿಗೋ ವೈರಿಂಗ್, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
ಕಾವು.. ಕಾವು... !
ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಬಿಗ್‌ಬಾಸ್ ಮನೆಗೆ ಜಂಟಿಯಾಗಿ ಆಗಮಿಸಿದ್ದರು. ಇಷ್ಟು ದಿನವೂ ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಕಾವ್ಯಾ ಪೋಷಕರು, ಗಿಲ್ಲಿಯನ್ನು ಬಿಟ್ಟುಕೊಡಬೇಡ ಎಂದು ಸಲಹೆ ನೀಡಿದ್ದರು. ಕಾವ್ಯಾ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಗಿಲ್ಲಿ ಮಾತ್ರ ಕಾವು.. ಕಾವು... ಎಂದು ಹೇಳಿಕೊಂಡು ಹಿಂದೆ ಹಿಂದೆಯೇ ಹೋಗುತ್ತಿದ್ದಾರೆ.
ಇದನ್ನೂ ಓದಿ: BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

