- Home
- Entertainment
- TV Talk
- BBK 12: ಬಿಗ್‌ಬಾಸ್ ಸೀಸನ್ 12ರ ಟ್ರೋಫಿ ಯಾರಿಗೆ? ಅಚ್ಚರಿಯ ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
BBK 12: ಬಿಗ್‌ಬಾಸ್ ಸೀಸನ್ 12ರ ಟ್ರೋಫಿ ಯಾರಿಗೆ? ಅಚ್ಚರಿಯ ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪಂದನಾ ಸೋಮಣ್ಣ, ಸೀಸನ್ 12ರ ವಿನ್ನರ್ ಯಾರೆಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಧನುಷ್ ಗೆಲ್ಲಬೇಕಾದ ಸ್ಪರ್ಧಿಯಾದರೂ, ಗಿಲ್ಲಿ ನಟ ಈ ಬಾರಿಯ ಟ್ರೋಫಿ ಎತ್ತಲಿದ್ದಾರೆ. ಜೊತೆಗೆ ಟಾಪ್ 5 ಸ್ಪರ್ಧಿಗಳು ಯಾರೆಂಬುದನ್ನೂ ಬಹಿರಂಗಪಡಿಸಿದ್ದಾರೆ.

ಟ್ರೋಫಿ ಯಾರಿಗೆ?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಎರಡು ವಾರ ಮಾತ್ರ ಬಾಕಿ ಉಳಿದಿದೆ. ಭಾನುವಾರ ಸ್ಪಂದನಾ ಸೋಮಣ್ಣ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರಗೆ ಬಂದಿರುವ ನಟಿ ಸ್ಪಂದನಾ ಸೋಮಣ್ಣ ಸಂದರ್ಶನ ನೀಡಿದ್ದು, ಈ ಬಾರಿ ಬಿಗ್‌ಬಾಸ್ ಟ್ರೋಫಿ ಯಾರಿಗೆ ಸಿಗಲಿದೆ ಎಂಬುದನ್ನು ಹೇಳಿದ್ದಾರೆ.
ಯಾರು ಗೆಲ್ತಾರೆ?
ಸಂದರ್ಶನದಲ್ಲಿ ಮಾತನಾಡಿರುವ ಸ್ಪಂದನಾ ಸೋಮಣ್ಣ, ಒಂದು ವೇಳೆ ಮನೆಯಲ್ಲಿ ನಾನು ಉಳಿದುಕೊಂಡಿದ್ರೆ ಫಿನಾಲೆಯಲ್ಲಿ ನಾನಿರುತ್ತಿದ್ದೆ. ಆದ್ರೆ ಅದು ಈಗ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಬಿಗ್‌ಬಾಸ್ ಯಾರು ಗೆಲ್ಲಬೇಕು ಮತ್ತು ಆದ್ರೆ ಯಾರು ಗೆಲ್ತಾರೆ ಎಂಬುದರ ಬಗ್ಗೆಯೂ ಹೇಳಿದರು.
ಸ್ಪಂದನಾ ಸೋಮಣ್ಣ ಭವಿಷ್ಯ
ಗಿಲ್ಲಿ ನಟ, ಧನುಷ್, ರಕ್ಷಿತಾ ಶೆಟ್ಟಿ, ಧ್ರವಂತ್ ಮತ್ತು ಅಶ್ವಿನಿ ಗೌಡ ಅವರು ಟಾಪ್ ಫೈವ್‌ನಲ್ಲಿರುತ್ತಾರೆ. ರಘು, ರಾಶಿಕಾ ಶೆಟ್ಟಿ ಮತ್ತು ಕಾವ್ಯಾ ಫಿನಾಲೆಗೆ ಬರಲ್ಲ. ಧನುಷ್ ಗೆಲ್ಲಬೇಕು ಆದ್ರೆ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗುತ್ತಾರೆ ಎಂದು ಸ್ಪಂದನಾ ಸೋಮಣ್ಣ ಭವಿಷ್ಯ ನುಡಿದರು. ನನಗೆ ಧ್ರುವಂತ್ ಇಷ್ವ ಆಗಲ್ಲ, ಆದ್ರೆ ಅವರಾಟ ಜನರಿಗೆ ಇಷ್ಟವಾಗಿ ಫಿನಾಲೆವರೆಗೂ ಬರಬಹುದು ಎಂದು ಹೇಳಿದರು.
ಮಾಳು ಸಂದರ್ಶನ ನೋಡಬೇಕು
ಇದೇ ವೇಳೆ ಮನೆಯಿಂದ ಹೊರಗೆ ಬಂದ ನಂತರ ಮಾಳು ನಿಪನಾಳ, ನಾನು ಮನೆಯಲ್ಲಿರಲು ಸ್ಪಂದನಾಗಿಂತ ಅರ್ಹನಾಗಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸೂಕ್ಷ್ಮವಾಗಿ ಉತ್ತರಿಸಿದ ಸ್ಪಂದನಾ ಸೋಮಣ್ಣ, ನಾನು ಅವರ ಸಂದರ್ಶನ ನೋಡಿಲ್ಲ. ಆ ಸಂದರ್ಶನವನ್ನು ನೋಡಬೇಕು ಎಂದರು.
ಇದನ್ನೂ ಓದಿ: BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
ನನ್ನನ್ನು ಚೆನ್ನಾಗಿ ನೋಡಿಕೊಂಡ್ರು
ಟಾಸ್ಕ್ ಆಡುವಾಗ ನನ್ನ ಕಾಲಿಗೆ ಪೆಟ್ಟು ಬಿದ್ದಾಗ ಮನೆಯ ಸದಸ್ಯರೆಲ್ಲರೂ ತುಂಬಾ ಚೆನ್ನಾಗಿ ನೋಡಿಕೊಂಡರು. ಆ ಸಮಯದಲ್ಲಿ ನನಗೆ ಪರ್ಸನಲ್ ಕೆಲಸಗಳನ್ನು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ತನ್ನ ಕೆಲಸಗಳನ್ನು ಮಾಡಿಕೊಳ್ಳದ ಗಿಲ್ಲಿ ನಟ ಸಹ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳಿದರು.
ಇದನ್ನೂ ಓದಿ: BBK 12: ತಳ್ಳಾಟ, ನೂಕಾಟ, ಕಿತ್ತಾಟ; ಇದು ರಕ್ಷಿತಾ ಶೆಟ್ಟಿ Vs ರಾಶಿಕಾ ಶೆಟ್ಟಿ; ಜಗಳದಲ್ಲಿ ಯಾರು ಸರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

