BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್
Dhruvanth Vs Gilli Nata: ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಬಳಿಕ ಟಾಸ್ಕ್‌ಗಳ ಅಬ್ಬರ ಶುರುವಾಗಿದ್ದು, ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ ನಡೆದಿದೆ. ಧ್ರುವಂತ್ ತಮ್ಮ ಎದುರಾಳಿಯಾಗಿ ಗಿಲ್ಲಿ ನಟರನ್ನು ಆಯ್ಕೆ ಮಾಡಿಕೊಂಡು, ಅವರು ಟಾಸ್ಕ್‌ಗಳಲ್ಲಿ ಶೂನ್ಯ ಎಂದು ಕಾರಣ ನೀಡಿದ್ದಾರೆ.

ಟಾಸ್ಕ್‌ಗಳ ಅಬ್ಬರ ಶುರು
ನಾಮಿನೇಷನ್ ಪ್ರಕ್ರಿಯೆ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಅಬ್ಬರ ಶುರುವಾಗಿದೆ. ಬಿಗ್‌ಬಾಸ್ ಸೂಚಿಸುವ ಸ್ಪರ್ಧಿ ತನ್ನ ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಅವಕಾಶ ಪಡೆದುಕೊಂಡ ಧ್ರುವಂತ್ ತಮ್ಮ ಎದುರಾಳಿಯಾಗಿ ಗಿಲ್ಲಿ ನಟ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ಆಟ
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ಆಟ ಶುರುವಾಗಿದೆ. ತಮ್ಮ ವಿರುದ್ಧ ಗಿಲ್ಲಿ ಯಾಕೆ ಎಂಬುದನ್ನು ಸಹ ಧ್ರುವಂತ್ ವಿವರಿಸಿದ್ದಾರೆ. ಗಿಲ್ಲಿ ನಟ ಕಾಮಿಡಿ ಮಾಡೋದನ್ನು ಬಿಟ್ಟು ಇನ್ನುಳಿದ ಎಲ್ಲಾ ವಿಷಯಗಳಲ್ಲಿ ಶೂನ್ಯ. ಟಾಸ್ಕ್ ಮತ್ತು ಬೇರಾವ ನಿರ್ಧಾರ ತೆಗೆದುಕೊಳ್ಳುವಲ್ಲಿ ಗಿಲ್ಲಿ ಅವರ ಹೊಣೆಗಾರಿಕೆಯನ್ನು ನಾನು ನೋಡಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ.
ಇಬ್ಬರಲ್ಲಿ ಗೆದ್ದಿದ್ದು ಯಾರು?
ಈ ಟಾಸ್ಕ್‌ನಲ್ಲಿ ಸೋಲುವ ಸ್ಪರ್ಧಿ, ಫಿನಾಲೆ ಟೆಕೆಟ್ ಪಡೆಯುವ ಮುಂದಿನ ಆಟದಿಂದ ಹೊರಗೆ ಉಳಿಯುತ್ತಾರೆ. ಇದರಿಂದ ಧ್ರುವಂತ್ ಮತ್ತು ಗಿಲ್ಲಿ ನಟ ಇಬ್ಬರಿಗೂ ಈ ಆಟ ಅತ್ಯಂತ ಮಹತ್ವದಾಗಿದೆ. ಪ್ರೋಮೋದಲ್ಲಿ ಇಬ್ಬರಲ್ಲಿ ಗೆದ್ದಿದ್ದು ಯಾರು ಎಂಬುದನ್ನು ತೋರಿಸಿಲ್ಲ.
ಗಿಲ್ಲಿ ಫ್ಯಾನ್ಸ್
ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ಮೊದಲ ಟಾಸ್ಕ್ ನಡೆಯಲಿದೆ ಎಂಬ ಮಾಹಿತಿ ರಿವೀಲ್ ಆಗಿತ್ತು. ಆಟದಲ್ಲಿ ಧ್ರುವಂತ್ ಗೆಲುವು ಕಂಡಿದ್ದು, ಫಿನಾಲೆ ಟಿಕೆಟ್‌ಗೆ ನಡೆಯುವ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಮತ್ತೆ ಎಂದಿನಂತೆ ಟಾಸ್ಕ್ ಆಡಲು ಬರಲ್ಲ ಎಂಬ ಅಪವಾದಕ್ಕೆ ಗಿಲ್ಲಿ ನಟ ತುತ್ತಾಗಿದ್ದಾರೆ.
ಈ ವಿಷಯ ತಿಳಿದ ಗಿಲ್ಲಿ ಫ್ಯಾನ್ಸ್, ನಮ್ಮ ಹುಲಿ Ticket to Top 6 ಸೋತಿರಬಹುದು , ಆದರೆ ಕಪ್ ನ ಸೋಲೋ ಮಾತೇ ಇಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?
ಮನೆಮಂದಿಯೆಲ್ಲಾ ನಾಮಿನೇಟ್
ಇಂದಿನ ಪ್ರೋಮೋದಲ್ಲಿ ಧ್ರುವಂತ್ ಅವರಿಗೆ ಅಶ್ವಿನಿ ಗೌಡ ಒಬ್ಬರೇ ಸಪೋರ್ಟ್ ಮಾಡಿದಂತೆ ಕಾಣಿಸುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಜೊತೆಯಾಗಿದ್ರೆ, ಇನ್ನುಳಿದವರು ಒಂದು ತಂಡವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧನುಷ್ ಹೊರತುಪಡಿಸಿ ಮನೆಮಂದಿಯೆಲ್ಲಾ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

