- Home
- Entertainment
- TV Talk
- BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?
BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?
ರಾಶಿಕಾ ಮತ್ತು ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ-ನೂಕಾಟ ನಡೆದಿದೆ. ಈ ಹಿಂದೆ ಇದೇ ಕಾರಣಕ್ಕೆ ರಂಜಿತ್ ಕುಮಾರ್ ಮನೆಯಿಂದ ಹೊರನಡೆದಿದ್ದರಿಂದ, ರಾಶಿಕಾ ಕೂಡ ಹೊರಹೋಗಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ನಾಮಿನೇಷನ್ ಪ್ರಕ್ರಿಯೆ
ನಾಮಿನೇಷನ್ ಪ್ರಕ್ರಿಯೆಯಲ್ಲಿ ರಾಶಿಕಾ ಮತ್ತು ರಕ್ಷಿತಾ ನಡುವೆ ನಡೆದ ಜಗಳ ತಳ್ಳಾಟ ಮತ್ತು ನೂಕಾಟ ನಡೆದಿದೆ. ರಕ್ಷಿತಾ ಅವರನ್ನು ನಾಮಿನೇಟ್ ಮಾಡುವಾಗ ನೀನು ಎಷ್ಟು Manipulate ಎಂಬುವುದು ನನಗೂ ಮತ್ತು ನಮ್ಮ ಮನೆಯವರಿಗೆ ಗೊತ್ತಿದೆ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ರಕ್ಷಿತಾ ಪ್ರತಿಕ್ರಿಯಿಸಿದಾಗ ನಾನು ಹೇಗೆ ಹೇಳಿಯೇ ಇಲ್ಲ ಎಂದು ರಾಶಿಕಾ ತಮ್ಮ ಮಾತು ಬದಲಿಸಿಕೊಳ್ಳುತ್ತಾರೆ.
ರಕ್ಷಿತಾಳನ್ನ ತಳ್ಳಿದ ರಾಶಿಕಾ
ಇಷ್ಟು ಮಾತ್ರಲ್ಲದೇ ಈ ಜಗಳದಲ್ಲಿ ಕೋಪದಿಂದ ಬರುವ ರಕ್ಷಿತಾ ಅವರನ್ನು ತಳ್ಳುತ್ತಾರೆ. ನಂತರ ರಕ್ಷಿತಾ ಸಹ ರಾಶಿಕಾ ಅವರನ್ನು ದೂಡುತ್ತಾರೆ. ಮನೆಯವರಿಗೆ ನಿನ್ನ ಬಗ್ಗೆ ಗೊತ್ತಿದೆ ಎಂದು ರಾಶಿಕಾ ಹೇಳಿದಾಗ ಹಾಗಾದ್ರೆ ಇಲ್ಲಿಗೆ ಬಂದಾಗ ನಿಮ್ಮ ಫ್ಯಾಮಿಲಿಯವರು ಈ ವಿಷಯ ಹೇಳಿದ್ರಾ ಎಂದು ರಕ್ಷಿತಾ ಕೇಳುತ್ತಾರೆ.
ಇದಕ್ಕೆ ಮನೆಯವರ ವಿಷಯಕ್ಕೆ ಬರಬೇಡ ಎಂದು ಹೇಳುತ್ತಾರೆ. ನಂತರ ನಾನು ಮನೆಯವರ ಬಗ್ಗೆ ಮಾತನಾಡಿಲ್ಲ ಎಂದು ರಾಶಿಕಾ ಮಾತು ಬದಲಿಸುತ್ತಾರೆ. ನನ್ನನ್ನು ಹೇಗೆ ಟಚ್ ಮಾಡಿದ್ರು ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡುತ್ತಾರೆ.
ರಂಜಿತ್ ಕುಮಾರ್
ಈ ಹಿಂದೆ ಸೀಸನ್ 11ರಲ್ಲಿ ವಕೀಲ ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಂಜಿತ್ ಕುಮಾರ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಇದೀಗ ರಾಶಿಕಾ ಸಹ ಇದೇ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ರಾಶಿಕಾ ಅವರನ್ನು ಸಹ ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ರಕ್ಷಿತಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ರಕ್ಷಿತಾ ಶೆಟ್ಟಿ ನಾಮಿನೇಟ್
ವೀಕೆಂಡ್ ಸಂಚಿಕೆಯಲ್ಲಿಯೂ ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಿಸಿ ಸುದೀಪ್ ಅವರು 'ಉರೀತಾ' ಇದೆ ಎಂಬ ಪದ ಬಳಕೆಗೂ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಸೀಸನ್ 12ರ ಕೊನೆಯ ನಾಮಿನೇಷನ್‌ನಲ್ಲಿಯೂ ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: BBK 12: ರಾಶಿಕಾ ಶೆಟ್ಟಿಗೆ ಒರಗಿಕೊಳ್ಳೋಕೆ ರಘು ತೊಡೆ, ಎದೆ ಬೇಕು: ಎಡವಟ್ಟು ಮಾಡ್ಕೊಂಡ Ashwini Gowda
ಧನುಷ್ ಬಿಟ್ಟು ಎಲ್ಲರೂ ನಾಮಿನೇಟ್
ಈ ವಾರ ಮನೆಯಿಂದ ಹೊರಗೆ ಹೋಗಲು ಕ್ಯಾಪ್ಟನ್ ಧನುಷ್ ಹೊರತುಪಡಿಸಿ ಉಳಿದೆಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ. ಕೊನೆಯ ವಾರದ ನಾಮಿನೇಟ್ ಆಗಿರುವ ಕಾರಣ ಮನೆಯಲ್ಲಿ ಮಾತಿನ ಯುದ್ಧವೇ ನಡೆದಿತ್ತು.
ಇದನ್ನೂ ಓದಿ: BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

